ವಾರಾಂತ್ಯದಲ್ಲಿ ಹುಬ್ಬಳ್ಳಿ ಮತ್ತು ಯಶವಂತಪುರ ನಡುವೆ ವಿಶೇಷ ರೈಲು

|

Updated on: Nov 02, 2024 | 7:58 AM

ಹುಬ್ಬಳ್ಳಿ ಮತ್ತು ಯಶವಂತಪುರ ನಗರಗಳ ನಡುವೆ ಇನ್ಮುಂದೆ ವಾರಾಂತ್ಯದಲ್ಲಿ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ರೈಲು ಹಾವೇರಿ, ರಾಣಿಬೆನ್ನೂರು, ದಾವಣಗೆರೆ ಮುಂತಾದ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ. ಬೆಳಗಾವಿ-ಮಿರಜ್ ವಿಶೇಷ ರೈಲಿನ ಸೇವೆಯನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.

ವಾರಾಂತ್ಯದಲ್ಲಿ ಹುಬ್ಬಳ್ಳಿ ಮತ್ತು ಯಶವಂತಪುರ ನಡುವೆ ವಿಶೇಷ ರೈಲು
ರೈಲು
Follow us on

ಹುಬ್ಬಳ್ಳಿ, ನವೆಂಬರ್​ 02: ಮುಂಬರುವ ದೀರ್ಘ ವಾರಾಂತ್ಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆಯು (South Western Railway) ಹುಬ್ಬಳ್ಳಿ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್​​ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ. ಅದರಂತೆ ಭಾನುವಾರ (ನ.03) ರಂದು ಹುಬ್ಬಳ್ಳಿ-ಯಶವಂತಪುರ ನಡುವೆ ವಿಶೇಷ ರೈಲು (Hubli-Yesvantpur special train) ಸಂಚರಿಸಲಿದೆ. ರೈಲು ಸಂಚರಿಸುವ ಸಮಯ, ದಿನಾಂಕ ಮಾಹಿತಿ ಇಲ್ಲಿದೆ.

ರೈಲು ಸಂಖ್ಯೆ: 07353 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್​ಪ್ರೆಸ್ ರೈಲು ನವೆಂಬರ್ 3 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆಗೆ ಹೊರಟು, ನವೆಂಬರ್ 4 ರಂದು ಯಶವಂತಪುರ ನಿಲ್ದಾಣವನ್ನು ಮುಂಜಾನೆ 3:30 ಗಂಟೆಗೆ ತಲುಪಲಿದೆ.

ಪುನಃ ಇದೇ ರೈಲು (07354) ನವೆಂಬರ್ 4 ರಂದು ಯಶವಂತಪುರದಿಂದ ಬೆಳಗ್ಗೆ 4.45 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12.50ಕ್ಕೆ ಎಸ್‌ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.

ಟ್ವಿಟರ್ ಪೋಸ್ಟ್​​

ಎಲ್ಲೆಲ್ಲಿ ನಿಲುಗಡೆ?

ಈ ರೈಲು ಎರಡೂ ಮಾರ್ಗಗಳಲ್ಲಿ ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಈ ರೈಲಿನಲ್ಲಿ ಒಂದು ಎಸಿ ಫಸ್ಟ್ ಕ್ಲಾಸ್ ಬೋಗಿ, ಒಂದು ಎಸಿ ಟು ಟೈರ್ ಬೋಗಿ, ಮೂರು ಎಸಿ ತ್ರಿ-ಟೈರ್ ಬೋಗಿಗಳು, ಎಂಟು ಸ್ವೀಪರ್ ಕ್ಲಾಸ್ ಬೋಗಿಗಳು, ಐದು ಜನರಲ್ ಸೀಟಿಂಗ್ ಕೋಚ್, ಪ್ಯಾಂಟ್ರಿ ಕಾರ್ (ಲಾಕ್ಸ್ ಕಂಡಿಶನ್) ಮತ್ತು ಎರಡು ಎಸ್ಎಲ್‌ಆರ್/ಡಿ ಸೇರಿದಂತೆ 21 ಬೋಗಿಗಳು ಇರಲಿವೆ.

ಇದನ್ನೂ ಓದಿ: ದೀಪಾವಳಿಗೆ 7,000 ವಿಶೇಷ ರೈಲು, ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ

ಬೆಳಗಾವಿ-ಮಿರಜ್​ ನಡುವೆ ವಿಶೇಷ ರೈಲು

ಪ್ರಯಾಣಿಕರ ಅನುಕೂಲಕ್ಕಾಗಿ, ರೈಲುಗಳ ಸಂಖ್ಯೆ 07301/07302 ಬೆಳಗಾವಿ-ಮಿರಜ್-ಬೆಳಗಾವಿ ಮತ್ತು 07303/07304 ಕಾಯ್ದಿರಿಸಿದ ವಿಶೇಷ ರೈಲುಗಳ ಸಂಚಾರವನ್ನು ನವೆಂಬರ್​ 30ರವರೆಗೆ ವಿಸ್ತರಿಸಲಾಗಿದೆ. ಈ ಸೇವೆಗಳನ್ನು ಈ ಹಿಂದೆ ಅಕ್ಟೋಬರ್ 31ರವರೆಗೆ ಮಾತ್ರ ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿತ್ತು. ಆದರೆ ಇದೀಗ, ಈ ರೈಲು ನವೆಂಬರ್​ 30ರವರೆಗೆ ಸಂಚರಿಸಲಿದೆ.

ಈ ವಿಶೇಷ ರೈಲುಗಳು ತಮ್ಮ ಅಸ್ತಿತ್ತದಲ್ಲಿರುವ ಬೋಗಿಗಳ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ.

ಪ್ರತಿ ನಿಲ್ದಾಣದಲ್ಲಿನ ಆಗಮನ/ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು www.enquiry.indianrail.gov.in ಅಧಿಕೃತ ರೈಲ್ವೆ ವೆಬ್‌ಸೈಟ್ ಭೇಟಿ ನೀಡುವ ಮೂಲಕ, NTES ಅಪ್ಲಿಕೇಶನ್ ಬಳಸಿ ಅಥವಾ 139 ನಂಬರಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Sat, 2 November 24