AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Powerless: ರಾಜ್ಯ ಸರ್ಕಾರದಿಂದ ಅನುದಾನ ಕಡಿತ -ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿಗಳು ಕಗ್ಗತ್ತಲಲ್ಲಿ

ಕೊಡಗು ಜಿಲ್ಲೆಯ ಅಂಗನವಾಡಿಗಳು ಗಂಭೀರ ಸಮಸ್ಯೆಗೆ ಸಿಲುಕಿದೆ. ಇಲಾಖೆಯ ಪ್ರಧಾನ ಕಚೇರಿಯಲ್ಲಿ ಬಿಎಸ್​ಎನ್​ಎಲ್​ ಬಿಲ್ ಪಾವತಿ ಮಾಡದ್ದರಿಂದ ಇಂಟರ್​ನೆಟ್​ ಸಂಪರ್ಕವನ್ನೂ ಕಡಿತ ಮಾಡಿರುವ ಪ್ರಸಂಗ ನಡೆದಿದೆ. ಕಚೇರಿಯಲ್ಲಿ ಕನಿಷ್ಟ ಜೆರಾಕ್ಸ್​ ಮಾಡಲು ಪೇಪರ್ ಖರೀದಿಸುವುದಕ್ಕೂ ಹಣ ಇಲ್ಲವಾದಂತಾಗಿದೆ

Powerless: ರಾಜ್ಯ ಸರ್ಕಾರದಿಂದ ಅನುದಾನ ಕಡಿತ -ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿಗಳು ಕಗ್ಗತ್ತಲಲ್ಲಿ
ಸರ್ಕಾರದಿಂದ ಅನುದಾನ ಕಡಿತ: ಕೊಡಗು ಜಿಲ್ಲೆಯ ಅಂಗನವಾಡಿಗಳು ಕಗ್ಗತ್ತಲಲ್ಲಿ
Gopal AS
| Updated By: ಸಾಧು ಶ್ರೀನಾಥ್​|

Updated on: Nov 03, 2023 | 4:55 PM

Share

ಕೊಡಗು ಜಿಲ್ಲೆಯ (Kodagu) ಅಂಗನವಾಡಿಗಳು ಕಗ್ಗತ್ತಲಲ್ಲಿವೆ. ಜಿಲ್ಲೆಯ ಬಹುತೇಕ ಅಂಗನವಾಡಿಗಳ ವಿದ್ಯುತ್ (Electricity) ಸಂಪರ್ಕವನ್ನೇ ಚೆಸ್ಕಾಂ ಕಡಿತಗೊಳಿಸಿದೆ. ಕಳೆದ ಹಲವು ತಿಂಗಳಿಂದ ಚೆಸ್ಕಾಂಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Directorate of Women And Child Development Department) ವಿದ್ಯುತ್ ಬಿಲ್​ ಪಾವತಿಸಿಲ್ಲ. ಹಾಗಾಗಿ ಚೆಸ್ಕಾಂ ಅಂಗನವಾಡಿಗಳ (Anganwadi) ವಿದ್ಯುತ್ (Electricity) ಸಂಪರ್ಕ ಕಡಿತ ಮಾಡಿರುವುದೇ ಅಲ್ಲದೆ ಹಲವು ಅಂಗನವಾಡಿಗಳ (anganwadi) ಮೀಟರ್​ಗಳನ್ನೇ ಹೊತ್ತೊಯ್ದಿದೆ!

ಇದರಿಂದಾಗಿ ಕತ್ತಲಲ್ಲೇ ಮಕ್ಕಳು ಪಾಠ ಕೇಳುವಂತಾಗಿದೆ. ಅಂಗನವಾಡಿಗಳ ದೈನಂದಿನ ಖರ್ಚು ವೆಚ್ಚಕ್ಕೆಂದು ಈ ಹಿಂದೆ ಇಲಾಖೆ ಪ್ರತಿ ಅಂಗನವಾಡಿಗೆ ತಲಾ 3500 ರೂ ನೀಡುತ್ತಿತ್ತು. ಅದರಲ್ಲೇ ವಿದ್ಯುತ್ ಬಿಲ್ ಪಾವತಿಯಾಗುತ್ತಿತ್ತು. ಆದ್ರೆ 2022ರ ಆಗಸ್ಟ್​ ನಿಂದಲೇ ಈ ಅನುದಾನ ಅಂಗನವಾಡಿಗಳಿಗೆ ಬರುತ್ತಿಲ್ಲ. ಹಾಗಾಗಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳೆದ ಜನವರಿಯಿಂದ ಬೇರೆ ಯಾವುದೇ ಅನುದಾನ ಬರುತ್ತಿಲ್ಲ.

ಇದರಿಂದಾಗಿ ಈ ಇಲಾಖೆ ಗಂಭೀರ ಸಮಸ್ಯೆಗೆ ಸಿಲುಕಿದೆ. ಇಲಾಖೆಯ ಪ್ರಧಾನ ಕಚೇರಿಯಲ್ಲಿ ಬಿಎಸ್​ಎನ್​ಎಲ್​ ಬಿಲ್ ಪಾವತಿ ಮಾಡದ್ದರಿಂದ ಇಂಟರ್​ನೆಟ್​ ಸಂಪರ್ಕವನ್ನೂ ಕಡಿತ ಮಾಡಿರುವ ಪ್ರಸಂಗ ನಡೆದಿದೆ. ಕಚೇರಿಯಲ್ಲಿ ಕನಿಷ್ಟ ಜೆರಾಕ್ಸ್​ ಮಾಡಲು ಪೇಪರ್ ಖರೀದಿಸುವುದಕ್ಕೂ ಹಣ ಇಲ್ಲವಾದಂತಾಗಿದೆ ಅಂತ ಅಲ್ಲಿನ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಇಲಾಖೆಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದ್ದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ