ಪೇಡಾ ನಗರಿಗೆ ಗಂಟು ಮೂಟೆ ಕಟ್ಕೊಂಡು ಬಂದು ತಗ್ಲಾಕ್ಕೊಂಡ ವ್ಯಾಪಾರಸ್ಥರು!

ಧಾರವಾಡ: ಇರೋ ಬರೋ ವಸ್ತುಗಳನ್ನೆಲ್ಲಾ ತುಂಬ್ಕೊಂಡಿದ್ದಾರೆ. ಲಾರಿಗಳು ಸೈಲೆಂಟಾಗೇ ನಿಂತಲ್ಲೇ ನಿಂತಿವೆ. ಆವರಣದಲ್ಲಿರೋ ಗೇಟ್​​ಗೊಂದು ಬೀಗ ಬಿದ್ದಿದೆ. ಎಲ್ಲೂ ಹೋಗೋಕು ಆಗದೆ ಜೈಲುಹಕ್ಕಿಗಳಾಗಿದ್ದಾರೆ. ಮಕ್ಕಳು ಮರಿ ಕಟ್ಕೊಂಡು ಬೀದಿಗೆ ಬಂದಿದ್ದಾರೆ. ಇದ್ಯಾಕಪ್ಪಾ ಲೋಡ್​ ಆಗಿರೋ ಲಾರಿ ಹೀಗ್ಯಾಕೆ ನಿಂತಿವೆ. ಡೀಸೆಲ್ ಏನಾದ್ರೂ ಖಾಲಿ ಆಗಿದ್ಯಾ? ಲಾರಿಗಳೇನೂ ಹಾಳಾಗಿದ್ಯಾ ಅಂದ್ಕೊಂಡ್ರಾ? ನೋ ವೇ ಚಾನ್ಸೆ ಇಲ್ಲ. ಅಂದ್ಹಾಗೆ ಇವರ ಈ ಪರಿಸ್ಥಿತಿಗೆ ಕಾರಣ ಧಾರವಾಡದಲ್ಲಿ ಕಳೆದ 8 ದಿನಗಳ ಹಿಂದಷ್ಟೇ ನಡೆದ ಅದ್ಧೂರಿ ಕುಸ್ತಿಹಬ್ಬಕ್ಕೆ ಬಂದು ತಗ್ಲಾಕೊಂಡಿರೋದು. ಗುತ್ತಿಗೆದಾರರು […]

ಪೇಡಾ ನಗರಿಗೆ ಗಂಟು ಮೂಟೆ ಕಟ್ಕೊಂಡು ಬಂದು ತಗ್ಲಾಕ್ಕೊಂಡ ವ್ಯಾಪಾರಸ್ಥರು!
Follow us
ಸಾಧು ಶ್ರೀನಾಥ್​
|

Updated on:Mar 04, 2020 | 8:07 PM

ಧಾರವಾಡ: ಇರೋ ಬರೋ ವಸ್ತುಗಳನ್ನೆಲ್ಲಾ ತುಂಬ್ಕೊಂಡಿದ್ದಾರೆ. ಲಾರಿಗಳು ಸೈಲೆಂಟಾಗೇ ನಿಂತಲ್ಲೇ ನಿಂತಿವೆ. ಆವರಣದಲ್ಲಿರೋ ಗೇಟ್​​ಗೊಂದು ಬೀಗ ಬಿದ್ದಿದೆ. ಎಲ್ಲೂ ಹೋಗೋಕು ಆಗದೆ ಜೈಲುಹಕ್ಕಿಗಳಾಗಿದ್ದಾರೆ. ಮಕ್ಕಳು ಮರಿ ಕಟ್ಕೊಂಡು ಬೀದಿಗೆ ಬಂದಿದ್ದಾರೆ.

ಇದ್ಯಾಕಪ್ಪಾ ಲೋಡ್​ ಆಗಿರೋ ಲಾರಿ ಹೀಗ್ಯಾಕೆ ನಿಂತಿವೆ. ಡೀಸೆಲ್ ಏನಾದ್ರೂ ಖಾಲಿ ಆಗಿದ್ಯಾ? ಲಾರಿಗಳೇನೂ ಹಾಳಾಗಿದ್ಯಾ ಅಂದ್ಕೊಂಡ್ರಾ? ನೋ ವೇ ಚಾನ್ಸೆ ಇಲ್ಲ. ಅಂದ್ಹಾಗೆ ಇವರ ಈ ಪರಿಸ್ಥಿತಿಗೆ ಕಾರಣ ಧಾರವಾಡದಲ್ಲಿ ಕಳೆದ 8 ದಿನಗಳ ಹಿಂದಷ್ಟೇ ನಡೆದ ಅದ್ಧೂರಿ ಕುಸ್ತಿಹಬ್ಬಕ್ಕೆ ಬಂದು ತಗ್ಲಾಕೊಂಡಿರೋದು. ಗುತ್ತಿಗೆದಾರರು ಬಾಡಿಗೆ ನೀಡದಕ್ಕೆ ವ್ಯಾಪಾರಿಗಳನ್ನ ಜಿಲ್ಲಾಡಳಿತ ಕೂಡಿ ಹಾಕಿರೋದು.

ಗುತ್ತಿಗೆದಾರರ ಎಡವಟ್ಟಿಗೆ ವ್ಯಾಪಾರಸ್ಥರು ಲಾಕ್! ಕಳೆದ ಹಲವು ದಿನಗಳ ಹಿಂದಷ್ಟೇ ಧಾರವಾಡದಲ್ಲಿ ಮೊದಲ ಬಾರಿಗೆ ಕುಸ್ತಿ ಹಬ್ಬ ಆಯೋಜಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ರು. ಕುಸ್ತಿ ಹಬ್ಬಕ್ಕೆ ರಾಜ್ಯದ ವಿವಿಧೆಡೆಯಿಂದ ಗಂಟು ಮೂಟೆ ಕಟ್ಕೊಂಡು ವ್ಯಾಪಾರಸ್ಥರು ಬಂದಿದ್ರು. ಅಲ್ಲದೇ 4 ದಿನಗಳ ಕಾಲ ಧಾರವಾಡದ ಜನತೆಯನ್ನ ರಂಜಿಸೋ ಕೆಲಸ ಮಾಡಿದ್ರು. ಆದ್ರೆ, ಕಾರ್ಯಕ್ರಮದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಜಿಲ್ಲಾಡಳಿತಕ್ಕೆ 8 ಲಕ್ಷ ರೂಪಾಯಿ ಬಾಡಿಗೆ ನೀಡಿಲ್ವಂತೆ. ಹೀಗಾಗಿ ಕಳೆದ 8 ದಿನಗಳಿಂದ ಲಾರಿ ಚಾಲಕರು, ಮಳಿಗೆ ಮಾಲೀಕರನ್ನ ಜಿಲ್ಲಾಡಳಿತ ಕೂಡಿ ಹಾಕಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳ ಆಟಕ್ಕೆ ವ್ಯಾಪಾರಿಗಳು ಕಂಗಾಲು: ಇನ್ನು, ರಾಜ್ಯಮಟ್ಟದ ನೌಕರರ ಕ್ರೀಡಾಕೂಟ ಇದ್ದಿದ್ರಿಂದ ಕ್ರೀಡಾಂಗಣದಲ್ಲಿದ್ದ ಮಳಿಗೆಗಳನ್ನ ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದ್ರೀಗ ಅಧಿಕಾರಿಗಳು ಹೊಸ ಕ್ಯಾತೆ ತೆಗೆದಿದ್ದು ಹಣ ನೀಡೋವರೆಗೂ ಲಾರಿಗಳನ್ನ ಹೊರಗೆ ಹೋಗೋಕೆ ಬಿಡಲ್ಲ ಅಂತಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ಕುಸ್ತಿಹಬ್ಬದ ಜವಾಬ್ದಾರಿ ವಹಿಸ್ಕೊಂಡಿದ್ದ ಆಹಾರ ಇಲಾಖೆ ಜಂಟಿ ನಿರ್ದೇಶಕ ಅವರನ್ನ ಕೇಳಿದ್ರೆ ಈ ಹಣಕ್ಕೂ ನಮಗೂ ಸಂಬಂಧವೇ ಇಲ್ಲ ಅಂತಿದ್ದಾರಂತೆ. ಅಧಿಕಾರಿಗಳ ಆಟಕ್ಕೆ ಸಿಲುಕಿ ಲಾರಿ ಚಾಲಕರು ಹಾಗೂ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ಕೂಸು ಬಡವಾಯ್ತು ಅನ್ನೋ ಹಾಗಾಗಿದೆ ಇವರ ಪರಿಸ್ಥಿತಿ.

Published On - 8:06 pm, Wed, 4 March 20