AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Facebook Live | ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭವಾಗುವುದೇ?

ಗೋಹತ್ಯೆ ನಿಷೇಧ ಕಾಯ್ದೆಯ ನೈತಿಕ ಭಾಗವನ್ನು ಹೊರತುಪಡಿಸಿ ಇದು ರೈತರಿಗೆ ಅನುಕೂಲವೋ? ಅಥವಾ ಅನಾನುಕೂಲವೋ? ಅಲ್ಲದೇ ಈ ವಿಧೇಯಕದ ಆರ್ಥಿಕ ಪರಿಣಾಮವೇನು? ಎನ್ನುವ ಪ್ರಶ್ನೆಯನ್ನು ಆಧರಿಸಿ ಮಂಗಳವಾರ ‘ಟಿವಿ9 ಡಿಜಿಟಲ್’ ಆಯೋಜಿಸಿದ್ದ ಫೇಸ್​ಬುಕ್​ ಲೈವ್​ ಸಂವಾದದಲ್ಲಿ ಚರ್ಚೆ ನಡೆಯಿತು.

TV9 Facebook Live | ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭವಾಗುವುದೇ?
ವಿಕಾಸ್ ಸೊಪ್ಪಿನ, ರೆಹಮಾನ್ ಖಾನ್, ಆಶಾ ಜಗದೀಶ್
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 15, 2020 | 6:56 PM

Share

ಬೆಂಗಳೂರು: ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೇ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಗೋಹತ್ಯೆ ನಿಷೇಧ ವಿಧೇಯಕ -2020ರ ನೈತಿಕ ಭಾಗವನ್ನು ಹೊರತುಪಡಿಸಿ ಇದು ರೈತರಿಗೆ ಅನುಕೂಲವೋ? ಅಥವಾ ಅನಾನುಕೂಲವೋ? ಅಲ್ಲದೇ ಈ ವಿಧೇಯಕದ ಆರ್ಥಿಕ ಪರಿಣಾಮವೇನು? ಎನ್ನುವ ಪ್ರಶ್ನೆಯನ್ನು ಆಧರಿಸಿ ಮಂಗಳವಾರ ‘ಟಿವಿ9 ಡಿಜಿಟಲ್’ ಆಯೋಜಿಸಿದ್ದ ಫೇಸ್​ಬುಕ್​ ಲೈವ್​ ಸಂವಾದದಲ್ಲಿ ಚರ್ಚೆ ನಡೆಯಿತು.

ಟಿವಿ9ನ ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಚರ್ಚೆಯಲ್ಲಿ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಆಶಾ ಜಗದೀಶ್ ಹಾಗೂ ರೈತ ಮುಖಂಡ ವಿಕಾಸ್ ಸೊಪ್ಪಿನ ಭಾಗವಹಿಸಿದ್ದರು.

ಗೋವುಗಳನ್ನು ವಧೆ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವ ವಿಚಾರ ಕಾಯಿದೆಯಲ್ಲಿದೆ. ಆದರೆ ಗೋವುಗಳನ್ನು ರಕ್ಷಿಸುವುದು ಹೇಗೆ ಎನ್ನುವ ವಿಚಾರ ಕಾಯ್ದೆಯಲ್ಲಿ ಇಲ್ಲ. ಹೀಗಾಗಿ ಈ ಕಾಯ್ದೆಯು ದೂರದೃಷ್ಟಿ ಕಾಣಿಸುತ್ತಿಲ್ಲ. ಇದು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಹಲವು ಚರ್ಚೆಗಳು ನಡೆಯುತ್ತಿದೆ.

ಸಂವಾದದಲ್ಲಿ ಮೊದಲು ಮಾತನಾಡಿದ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್, ಸಹ ಇದೇ ವಿಚಾರ ಪ್ರಸ್ತಾಪಿಸಿದರು. ಗೋಹತ್ಯೆ ನಿಷೇಧದ ಆಶಯ ಸಂವಿಧಾನದಲ್ಲಿದೆ. ಈ ಕಾನೂನಿನಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆ ಇಲ್ಲ. ಆದರೆ ರೈತರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಅಲ್ಪಸಂಖ್ಯಾತರು ಗೋಮಾಂಸ ಭಕ್ಷಣೆ ತೊರೆಯಲು ಸಿದ್ಧರಾಗಿದ್ದಾರೆ. ಆದರೆ ರೈತರ ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದರು.

ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ರೈತ ಮುಖಂಡ ವಿಕಾಸ್ ಸೊಪ್ಪಿನ, ಈ ಕಾಯ್ದೆಯಿಂದ ಕೇವಲ ರೈತರಿಗೆ ಮಾತ್ರವಲ್ಲ. ಇಡೀ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ. ಈ ಕಾಯ್ದೆಯಿಂದ ಹೊಸ ಸಮಸ್ಯೆಗಳು ಉದ್ಭವವಾಗಬಾರದು, ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಗಮನಹರಿಸಬೇಕು. ಗೋವುಗಳನ್ನು ರಕ್ಷಿಸುವ ಗುರಿಯಿದ್ದರೆ ಗೋಶಾಲೆಗಳನ್ನು ಮೊದಲು ತೆರೆಯಬೇಕು. ಅದನ್ನು ಸುಸಜ್ಜಿತವಾಗಿ ನಡೆಸಿಕೊಂಡು ಹೋಗಲು ಗೋಪಾಲಕರನ್ನು ನೇಮಕ ಮಾಡುವ ಜೊತೆಗೆ ಗೋರಕ್ಷಣೆ ಜವಬ್ದಾರಿಯನ್ನು ಸರ್ಕಾರವೇ ಹೊರಬೇಕೆಂದು ಅಭಿಪ್ರಾಯಪಟ್ಟರು.

ವಿಶ್ವ ಹಿಂದೂ ಪರಿಷತ್ ಮುಖಂಡರಾದ ಆಶಾ ಜಗದೀಶ್​ ಮಾತನಾಡಿ, ಗೋವುಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ರೈತರಿಗೆ ಸಮಸ್ಯೆಗಳಾದರೆ ವಿಶ್ವ ಹಿಂದೂ ಪರಿಷತ್​ ಅವರ ಪರವಾಗಿ ನಿಲ್ಲುತ್ತದೆ. ಪ್ರತಿ ಗ್ರಾಮದ ಹಿಂದಲ್ಲಿಯೂ ಇರುವ ವಿಶ್ವ ಹಿಂದೂ ಪರಿಷತ್ ಸಮಿತಿಗಳು ಗೋಪಾಲನೆಗೆ ನೆರವಾಗುತ್ತವೆ. ಈ ಕಾನೂನು ಜಾರಿಯಿಂದ ಯಾವುದೆ ಸಮಸ್ಯೆಯಾದರೆ ಪರಿಹಾರ ದೊರಕಿಸಿಕೊಡಲು ನಾವು ಜೊತೆಯಾಗುತ್ತೇವೆ ಎಂದು ಹೇಳಿದರು.

Published On - 6:55 pm, Tue, 15 December 20