ಬುದ್ಧಿಜೀವಿಗಳಿಗೆ ಬೆದರಿಕೆ ಪತ್ರ ವಿಚಾರ; ಅವರಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದ ಪ್ರಮೋದ್ ಮುತಾಲಿಕ್
ಹುಬ್ಬಳ್ಳಿಯಲ್ಲಿ ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ‘ಯಾವುದೇ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಟ್ಟು, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಎಂದರು.
ಹುಬ್ಬಳ್ಳಿ, ಆ.17: ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಪತ್ರ ವಿಚಾರ ‘ಬೆದರಿಕೆ ಪತ್ರ ಬಂದಿರುವ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡುವ ಅಗತ್ಯವಿಲ್ಲವೆಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇವರಿಗೆ ರಕ್ಷಣೆ ನೆನಪಾಗುತ್ತೆ. ಬುದ್ಧಿಜೀವಿಗಳು ಹಸಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಬುದ್ಧಿಜೀವಿಗಳು ರಕ್ಷಣೆ ಕೇಳಿದ್ದಾರೆ
ಸರ್ಕಾರಿ ಸೌಲಭ್ಯ ಪಡೆಯಲು ಬುದ್ಧಿಜೀವಿಗಳು ರಕ್ಷಣೆ ಕೇಳಿದ್ದಾರೆ. ಇದು ಬುದ್ದಿಜೀವಿಗಳ ನಿರ್ಲಜ್ಜತನ. ಯಾವುದೇ ಬುದ್ದಿ ಜೀವಿಗಳಿಗೆ ರಕ್ಷಣೆ ಕೊಡೋ ಅವಶ್ಯಕತೆ ಇಲ್ಲ. ಅವರಿಗೆ ಯಾವದೇ ಭಯ ಇಲ್ಲ. ಬುದ್ದಿಜೀವಿಗಳು ಅಂದರೆ, ಭಯೋತ್ಪಾದನೆಗೆ, ಹಿಂದೂತ್ವ ವಿರೋಧ ಮತ್ತು ಮತಾಂತರಕ್ಕೆ ಸಹಾಯ ಮಾಡುವುದು. ಭ್ರಷ್ಟಾಚಾರದಲ್ಲಿ ನಮಗೂ ಪಾಲು ಇರಲಿ ಎನ್ನುವ ಕಾರಣಕ್ಕೆ ರಕ್ಷಣೆ ಕೇಳುತ್ತಿದ್ದಾರೆ ಎಂದು ಮುತಾಲಿಕ್ ಕೀಡಿಕಾರಿದ್ದಾರೆ.
ಇದನ್ನೂ ಓದಿ:ಕೈಯಲ್ಲಿ ಗುಂಡು-ತುಂಡು, ಸಿಗರೇಟ್ ಇದ್ದರೆ ಮಾತ್ರ ಬುದ್ದಿಜೀವಿಗಳಾ? ಪಠ್ಯ ಪರಿಷ್ಕರಣೆ ವಿರುದ್ಧ ಸಿಟಿ ರವಿ ವಾಕ್ಪ್ರಹಾರ
ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸ್ತೀವಿ
ಇನ್ನು ಇದೇ ವೇಳೆ ಮಾತನಾಡಿದ ಅವರು ‘ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸ್ತೀವಿ ಎಂದರು. ಈದ್ಗಾ ಮೈದಾನ, ಪಾಕಿಸ್ತಾನ ಅಥವಾ ಅಘ್ಗಾನಿಸ್ತಾನದಲಿಲ್ಲ. ಭಾರತದಲ್ಲಿರುವುದು ಇಲ್ಲಿ ಗಣೇಶನನ್ನು ಕೂರಿಸಲು ಯಾರು ವಿರೋಧ ಮಾಡುತ್ತಾರೆ ನೋಡುತ್ತೇವೆ. ನಮ್ಮ ದೇಶದಲ್ಲಿ ಗಣೇಶನನ್ನು ಕೂರಿಸಲು ವಿರೋಧ ಮಾಡಲಾಗದು. ನಾವು ಇಲ್ಲಿ ಅಲ್ಲಾಹ್ನನ್ನು ಮತ್ತು ಏಸು ಕ್ರಿಸ್ತನ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದ್ರೆ, ಗಣೇಶನನ್ನು ಕೂರಿಸಲು ಹೇಗೆ ವಿರೋಧ ಮಾಡುವಿರಿ? ಸಹನೆ ಮೀರಿ ಹೋಗಿದೆ. ಶಾಸ್ತ್ರೋತ್ತವಾಗಿ ಎಷ್ಟು ದಿನ ಗಣೇಶ ಕೂರಿಸಬೇಕು ಅಂತ ಇದೆಯೋ ಅಷ್ಟು ದಿನ ಕೂರಿಸುತ್ತೇವೆ. ಈ ಬಗ್ಗೆ ನಾಳೆನೇ ಪಾಲಿಕೆಗೆ ಮನವಿ ಸಲ್ಲಿಸುತ್ತೇವೆ ಎಂದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Thu, 17 August 23