ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಬಗ್ಗೆ ಶಿವಕುಮಾರ್ ಅಭಿಮಾನ ಮತ್ತು ಹೆಮ್ಮೆಯ ಮಾತು!

|

Updated on: Nov 03, 2023 | 5:45 PM

ತಮ್ಮ ಭಾಷಣದಲ್ಲಿ ಪುರಂದರ ದಾಸರು ಬರೆದ ಪದ್ಯ ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಸುಖವಯ್ಯ..’ ಎರಡು ಸಾಲುಗಳನ್ನು ಹೇಳುವ ಅವರು ಮೈಸೂರು ಕರ್ನಾಟಕ ಅಂತ ನಾಮಕರಣವಾದ 50 ವರ್ಷಗಳ ಹಿಂದಿನ ಇತಿಹಾಸವನ್ನು ಉತ್ಸಾಹ ಮತ್ತು ಆವೇಶದಿಂದ ನೆನೆದರು.

ಗದಗ: ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನಡುವಿನ ಕಭಿ ಖುಷಿ ಕಭಿ ಗಮ್ ಸಂಬಂಧ ಅರ್ಥಮಾಡಿಕೊಳ್ಳುವುದು ಕಷ್ಟ ಮಾರಾಯ್ರೇ. ಗದಗನಲ್ಲಿ ಇಂದು ನಡೆದ ಕರ್ನಾಟಕ ಸುವರ್ಣ ಸಂಭ್ರಮ (Karnataka Suvarna Sambrama) ಮೆರವಣಿಗೆಯಲ್ಲಿ ಶಿವಕುಮಾರ್ ಮುಖ ಗಂಟಿಕ್ಕಿಕೊಂಡಿದ್ದರು, ವೇದಿಕೆ ಮೇಲೆ ಕೂತಾಗಲೂ ಇಬ್ಬರ ನಡುವೆ ಮಾತಿಲ್ಲ ಕತೆಯಿಲ್ಲ. ಆದರೆ ಶಿವಕುಮಾರ್ ಭಾಷಣ ಕೇಳಿಸಿಕೊಳ್ಳಿ, ಸಿದ್ದರಾಮಯ್ಯನವರ ಬಗ್ಗೆ ಬಹಳ ಅಭಿಮಾನ ಮತ್ತು ಹೆಮ್ಮೆಯಿಂದ ಮಾತಾಡುತ್ತಾರೆ. ತಮ್ಮ ಭಾಷಣದಲ್ಲಿ ಪುರಂದರ ದಾಸರು ಬರೆದ ಪದ್ಯ ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಸುಖವಯ್ಯ..’ ಎರಡು ಸಾಲುಗಳನ್ನು ಹೇಳುವ ಅವರು ಮೈಸೂರು ಕರ್ನಾಟಕ ಅಂತ ನಾಮಕರಣವಾದ 50 ವರ್ಷಗಳ ಹಿಂದಿನ ಇತಿಹಾಸವನ್ನು ಉತ್ಸಾಹ ಮತ್ತು ಆವೇಶದಿಂದ ನೆನೆದರು.

ಆಗ ದೇವರಾಜ ಆರಸುರವರು ಮುಖ್ಯಮಂತ್ರಿಗಳಾಗಿದ್ದರು ಮತ್ತು ಇದೇ ಭಾಗದ ಕೆ ಹೆಚ್ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು, ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣವಾದಾಗ ಗದಗಿನಲ್ಲಿ ಅವರಿಬ್ಬರ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಇತಿಹಾಸ ನೆನೆಯದಿದ್ದರೆ ಇತಿಹಾಸ ಸೃಷ್ಟಿಸುವುದು ಸಾಧ್ಯವಿಲ್ಲ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಾರೆ. ಆಗಿನ ಇತಿಹಾಸ ನೆನೆಯಲೆಂದೇ 50 ವರ್ಷಗಳ ಬಳಿಕ ಗದಗಿನಲ್ಲಿ ಸಿದ್ದರಾಮಯ್ಯ ಮತ್ತು ಕೆ ಹೆಚ್ ಪಾಟೀಲ್ ಅವರ ಪುತ್ರ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ ಸುವರ್ಣ ಸಂಭ್ರಮ ಆಚರಿಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ