ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು; ಮಕ್ಕಳ ಜೊತೆ ರಾಜ್​ಕುಮಾರ್​ ಹಾಡಿಗೆ ಪ್ರಲ್ಹಾದ್ ಜೋಶಿ ಡ್ಯಾನ್ಸ್​

| Updated By: ಸುಷ್ಮಾ ಚಕ್ರೆ

Updated on: Oct 28, 2022 | 9:05 PM

ಶಾಲಾ ಮಕ್ಕಳ ಜತೆ ಸಖತ್​ ಸ್ಟೆಪ್​ ಹಾಕಿದ ಪ್ರಲ್ಹಾದ್ ಜೋಶಿ ಕನ್ನಡಾಂಬೆಗೆ ನೃತ್ಯದ ಮೂಲಕ ಗೌರವ ಸಲ್ಲಿಸಿದ್ದಾರೆ. ಡಾ. ರಾಜ್​ಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಕ್ಕಳ ಜೊತೆ ಸೇರಿ ಪ್ರಲ್ಹಾದ್ ಜೋಶಿ ತಾವೂ ಹಾಡುತ್ತಾ, ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಧಾರವಾಡದ ಕರ್ನಾಟಕ ಕಾಲೇಜ್​ನಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭಾಗಿಯಾಗಿದ್ದಾರೆ. ಈ ವೇಳೆ ಶಾಲಾ ಮಕ್ಕಳ ಜತೆ ಸಖತ್​ ಸ್ಟೆಪ್​ ಹಾಕಿದ ಪ್ರಲ್ಹಾದ್ ಜೋಶಿ ಕನ್ನಡಾಂಬೆಗೆ ನೃತ್ಯದ ಮೂಲಕ ಗೌರವ ಸಲ್ಲಿಸಿದ್ದಾರೆ. ಡಾ. ರಾಜ್​ಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಕ್ಕಳ ಜೊತೆ ಸೇರಿ ಪ್ರಲ್ಹಾದ್ ಜೋಶಿ ತಾವೂ ಹಾಡುತ್ತಾ, ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್ ಆಗಿದೆ. 1177 ಕನ್ನಡ ಶಾಲೆಗಳಿಗೆ ಬಣ್ಣ ಹಚ್ಚಿಸಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ 2 ವರ್ಷದೊಳಗೆ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ 480 ಹೊಸ ಕ್ಲಾಸ್ ರೂಮ್ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.