ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ: ಡಿ.ಕೆ. ಶಿವಕುಮಾರ್

ಬೆಂಗಳೂರು: ನಾನು ಒಕ್ಕಲಿಗೆ, ಆ ಜಾತಿ ಈ ಜಾತಿ ಅಂತ ಹೋಗುವುದಿಲ್ಲ. ಜಾತಿ ವಿಚಾರದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತನ್ಮೂಲಕ ಒಕ್ಕಲಿಗ ಸಮುದಾಯದ ನಾಯಕತ್ವ ವಿಚಾರವಾಗಿ ಎಚ್​ ಡಿ ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ. ನಾನು ಹುಟ್ಡಿನಿಂದ ಒಕ್ಕಲುತನ ಮಾಡುವವನು. […]

ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ: ಡಿ.ಕೆ. ಶಿವಕುಮಾರ್
ಸಾಧು ಶ್ರೀನಾಥ್​ Edited By:

Updated on: Oct 16, 2020 | 1:01 PM

ಬೆಂಗಳೂರು: ನಾನು ಒಕ್ಕಲಿಗೆ, ಆ ಜಾತಿ ಈ ಜಾತಿ ಅಂತ ಹೋಗುವುದಿಲ್ಲ. ಜಾತಿ ವಿಚಾರದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತನ್ಮೂಲಕ ಒಕ್ಕಲಿಗ ಸಮುದಾಯದ ನಾಯಕತ್ವ ವಿಚಾರವಾಗಿ ಎಚ್​ ಡಿ ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ
ನಮ್ಮ ತಂದೆ-ತಾಯಿ ಒಕ್ಕಲಿಗರು, ಹೀಗಾಗಿ ನಾನು ಒಕ್ಕಲಿಗ. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ. ನಾನು ಹುಟ್ಡಿನಿಂದ ಒಕ್ಕಲುತನ ಮಾಡುವವನು. ಜಾತಿ ವಿಚಾರದಲ್ಲಿ ಮಾತನಾಡೋದಕ್ಕೆ ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ. ನಾನೊಂದು ಪಕ್ಷದ ಅಧ್ಯಕ್ಷ, ನನಗೆ ಕಾಂಗ್ರೆಸ್ ಪಕ್ಷವೇ ಜಾತಿ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದ್ದಾರೆ.

ಎಚ್ಡಿಕೆ ಎಲ್ಲಿಯೂ ನನ್ನ ಹೆಸರು ಬಳಸಿಲ್ಲ, ಹಾಗಿದ್ದಾಗ ನಾನು ಯಾಕೆ ಉತ್ತರ ಕೊಡಲಿ. ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ. ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ, ಜೆಡಿಎಸ್ ನ ಮತವನ್ನೂಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ ಎಂದು ಡಿಕೆಶಿ ತಿಳಿಸಿದರು.

Published On - 12:58 pm, Fri, 16 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us