ಜಯಲಲಿತಾಗೆ ಸೇರಿದ್ದ 27 ಕೆಜಿ ತೂಕದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಲಾಗಿದೆ: ಕಿರಣ್, ಎಸ್ಪಿಪಿ
ಚೆನೈ, ಕಾಂಚಿಪುರ, ತೂತ್ತೂಕುಡಿ, ಚೆಂಗಲ್ಪೇಟ್, ತಂಜಾವೂರು, ತಿರುವಲ್ಲ, ತಿರುವಾಯೂರು ಮೊದಲಾದ ಕಡೆಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 1526 ಎಕರೆ ಜಮೀನನ್ನು ತಮಿಳುನಾಡು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಕಿರಣ್ ಹೇಳಿದರು. ಇದಲ್ಲದೆ ಅವರಿಗೆ ಸೇರಿದ ಒಂದು ಬಸ್ಸನ್ನೂ ಬಹಳ ಹಿಂದೆಯೇ ಸೀಜ್ ಮಾಡಲಾಗುತ್ತು ಮತ್ತು ಅದನ್ನು ಮಾರಿ ಬಂದ ಹಣವನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಿ ಅಂತ ಕೋರ್ಟ್ ಆದೇಶಿಸಿದೆ ಎಂದು ಕಿರಣ್ ಹೇಳಿದರು.
ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು ಬದುಕಿದ್ದ ಸಮಯದಲ್ಲಿ ಒಬ್ಬ ರಾಣಿಯ ಹಾಗೆ ಜೀವನ ನಡೆಸಿದ ಬಗ್ಗೆ ಎರಡು ಮಾತಿಲ್ಲ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅವರಿಗೆ ಸೇರಿದ ಹಲವಾರು ಲಾಕರ್ ಗಳನ್ನು ತೆರೆದು ಅದರಲ್ಲಿದ್ದ ವಜ್ರಖಚಿತ, ರತ್ನ ಖಚಿತ ಚಿನ್ನದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾಹಿತಿ ನೀಡಿದ ಎಸ್ಪಿಪಿ ಕಿರಣ್, ಆಭರಣಗಳ ಒಟ್ಟು ತೂಕ 27 ಕೆಜಿ, ವಶಕ್ಕೆ ಒಪ್ಪಿಸಲಾದ ವಸ್ತುಗಳನ್ನು ತಮಿಳುನಾಡು ಸರ್ಕಾರ ಆರ್ ಬಿಐಗೆ ಹಸ್ತಾಂತರಿಸಬಹದು ಇಲ್ಲವೇ ಹರಾಜು ಮಾಡಬಹುದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳನ್ನ ನೋಡಿ
Latest Videos

ಬಿಜೆಪಿ ಯಾವತ್ತಿಗೂ ಮುಸ್ಲಿಂ ವಿರೋಧಿ ಪಕ್ಷ ಅಲ್ಲ: ವಿಜಯೇಂದ್ರ

ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್ನಿಂದ ಹೊರ ಬಂದ ಸುನಿತಾ

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
