AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ದೂರಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದ ಜಿಲ್ಲಾ ನ್ಯಾಯಾಲಯ

ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಗಂಡ ಹೆಂಡತಿ ಒಂದೊಂದು ಕಡೆಯಾಗಿದ್ದರೆ ಮಕ್ಕಳು ಮತ್ತೊಂದು ಕಡೆ ಉಳಿದಿದ್ದರು. ಅಂತಹ ಪ್ರಕರಣಗಳನ್ನ ಸುಖಾಂತ್ಯ ಮಾಡುವ ಮೂಲಕ ಧಾರವಾಡ ಜಿಲ್ಲಾ ನ್ಯಾಯಾಲಯವು ಬೇರಾಗಿದ್ದ ದಂಪತಿಗಳನ್ನು ಮತ್ತೆ ಮಾಡಿದೆ.

ಧಾರವಾಡ: ದೂರಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದ ಜಿಲ್ಲಾ ನ್ಯಾಯಾಲಯ
ದೂರಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದ ಧಾರವಾಡ ಜಿಲ್ಲಾ ನ್ಯಾಯಾಲಯ
TV9 Web
| Edited By: Rakesh Nayak Manchi|

Updated on:Nov 13, 2022 | 12:36 PM

Share

ಧಾರವಾಡ: ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಗಂಡ ಹೆಂಡತಿ ಒಂದೊಂದು ಕಡೆಯಾಗಿದ್ದರೆ ಮಕ್ಕಳು ಮತ್ತೊಂದು ಕಡೆ ಉಳಿದಿದ್ದರು. ಆದರೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಲೋಕ ಅದಾಲತ್ ಮೂಲಕ ಅಂತಹ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಮುಂದಾಗಿದೆ. ನ್ಯಾಯಾಧೀಶರಾದ ಕೆ.ಶಾಂತಿ ಹಾಗೂ ನಾಗಶ್ರೀ ನೇತೃತ್ವದಲ್ಲಿ ಶನಿವಾರ ನಡೆದ ಲೋಕ ಅದಾಲತ್​​ನಲ್ಲಿ ಒಟ್ಟು 37 ಪ್ರಕರಣಗಳ ಪೈಕಿ 17 ಪ್ರಕರಣಗಳನ್ನ ಬಗೆಹರಿಸಿ ಬೇರ್ಪಟ್ಟಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.

ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರೇ ಜಗಳ, ವಾದ ಮಾಡಿದ್ದಲ್ಲದೆ ತಮ್ಮ ತಮ್ಮ ವೈಮನಸ್ಸುಗಳನ್ನ ನ್ಯಾಯಾಧೀಶರ ಮುಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳು ತೋಡಿಕೊಳ್ಳುತ್ತಿದ್ದಾರೆ. ವಾದ ಪ್ರತಿವಾದಗಳು, ಪರಸ್ಪರ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಆಲಿಸಿಸಿದ ನ್ಯಾಯಾಧೀಶರು, ದಂಪತಿಗಳಿಗೆ ತಿಳಿ ಹೇಳುವ ಮೂಲಕ ಅವರನ್ನ ಒಂದು ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ ಮೂಲಕ ಬೇರ್ಪಟ್ಟಿದ್ದ 17 ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ.

ಗಂಡ ಹೆಂಡತಿಯನ್ನ ಕರೆಸಿ ಅವರ ಜೊತೆ ಮಾತುಕತೆ ನಡೆಸಿದ ನ್ಯಾಯಾಧೀಶರು ಅವರಿಗೆ ತಿಳಿ ಹೇಳುವ ಕಾರ್ಯವನ್ನ ಮಾಡಿದರು. ಗಂಡನಿಂದ ದೂರ ಉಳಿದಿದ್ದ ಹೆಂಡತಿ ಮಕ್ಕಳನ್ನ ಕರೆಸಿ ಅವರ ಎದುರಲ್ಲೇ ಇಬ್ಬರಿಗೂ ತಿಳುವಳಿಕೆ ಹೇಳಲಾಯಿತು. ಅಸಮಾಧಾನ ಸೇರಿದಂತೆ ಇಬ್ಬರಲ್ಲೂ ಮನಸ್ತಾಪಗಳು ಬಂದಿದ್ದರಿಂದ ಅವರ ಸಂಬಂಧಿಕರ ಎದುರಲ್ಲೇ ಮತ್ತೆ ಅವರನ್ನ ಒಂದು ಮಾಡುವ ಕಾರ್ಯ ನಡೆಯಿತು. ಒಂದಾದ ದಂಪತಿಗಳು ಖುಷಿ ಖುಷಿಯಿಂದಲೇ ನಾವು ಮತ್ತೆ ಯಾವತ್ತೂ ಜಗಳ ಆಡದಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾರೆ.

ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇದರ ಹೊರತಾಗಿಯೂ ಸಣ್ಣಪುಟ್ಟ ವಿಚಾರಗಳಿಗೆ ಮುನಿಸಿಗೊಂಡು ವಿಚ್ಛೇದನ ನೀಡಲು ತೀರ್ಮಾನಿಸಿದವರನ್ನು ಮತ್ತೆ ಒಂದು ಮಾಡುವ ಮೂಲಕ ನ್ಯಾಯಾಧೀಶರು ಮತ್ತೆ ದಂಪತಿಗಳ ಬಾಳಿಗೆ ಹೊಸ ಬೆಳಕನ್ನ ನೀಡಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 13 November 22

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್