ಲೋಂಡಾ-ಕ್ಯಾಸಲ್ ರಾಕ್ ನಡುವೆ ರೈಲು ಸಂಚಾರ 1 ತಿಂಗಳು ಭಾಗಶಃ ರದ್ದು
ಮಳೆಗಾಲದ ಸಮಯದಲ್ಲಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ರೈಲಿನಲ್ಲಿ ಪ್ರಯಾಣ ಮಾಡಬೇಕು ಅಂತ ಅಂದುಕೊಂಡವರಿಗೆ ನೈಋತ್ಯ ರೈಲ್ವೆ ವಲಯ ಕಹಿ ಸುದ್ದಿ ನೀಡಿದೆ. ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ರೈಲು ಸಂಚಾರ ಒಂದು ತಿಂಗಳು ಭಾಗಶಃ ರದ್ದಾಗಲಿದೆ. ಇಲ್ಲಿದೆ ಮಾಹಿತಿ.
ಬೆಳಗಾವಿ, ಅಕ್ಟೋಬರ್ 23: ಉತ್ತರ ಕನ್ನಡ (Uttar Kannada) ಜಿಲ್ಲೆಯ ಕ್ಯಾಸಲ್ ರಾಕ್ (Castle Rock) ಮತ್ತು ಬೆಳಗಾವಿ (Belagavi) ಜಿಲ್ಲೆಯ ಲೋಂಡಾ (Londa) ರೈಲು ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಎರಡು ನಿಲ್ದಾಣಗಳ ನಡುವೆ ರೈಲು (Train) ಸಂಚಾರ ಒಂದು ತಿಂಗಳು ರದ್ದಾಗಲಿದೆ.
ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 17333/17334 ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರೈಲು ರದ್ದು
- ರೈಲು ಸಂಖ್ಯೆ: 17333 ಮೀರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಲೋಂಡಾ ಮತ್ತು ಕ್ಯಾಸಲ್ ರಾಕ್ ನೆಲಾಣಗಳ ನಡುವೆ ನವೆಂಬರ್ 1 ರಿಂದ 30 ರವರೆಗೆ ಭಾಗಶಃ ರದ್ದಾಗಲಿದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
- ರೈಲು ಸಂಖ್ಯೆ: 17334 ಕ್ಯಾಸಲ್ ರಾಕ್-ಮೀರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ನವೆಂಬರ್ 1 ರಿಂದ 30ರವರೆಗೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬ: ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ
ಟ್ವಿಟರ್ ಪೋಸ್ಟ್
Kindly note the extension of Partial Cancellation of Train Services. ರೈಲುಗಳ ಸಂಚಾರ ಭಾಗಶಃ ರದ್ದು ಮುಂದುವರಿಕೆಯನ್ನು ಗಮನಿಸಿ #SWRupdates pic.twitter.com/vLSFnvEnBJ
— South Western Railway (@SWRRLY) October 22, 2024
ಗುಂತಕಲ್ ಮತ್ತು ಕದಿರಿದೇವರ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತ
ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಯಾರ್ಡ್ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗುಂತಕಲ್ ಮತ್ತು ಕದಿರಿದೇವರ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 07589/07590 ಭಾಗಶಃ ರದ್ದಾಗಲಿವೆ.
- ರೈಲು ಸಂಖ್ಯೆ: 07589 ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರ ನವೆಂಬರ್ 1 ರಿಂದ 30ರವರೆಗೆ ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಗುಂತಕಲ್ ನಿಲ್ದಾಣದಲ್ಲಿ ಕೊನೆಗೊಳ್ಳುಲಿದೆ.
- ರೈಲು ಸಂಖ್ಯೆ: 07590 ಕದಿರಿದೇವರಪಲ್ಲಿ-ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರ ನವೆಂಬರ್ 2 ರಿಂದ ಡಿಸೆಂಬರ್ 1ರವರೆಗೆ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಗುಂತಕಲ್ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ