AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಆದ್ಯತೆಯ ಮೇರೆಗೆ ಕೊವಿಡ್ ಲಸಿಕೆ ಪಡೆದ ವಿಶೇಷಚೇತನರು

ನಗರ ಹಾಗು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಆರಂಭವಾದ ವ್ಯಾಕ್ಸಿನ್ ಅಭಿಯಾನ ಆರಂಭವಾಗಿದೆ. ವ್ಹೀಲ್ ಚೇರ್ ನಲ್ಲಿ‌ ಬಂದ ವಿಶೇಷಚೇತನರು ಮೊದಲ ಲಸಿಕೆ ಪಡೆದು ಸಂತಸ ಪಟ್ಟಿದ್ದಾರೆ.

ದಾವಣಗೆರೆಯಲ್ಲಿ ಆದ್ಯತೆಯ ಮೇರೆಗೆ ಕೊವಿಡ್ ಲಸಿಕೆ ಪಡೆದ ವಿಶೇಷಚೇತನರು
guruganesh bhat
|

Updated on: May 22, 2021 | 3:06 PM

Share

ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಇಂದಿನಿಂದ ವಿಶೇಷಚೇತನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ. ಮೊದಲ ಪ್ರಾಶಸ್ತ್ಯದಲ್ಲಿ ವಿಕಲಚೇತರಿಗೆ ವ್ಯಾಕ್ಸಿನ್ ನೀಡಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರ ಹಾಗು ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಆರಂಭವಾದ ವ್ಯಾಕ್ಸಿನ್ ಅಭಿಯಾನ ಆರಂಭವಾಗಿದೆ. ವ್ಹೀಲ್ ಚೇರ್ ನಲ್ಲಿ‌ ಬಂದ ವಿಶೇಷಚೇತನರು ಮೊದಲ ಲಸಿಕೆ ಪಡೆದು ಸಂತಸ ಪಟ್ಟಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಇಂದಿನಿಂದ (ಮೇ 22) ಕೊರೊನಾ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಈ ವಯೋಮಾನದವರಲ್ಲೂ ಆದ್ಯತೆ ಮೇರೆಗೆ ಕೊವಿಡ್​ ವಾರಿಯರ್ಸ್​​ಗಳಿಗೆ ಮತ್ತು ಆಯ್ದ ಗುಂಪುಗಳಿಗೆ ಮಾತ್ರ ಸದ್ಯ ಲಸಿಕೆ ವಿತರಣೆ ಮಾಡಲು ತೀರ್ಮಾನಿಸಲಾಗಿತ್ತು. ಈ ಕುರಿತು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಆದೇಶ ಹೊರಡಿಸಿದ್ದರು.

ಸದ್ಯ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆಲವು ಆದ್ಯತಾ ಗುಂಪುಗಳಿಗೆ ಮಾತ್ರ ಮೇ 22ರಿಂದ ಕೊವಿಡ್ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಈ ಕೆಳಕಂಡ ವರ್ಗಕ್ಕೆ ಇಂದಿನಿಂದಲೇ ಲಸಿಕೆ ಲಭ್ಯವಾಗಲಿದೆ ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒರ್ವ ಆರೈಕೆದಾರರು ಖೈದಿಗಳು ಚಿತಾಗಾರ/ ಸ್ಮಶಾನ/ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು ಕೊವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರು ಸರ್ಕಾರಿ ಸಾರಿಗೆ ಸಿಬ್ಬಂದಿ ಆಟೋ ಮತ್ತು ಕ್ಯಾಬ್ ಚಾಲಕರು ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು ಅಂಚೆ ಇಲಾಖೆ ಸಿಬ್ಬಂದಿ ಭದ್ರತೆ ಮತ್ತು ಕಚೇರಿಗಳ ಹೌಸ್ ಕೀಪಿಂಗ್ ಸಿಬ್ಬಂದಿ ನ್ಯಾಯಾಂಗ ಅಧಿಕಾರಿಗಳು ವಯೋವೃದ್ಧರ/ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು ಮಾಧ್ಯಮದವರು ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು ಪೆಟ್ರೋಲ್ ಬಂಕ್, ಕರ್ಮಚಾರಿಗಳು ಒಳಗೊಂಡಂತೆ ಔಷಧಿ ತಯಾರಿಕಾ ಕಂಪನಿಗಳ ಸಿಬ್ಬಂದಿ ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣ ಸರಬರಾಜು ಸಿಬ್ಬಂದಿ ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ವೃದ್ದಾಶ್ರಮ ವಾಸಿಗಳು, ನಿರ್ಗತಿಕರು) ಭಾರತೀಯ ಆಹಾರ ನಿಗಮ ಸಿಬ್ಬಂದಿ

ಲಸಿಕೆ ಪಡೆಯಲಿರುವ ಆದ್ಯತೆ ಗುಂಪುಗಳು ಇಂತಿವೆ ಎಪಿಎಂಸಿ ಕೆಲಸಗಾರರು ಆದ್ಯತೆಯ ಗುಂಪುಗಳು ಕಟ್ಟಡ ಕಾರ್ಮಿಕರು ಟೆಲಿಕಾಂ ಮತ್ತು ಇಂಟರ್ನೆಟ್ ‌ಸೇವಾದಾರರು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಬ್ಯಾಂಕ್ ಸಿಬ್ಬಂದಿ ಪೆಟ್ರೋಲ್ ಬಂಕ್ ಕೆಲಸಗಾರರು ಚಿತ್ರೋದ್ಯಮದ ಉದ್ಯಮಿ/ಕಾರ್ಯಕರ್ತ/ ಸಿಬ್ಬಂದಿ ಅಡ್ವೋಕೇಟ್ ಗಳು ಹೋಟೆಲ್ ಮತ್ತು ಆತಿಥ್ಯ ಸೇವಾದಾರರು ಕೆಎಂಎಫ್ ಸಿಬ್ಬಂದಿ ರೈಲ್ವೇ ಸಿಬ್ಬಂದಿ ಗಾರ್ಮೆಂಟ್ಸ್ ಕಾರ್ಖಾನೆ ಸಿಬ್ಬಂದಿ ಅರಣ್ಯ ಇಲಾಖೆ ಸಿಬ್ಬಂದಿ ಎನ್ ಹೆಚ್ಎಐ ಸಿಬ್ಬಂದಿ

ಇದನ್ನೂ ಓದಿ: ಕೊವಿಡ್ ಸೋಂಕಿತರ ನೆರವಿಗೆ ನಿಂತ ಮಂಡ್ಯದ ಪುರಸಭೆ ಸದಸ್ಯೆ; ಸಹಾಯ ಹಸ್ತಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಕೊವಿಡ್ ನಿಯಂತ್ರಣದಲ್ಲಿ ಬೀದರ್ ಜಿಲ್ಲೆಯೇ ರಾಜ್ಯಕ್ಕೆ ಪ್ರಥಮ; ಕೊರೊನಾ ತಡೆಯುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ

(Disabled people get Covid Vaccine at Davangere today)