ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಎಸ್ಆರ್ ಮೂಲಕ ಕಂಪ್ಯೂಟರ್ ಹಾಗೂ ಪುಸ್ತಕಗಳ ವಿತರಣೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

| Updated By: ಸಾಧು ಶ್ರೀನಾಥ್​

Updated on: Dec 12, 2022 | 4:06 PM

Pralhad Joshi: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು 15 ಲ್ಯಾಪ್ ಟಾಪ್ ಮತ್ತು 10 ಡೆಸ್ಕ್ ಟಾಪ್ ಗಳನ್ನು ಸಹ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಹಸ್ತಾಂತರ ಮಾಡಿದರು‌.

ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಎಸ್ಆರ್ ಮೂಲಕ ಕಂಪ್ಯೂಟರ್ ಹಾಗೂ ಪುಸ್ತಕಗಳ ವಿತರಣೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕಂಪ್ಯೂಟರ್ ಹಾಗೂ ಪುಸ್ತಕಗಳ ವಿತರಣೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us on

ಹುಬ್ಬಳ್ಳಿ: ಸಾಂಸ್ಥೀಯ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್ Corporate Social responsibility -CSR) ಕಾರ್ಯಕ್ರಮದ ಅಡಿಯಲ್ಲಿ ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (hubballi government schools) ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಕಂಪ್ಯೂಟರ್ (computers) ಮತ್ತು ಗ್ರಂಥಾಲಯ ಪುಸ್ತಕಗಳನ್ನು (computers) ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ವಿತರಣೆ ಮಾಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ‌ಪ್ರತಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ತಲಾ 500ರಂತೆ ಒಟ್ಟು 10,000 ಪುಸ್ತಕಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಿತರಣೆ ಮಾಡಿದರು. ಇದೇ ವೇಳೆ 15 ಲ್ಯಾಪ್ ಟಾಪ್ ಮತ್ತು 10 ಡೆಸ್ಕ್ ಟಾಪ್ ಗಳನ್ನು ಸಹ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕೇಂದ್ರ ಸಚಿವರು ಹಸ್ತಾಂತರ ಮಾಡಿದರು‌.

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಯೋಜನೆಯಿಂದ ದೊರೆಯಲ್ಪಡುವ ಸೌಲಭ್ಯಗಳು ಹಾಗೂ ಸಿಎಸ್ಆರ್ ಕಾರ್ಯಕ್ರಮಗಳ ಅಡಿಯಲ್ಲಿ ಸಿಗುವ ಸಹಾಯವನ್ನು ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊರಕಿಸಿಕೊಡುತ್ತಿರುವ ಪ್ರಲ್ಹಾದ ಜೋಶಿಯವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ‌. ಅದರಲ್ಲೂ ವಿದ್ಯಾರ್ಥಿಗಳ ವಿದ್ಯೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಲು ಕೇಂದ್ರ ಸಚಿವರು ವಹಿಸಿರುವ ಕಾಳಜಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಶಾಲೆಗಳಿಗೆ 50 ಶಾಲಾ ಕೊಠಡಿ ಮಂಜೂರು – ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಧಾರವಾಡ ಲೋಕಸಭಾ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಂಗವಾಗಿ 50 ಹೆಚ್ಚುವರಿ ಶಾಲಾ ಕೊಠಡಿಗಳು  ಮಂಜೂರಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ಇತ್ತೀಚೆಗೆ ತಿಳಿಸಿದ್ದಾರೆ. ಸಿಎಸ್.ಆರ್ ಅಡಿ ಹೆಚ್ಚುವರಿ ಶಾಲಾ ಕೊಠಡಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತಾವನೆ ಸಲ್ಲಿಸಿದ್ದರು.

ವಿವಿಧ ಪ್ರಾಥಮಿಕ ಶಾಲೆಗಳಿಗೆ 50 ಹೆಚ್ಚುವರಿ ಶಾಲಾ ಕೊಠಡಿಗಳನ್ನು ವಿವೇಕ ಶಾಲೆ ಯೋಜನೆಯಡಿ ರಾಜ್ಯ ಸರ್ಕಾರ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 13.90 ಲಕ್ಷ ರೂ. ಮತ್ತು ಪ್ರೌಢ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 16.40 ಲಕ್ಷ ರೂ ಕ್ರಿಯಾ ಯೋಜನೆಯಲ್ಲಿ ನಮೂದಿಸಲಾಗಿದ್ದು, ಅದರಂತೆ ಅನುದಾನವೂ ಬಿಡುಗಡೆಯಾಗಿದೆ ಎಂದು ಪ್ರಕಣೆಯಲ್ಲಿ ಹೇಳಲಾಗಿದೆ.

ಮಳೆಯಿಂದ ಶಿಥಿಲಗೊಂಡ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಶಾಲೆಗಳಿಗೆ ಕೊಠಡಿಯನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 4 ಪ್ರೌಢ ಶಾಲೆ ಹಾಗೂ 27 ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಕುಂದಗೋಳ, ತಾಲೂಕಿನ 5, ಹುಬ್ಬಳ್ಳಿ ಗ್ರಾಮೀಣ 6, ಮತ್ತು ಹುಬ್ಬಳ್ಳಿ ಶಹರದಲ್ಲಿ 5 ಶಾಲಾ ಕೊಠಡಿಗಳನ್ನು ಸೇರಿದಂತೆ 16 ಶಾಲಾ ಕೊಠಡಿಗಳನ್ನು 229 ಲಕ್ಷ ರೂ ವೆಚ್ಚದಲ್ಲಿ ಮಂಜೂರು ಮಾಡಿದ್ದು, ಧಾರವಾಡ ಗ್ರಾಮೀಣ 8, ಕಲಘಟಗಿ 7, ನವಲಗುಂದ 4 ಹೀಗೆ ಒಟ್ಟು 26 ಶಾಲಾ ಕೊಠಡಿಗಳನ್ನು 375 ಲಕ್ಷರೂ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ.

ಜಿಲ್ಲೆಯಲ್ಲಿ ಸಾಕಷ್ಟು ಶಾಲೆಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿತ್ತು. ಈ ಯೋಜನೆಯಿಂದ ಕೊಠಡಿ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಸರಕಾರಿ ಶಾಲೆಗಳಿಗೆ ನೂತನ ಕೊಠಡಿ ಭಾಗ್ಯ ಲಭಿಸಲಿದೆ. ವಿವೇಕ ಯೋಜನೆಯಡಿ ಜಿಲ್ಲೆಯಲ್ಲಿ 50 ಕೊಠಡಿಗಳು ನಿರ್ಮಾಣವಾಗಲಿವೆ. ಈಗಾಗಲೇ ಅನುಮೋದನೆಗೊಂಡು ಕಾಮಗಾರಿಗೂ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ಮುಕ್ತವಾಗಲಿವೆ ಎಂದು ಸಚಿವ ಜೋಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಸಿ.ಎಸ್.ಆರ್. ಅಡಿ 300 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 150 ಕೊಠಡಿ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಿ.ಇ.ಓ. ಧಾರವಾಡ ಎಂ.ಓ.ಯು. ಮಾಡಿಕೊಂಡಿದ್ದು, ಟೆಂಡರ್ ಹಂತದಲ್ಲಿದೆ. ಇನ್ನೂ 150 ಕೊಠಡಿಗಳ ಪ್ರಸ್ತಾವನೆಗಳು ಅನುಮತಿ ಹಂತದಲ್ಲಿವೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಅವಶ್ಯವಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಎಲ್ಲ ರೀತಿಯಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.

Also Read:

ಕರ್ನಾಟಕದಲ್ಲಿ ಕನ್ನಡದಲ್ಲೇ ಮಾತನಾಡಬೇಕು, ಕನ್ನಡದಲ್ಲೇ ವ್ಯವಹರಿಸಬೇಕು: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ