ಧಾರವಾಡ: ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿ, ಎಸ್​ಡಿಎ ಅಮಾನತು

| Updated By: ವಿವೇಕ ಬಿರಾದಾರ

Updated on: Dec 06, 2022 | 9:44 PM

ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆ ಮತಗಟ್ಟೆ ಅಧಿಕಾರಿಯಾಗಿ ನೇಮಕವಾಗಿದ್ದ ಎಸ್​ಡಿಎ ಅಧಿಕಾರಿಗಳನ್ನು ಅಮಾನತುಗೊಳಿಸಿ ಧಾರವಾಡ ಡಿಸಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ಧಾರವಾಡ: ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿ, ಎಸ್​ಡಿಎ ಅಮಾನತು
ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Follow us on

ಧಾರವಾಡ: ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆ ಮತಗಟ್ಟೆ ಅಧಿಕಾರಿಯಾಗಿ ನೇಮಕವಾಗಿದ್ದ ಸೆಕೆಂಡ್​ ಡಿವಿಷನ್​ ಅಸ್ಟೆಂಟ್​ (SDA) ಅಧಿಕಾರಿಗಳನ್ನು ಅಮಾನತುಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ (DC Gurudatta Hegde) ಆದೇಶ ಹೊರಡಿಸಿದ್ದಾರೆ. ಹು-ಧಾ ಪಶ್ಚಿಮ (Hubballi-Dharwad) ಕ್ಷೇತ್ರದ ಮತಗಟ್ಟೆ ನಂ.105ಕ್ಕೆ ನಿಯೋಜನೆಯಾಗಿದ್ದ ಮತಗಟ್ಟೆ ಅಧಿಕಾರಿ ಸಚಿನ್ ನಾಯಕ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ SDA ಸಚಿನ್ ನಾಯಕ್ ಅವರನ್ನು ಅಮಾನತುಗೊಳಿಸಲಾಗಿದೆ.

ದೆಹಲಿಯ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಲ್ಲಿ ಸರ್ವೆ

ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ಆನಂದನಗರದಲ್ಲಿ  ಆ್ಯಪ್ ಮೂಲಕ ಮತದಾರರ ಸರ್ವೆ ಮಾಡಲಾಗುತ್ತಿತ್ತು. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಆ್ಯಪ್‌ ಮೂಲಕ ಸರ್ವೆ ಮಾಡಿದ ಹಿನ್ನೆಲೆ ವೀರೇಶ್, ಮಂಜುನಾಥ್ ನಿತೇಶ್ ಎಂಬುವರ ವಿರುದ್ಧ ನಿನ್ನೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೆಹಲಿಯ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಲ್ಲಿ ಸರ್ವೆ ಮಾಡಲಾಗಿದೆ. ಕಾಂಗ್ರೆಸ್​ ಮುಖಂಡರು ಸರ್ವೆ ಮಾಡುತ್ತಿದ್ದ ಟೀಮ್ ವಿರುದ್ಧ ದೂರು ನೀಡಿದ್ದರು. ಠಾಣೆಯ ಪೊಲೀಸರು ಹಾಗೂ ದೂರು ಕೊಟ್ಟವರ ಬಳಿ‌ ಮಾಹಿತಿ ಸಂಗ್ರಹಿಸಲಾಗಿದೆ ಎಂದಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಒಂದೇ ಘಟನೆಗೆ ಹಲವು ಎಫ್​​ಐಆರ್​ ರದ್ದು ಕೋರಿ ಸುಪ್ರಿಂ ಕೋರ್ಟ್​​ಗೆ ಅರ್ಜಿ

ಏಜೆನ್ಸಿಯವರು ಮತದಾರ ಮಾಹಿತಿ ಸಂಗ್ರಹ ಮಾಡುತ್ತಾರೆ ಅಂತ ದೂರು ಬಂದಿತ್ತು. ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು ಡಿಲೀಟ್ ಆಗೋ ಚಾನ್ಸ್ ಇದೆ ಎಂದು ದೂರು ನೀಡಿದರು. ಹೀಗಾಗಿ ಎಲೆಕ್ಷನ್ ಕಮೀಷನ್​ನಿಂದ ನಮಗೆ ರಿಪೋರ್ಟ್ ಕೇಳಿದರು. ಈ ಹಿನ್ನೆಲ್ಲೆ ನಾನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೇನೆ. ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದೇನೆ. ಆದಷ್ಟು ಬೇಗ ನಾನು ಮಾಹಿತಿ ಕೊಡುಡುತ್ತೇನೆ ಎಂದು ತಿಳಿಸಿದ್ದರು.

ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಡಿಲೀಟ್ ಆಗಿವೆ

ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಹೆಸರು ಡಿಲೀಟ್ ಆಗಿವೆ. ಅದಕ್ಕೆ ಕಾರಣ ಡುಪ್ಲಿಕೇಟ್ ವೋಟರ್ಸ್. 47 ಸಾವಿರ ಡುಪ್ಲಿಕೇಟ್ ವೋಟರ್ಸ್ ಇದ್ದಾರೆ. ಒಂದೇ ಕ್ಷೇತ್ರ ಮತ್ತೊಂದು ಕ್ಷೇತ್ರದಲ್ಲಿ ಅವರ ಹೆಸರು ಇರಬಹುದು. ಅದನ್ನು ಚೆಕ್‌ಮಾಡಿ 47 ಸಾವಿರ ವೋಟರ್ಸ್ ಡುಪ್ಲಿಕೇಟ್ ಇರೋ ಕಾರಣ ಡಿಲೀಟ್ ಆಗಿವೆ. ಕೆಲವರು ಮೃತರಾದವರ ಹೆಸರು ಡಿಲೀಟ್ ಆಗಿವೆ. ಕೆಲವರು ಸ್ಥಳಾಂತರ ಹೆಸರು ಡಿಲೀಟ್ ಆಗಿವೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ 99 ಸಾವಿರ ಮತಗಳು ಡಿಲೀಟ್ ಆಗಿವೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಡಿಲೀಟ್ ಬಿಜೆಪಿ ನಾಟ್ ವೋಟರ್​ ಐಡಿ’ ಡಿಜಿಟಲ್ ಅಭಿಯಾನ ಆರಂಭಿಸಿದ ಕಾಂಗ್ರೆಸ್

ಇದನ್ನು ನಾವೇ ರಾಜಕೀಯ ಪಕ್ಷಗಳಿಗೆ ನೀಡಿದ್ದೇವೆ. ತಪ್ಪಾಗಿ ಯಾರಾದರೂ ಡಿಲೀಟ್ ಆಗಿದ್ದರೇ ಅಂತವರ ಹೆಸರು ಕೊಡಿ. ನಾವು ಅದನ್ನು ಸರಿ ಮಾಡುತ್ತೇವೆ. ಏಜೆನ್ಸಿಗಳಿಗೆ ಯಾವದೇ ಅನುಮತಿ ನೀಡಿಲ್ಲ. ಏಜೆನ್ಸಿ ಅವರು ಇಂಡಿಪೆಂಡೆಂಟ್ ಆಗಿ ಸರ್ವೆ ಮಾಡುತ್ತಿದ್ದಾರೆ. ನಾವು ವರದಿಯನ್ನು ಎಲೆಕ್ಷನ್ ಕಮೀಷನ್​ಗೆ ಒಪ್ಪಿಸುತ್ತೇವೆ. ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆಯಾದ ಬಳಿಕ ಇವರ ಹೊರತಾಗಿ ಯಾರೇ ಇದ್ದರೂ, ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಏನಿದು ಸರ್ವೆ ಹಿನ್ನೆಲೆ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಹಾಗೂ ಪಶ್ಚಿಮ ಮತದಾರರಿರುವ ಆನಂದ ನಗರದಲ್ಲಿ ಆ್ಯಪ್ ಮೂಲಕ ಮೂವರು ಸರ್ವೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸರ್ವೆ ಮಾಡುತ್ತಿದ್ದವರನ್ನು ಕಾಂಗ್ರೆಸ್ ಮುಖಂಡರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Tue, 6 December 22