ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಟ್ವೀಟ್ (Twitter) ಮೂಲಕ ಸಿದ್ದು ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯನವರೇ (Siddaramaiah) ರಾಜ್ಯದ ಜನತೆಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ. ಕೆಂಪೇಗೌಡರನ್ನು ಆದರ್ಶವಾಗಿಟ್ಟುಕೊಂಡು ಅಭಿವೃದ್ಧಿಗಾಗಿ ಶ್ರಮ ಪಡಲಾಗಿದೆ. ನಾಡಿನ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಮೋದಿ ಶ್ರಮಿಸುತ್ತಿದ್ದಾರೆ. ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ ಉದ್ಘಾಟಿಸಿದ್ದೇವೆ. ಮೋದಿಯವರ ಕೈಯಿಂದಲೇ ಯೋಜನೆಗಳನ್ನು ಉದ್ಘಾಟಿಸಿದ್ದೇವೆ. ಅಧಿಕಾರ ಕೈಯಲ್ಲಿಲ್ಲ ಎಂಬ ಹತಾಶೆಯಿಂದ, ಪ್ರಶ್ನಿಸುವ ಸಲುವಾಗಿಯೇ ರಾಜ್ಯದ ಜನತೆಗೆ ನೀವು ಸುಳ್ಳು ಸುದ್ದಿ ಹಬ್ಬಿಸಬೇಡಿ. ಯಾಕೆಂದರೆ ನೀವು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಎಂದು ಸುಳ್ಳು ಸುದ್ದಿಯ ಸಿದ್ದರಾಮಯ್ಯ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಜೋಶಿ ಟ್ವೀಟ್ ಸಾರಾಂಶ ಹೀಗಿದೆ:
ಸುಳ್ಳು ಸುದ್ದಿಯ ಸಿದ್ದರಾಮಯ್ಯ ನವರೇ, ಕೆಂಪೇಗೌಡರನ್ನು ಆದರ್ಶವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀಯ ಕೈಯಿಂದಲೇ ಇಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ರಾಜ್ಯದಲ್ಲಿ ಉದ್ಘಾಟನೆ ಮಾಡಿದ್ದೇವೆ. ಅಧಿಕಾರ ಕೈಯಲಿಲ್ಲ ಎಂಬ ಹತಾಶೆಯಿಂದ ಪ್ರಶ್ನಿಸುವ ಸಲುವಾಗಿ ರಾಜ್ಯದ ಜನತೆಗೆ ಸುಳ್ಳು ಸುದ್ದಿ ಮುಟ್ಟಿಸಬೇಡಿ
ಯಾಕೆಂದರೆ ನೀವು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು.
ಇವೆಲ್ಲವನ್ನೂ ಅರಗಿಸಿಕೊಳ್ಳಲು ಆಗದ #ಸುಳ್ಳುಸುದ್ದಿ @siddaramaiah ನವರು ಮೊಸರಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ
— Pralhad Joshi (@JoshiPralhad) November 12, 2022
Slew of Projects to benefit the people of Karnataka by the Prime Minister has rattled the Congress who had done very little for development during their regime. @siddaramaiah is desperate to divert attention. https://t.co/gOreGL0kpT
— Pralhad Joshi (@JoshiPralhad) November 12, 2022
ದೇವೇಗೌಡರು ಹಿರಿಯರು, ಅವರ ಬಗ್ಗೆ ಮಾತನಾಡಲ್ಲ:
ಇನ್ನು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಆಹ್ವಾನಿಸಿಲ್ಲ ಅನ್ನೋದು ಸರಿಯಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ವಿಚಾರವಾಗಿ ಸಿಎಂ ಬೊಮ್ಮಾಯಿ, ಸಚಿವರಾದ ಅಶೋಕ್, ಅಶ್ವತ್ಥ್ ನಾರಾಯಣ ಜತೆ ಮಾತನಾಡಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವೇಗೌಡರನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ಯಾಕೆ ಬಂದಿಲ್ಲ ಅನ್ನೋದನ್ನು ವಿಚಾರಿಸುವುದಾಗಿಯೂ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಕುಟುಂಬದವರು ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದವರು. ಆದ್ರೆ ಅವರು ಯಾರೂ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲಿಲ್ಲ, ಹೆಸರೂ ಇಡಲಿಲ್ಲ. ಕುಮಾರಸ್ವಾಮಿ ಕುಟುಂಬಕ್ಕೆ ಕೆಂಪೇಗೌಡರ ನೆನಪು ಆಗ ಆಗಲಿಲ್ಲ. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆ ಕಿಚ್ಚಿನಿಂದ ಮಾತಾಡ್ತೀದಾರೆ ಎಂದ ಜೋಶಿ, ತಾವು ಮಾಡಲಾರದ್ದು ಬಿಜೆಪಿ ಮಾಡಿದೆ ಎಂದು ಹೊಟ್ಟೆಕಿಚ್ಚಿನಿಂದ ಮಾತಾಡ್ತಿದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು. ಇನ್ನು, ನಾನು ದೇವೇಗೌಡರ ಬಗ್ಗೆ ಮಾತನಾಡಲ್ಲ, ಅವರು ಹಿರಿಯರು ಎಂದು ಹುಬ್ಬಳ್ಳಿಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಸೂಕ್ಷ್ಮವಾಗಿ ಹೇಳಿದರು.
Published On - 2:12 pm, Sat, 12 November 22