ಮೊಟ್ಟಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಯಶಸ್ವಿ
ಸೊಂಟದ ಭಾಗದಲ್ಲಿ ಎಲುಬು ಸವಕಳಿ ಆಗಿದ್ದರೆ ಬಹುತೇಕ ವೈದ್ಯರು ಹಿಪ್ ಜಾಯಿಂಟ್ ರೀಪ್ಲೇಸ್ ಮೆಂಟ್ಗೆ ಸಲಹೆ ನೀಡುತ್ತಾರೆ. ಆದರೆ ಅದು ಶಾಶ್ವತ ಪರಿಹಾರವಾಗುವುದಿಲ್ಲ. ಸ್ಟೆಮ್ ಸೆಲ್ಸ್ ಥೆರಪಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಮೊದಲ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆ ವೈದ್ಯರು, 39 ವರ್ಷದ ವ್ಯಕ್ತಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸಾಧನೆ ಮಾಡಿದ್ದಾರೆ. ಈ ಹಿಂದೆ ಹಲವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದ ಬಾಲಾಜಿ ಆಸ್ಪತ್ರೆ ವೈದ್ಯರು ವೈದಕೀಯ ಲೋಕದಲ್ಲಿ ಮತ್ತೊಂದು ಯಶಸ್ವಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಸೊಂಟದ ಭಾಗದಲ್ಲಿ ಪೆಟ್ಟು ಬಿದ್ದು ಸರಿಯಾಗಿ ನಡೆದಾಡಲು ಸಾಧ್ಯವಾಗದೇ ನೋವು ಅನುಭವಿಸುತ್ತಿದ್ದ ಗದಗ ಜಿಲ್ಲೆಯ ವಿನೋದ ಬಿಮಲ್ (39) ವ್ಯಕ್ತಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಸಹಾಯದೊಂದಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಶಸ್ತ್ರಚಿಕಿತ್ಸೆ ನಡೆಸಿ ಸಂಪೂರ್ಣ ಗುಣಪಡಿಸಲಾಗಿದೆ. ಆಸ್ಪತ್ರೆಯ ಎಲುಬು ಕೀಲು ಶಸ್ತ್ರ ಚಿಕಿತ್ಸಕ ತಜ್ಞ ಡಾ.ಹರಿಕೃಷ್ಣ ಅವರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಶಸ್ತ್ರಚಿಕಿತ್ಸೆ ಎಂದು ಬಾಲಾಜಿ ಆಸ್ಪತ್ರೆ ಮುಖ್ಯಸ್ಥ ಡಾ.ಕ್ರಾಂತಿಕಿರಣ ಮಾಹಿತಿ ನೀಡಿದ್ದಾರೆ.
ವಿನೋದ ಬಿಮಲ್ ಸೊಂಟ್ ನೋವು ತಾಳಲಾರದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪರೀಕ್ಷೆಗೆ ಒಳಪಡಿಸಿದಾಗ ಸೊಂಟದ ಭಾಗದಲ್ಲಿ ಡ್ಯಾಮೇಜ್ ಆಗಿತ್ತು. ನಂತರ ಅವರ ಸೊಂಟದ ಫ್ಲೂವೀಡ್ನ ತೆಗೆದು ಲ್ಯಾಬಿಗೆ ಕಳಿಸಿ ಅಲ್ಲಿ ಫ್ಲೂವೀಡ್ನಲ್ಲಿರುವ ಸೆಲ್ಸ್ನ ಬೆಳೆಸಿ ಅದನ್ನು ಮರು ರೋಗಿಗೆ ಇಂಜೆಕ್ಟ್ ಮಾಡಿದಲ್ಲದೇ, ರೋಗಿಯ ಎಲುಬನ್ನು ಸಂಗ್ರಹಿಸಿ ಅದರಿಂದ ಜಲ್ ಮಾದರಿ ತಯಾರಿಸಿ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಡ್ಯಾಮೇಜ್ ಆದ ಸೊಂಟದ ಮೇಲೆ ಲೇಪನ ಮಾಡುವ ಮೂಲಕ ಯಶಸ್ವಿ ಸ್ಟೆನ್ ಸೆಲ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆ ಪಡೆದ ರೋಗಿ ಸಂಪೂರ್ಣ ಗುಣಮುಖನಾಗಿದ್ದಾರೆ. ಎಲ್ಲರಂತೆ ಓಡಾಡುವ ಸಾಮರ್ಥ್ಯವನ್ನು ವ್ಯಕ್ತಿ ಪಡೆದುಕೊಂಡಿದ್ದಾರೆ.
ಸೊಂಟದ ಭಾಗದಲ್ಲಿ ಎಲುಬು ಸವಕಳಿ ಆಗಿದ್ದರೆ ಬಹುತೇಕ ವೈದ್ಯರು ಹಿಪ್ ಜಾಯಿಂಟ್ ರೀಪ್ಲೇಸ್ ಮೆಂಟ್ಗೆ ಸಲಹೆ ನೀಡುತ್ತಾರೆ. ಆದರೆ ಅದು ಶಾಶ್ವತ ಪರಿಹಾರವಾಗುವುದಿಲ್ಲ. ಸ್ಟೆಮ್ ಸೆಲ್ಸ್ ಥೆರಪಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಮೊದಲ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯ ಚಿಕಿತ್ಸೆಗೆ ಹೆಚ್ಚು ಒತ್ತು ಕೊಡಲಿದ್ದೇವೆ ಎಂದು ಡಾ.ಹರಿಕೃಷ್ಣ ತಿಳಿಸಿದ್ದಾರೆ.
ವರದಿ: ದತ್ತಾತ್ರೇಯ ಪಾಟೀಲ್
ಇದನ್ನೂ ಓದಿ
ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್