ಕೊರೊನಾಗೆ ಹೆದರಿ ಪರೀಕ್ಷೆ ಬಿಟ್ಟಿದ್ದ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆದ ಕಥೆ
ಧಾರವಾಡ: ಕೊರೊನಾ ಇಡೀ ವಿಶ್ವವನ್ನೇ ಹೈರಾಣಾಗಿಸಿದೆ. ಅದಕ್ಕೆ ಮಕ್ಕಳು, ಹಿರಿಯರು, ಮಹಿಳೆಯರು, ಪುರುಷರು ಅನ್ನೋ ಬೇಧಭಾವವೇ ಇಲ್ಲ. ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಇಡೀ ವಿಶ್ವವೇ ಈ ಮಹಾಮಾರಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿವೆ. ಇಂಥ ವೇಳೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಏನೇ ಆಗಲಿ SSLC ಪರೀಕ್ಷೆ ನಡೆಸಿಯೇ ತೀರೋದಾಗಿ ಪಣ ತೊಟ್ಟಿತ್ತು. ಅದರಂತೆ ಈಗಾಗಲೇ ಪರೀಕ್ಷೆ ಕೂಡ ಆರಂಭವಾಗಿದೆ. ಎಲ್ಲೆಡೆ ವಿದ್ಯಾರ್ಥಿಗಳು ಭಯದ ನಡುವೆಯೇ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಧಾರವಾಡದ ವಿದ್ಯಾರ್ಥಿನಿಯೊಬ್ಬರು ಕೊರೊನಾ ಭಯದಿಂದ ಪರೀಕ್ಷೆ ಬರೆಯೋದಕ್ಕೆ […]
ಧಾರವಾಡ: ಕೊರೊನಾ ಇಡೀ ವಿಶ್ವವನ್ನೇ ಹೈರಾಣಾಗಿಸಿದೆ. ಅದಕ್ಕೆ ಮಕ್ಕಳು, ಹಿರಿಯರು, ಮಹಿಳೆಯರು, ಪುರುಷರು ಅನ್ನೋ ಬೇಧಭಾವವೇ ಇಲ್ಲ. ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಇಡೀ ವಿಶ್ವವೇ ಈ ಮಹಾಮಾರಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿವೆ. ಇಂಥ ವೇಳೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಏನೇ ಆಗಲಿ SSLC ಪರೀಕ್ಷೆ ನಡೆಸಿಯೇ ತೀರೋದಾಗಿ ಪಣ ತೊಟ್ಟಿತ್ತು. ಅದರಂತೆ ಈಗಾಗಲೇ ಪರೀಕ್ಷೆ ಕೂಡ ಆರಂಭವಾಗಿದೆ.
ಎಲ್ಲೆಡೆ ವಿದ್ಯಾರ್ಥಿಗಳು ಭಯದ ನಡುವೆಯೇ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಧಾರವಾಡದ ವಿದ್ಯಾರ್ಥಿನಿಯೊಬ್ಬರು ಕೊರೊನಾ ಭಯದಿಂದ ಪರೀಕ್ಷೆ ಬರೆಯೋದಕ್ಕೆ ನಿರಾಕರಿಸಿದ್ದಾರೆ. ಜಿಲ್ಲೆಯ ಅಳ್ನಾವರ ತಾಲೂಕಿನ ಕಾಶೆನಟ್ಟಿ ಗ್ರಾಮದ ಲಕ್ಷ್ಮಿ ಕುಳೆ ಎಂಬ ವಿದ್ಯಾರ್ಥಿನಿಗೆ ಕೊರೊನಾ ಅದೆಷ್ಟು ಭಯ ತಂದಿದೆ ಅನ್ನೋದಕ್ಕೆ ಇದು ಸಾಕ್ಷಿ. ಯಾರು ಎಷ್ಟೇ ಹೇಳಿದರೂ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಲು ಆಕೆ ಸಿದ್ಧರಾಗಲೇ ಇಲ್ಲ. ಹೀಗಾಗಿ ಜೂನ್ 25 ರಂದು ನಡೆದ ಮೊದಲನೇ ಪ್ರಶ್ನೆ ಪತ್ರಿಕೆಗೆ ಪರೀಕ್ಷೆಯನ್ನು ಬರೆಯಲೇ ಇಲ್ಲ.
ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಡಿಡಿಪಿಐ ಎಂ.ಎಲ್.ಹಂಚಾಟೆ ತಮ್ಮ ಅಧಿಕಾರಿಗಳನ್ನು ಆಕೆಯ ಮನೆಗೆ ಕಳಿಸಿಕೊಟ್ಟಿದ್ದಾರೆ. ವಿದ್ಯಾರ್ಥಿನಿಯ ಮನೆಗೆ ಹೋದ ಅಧಿಕಾರಿಗಳು ಹಾಗೂ ಪೊಲೀಸರು ಆಕೆಯ ಆತಂಕವನ್ನು ನಿವಾರಿಸಿದ್ದಾರೆ. ಕೊನೆಗೆ ಇಂದು ನಡೆದ ಪರೀಕ್ಷೆಗೆ ಆಕೆ ಹಾಜರಾಗಿ ನಿರ್ಭಯದಿಂದ ಪರೀಕ್ಷೆ ಬರೆದಿದ್ದಾರೆ. ಅಲ್ಲದೇ ಮುಂದಿನ ಎಲ್ಲ ಪರೀಕ್ಷೆಗಳನ್ನು ಬರೆಯೋದಾಗಿ ಹೇಳಿದ್ದಾರೆ.