AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಯ್ತಾ.. ಆ ಪರ್ಸನಲ್​ ವಿಡಿಯೋ?

ಸಿಎಂ ರಾಜಕೀಯ ಕಾರ್ಯದರ್ಶಿ N.R. ಸಂತೋಷ್​ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿ ಕಾರವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

CM ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಯ್ತಾ..  ಆ ಪರ್ಸನಲ್​ ವಿಡಿಯೋ?
N.R. ಸಂತೋಷ್​ (ಎಡ); ಡಿ.ಕೆ. ಶಿವಕುಮಾರ್​ (ಬಲ)
KUSHAL V
|

Updated on:Nov 28, 2020 | 12:25 PM

Share

ಉತ್ತರ ಕನ್ನಡ: ಸಿಎಂ ರಾಜಕೀಯ ಕಾರ್ಯದರ್ಶಿ NR ಸಂತೋಷ್​ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿ ಕಾರವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅವರ ಬಗ್ಗೆ ನನಗೂ ಗೊತ್ತಿತ್ತು. ಏನೋ ಬೇಜಾರಾಗಿ ಆತ್ಮಹತ್ಯೆಗೆ ಯತ್ನಿಸಿರಬಹುದು. ಯಾವುದೋ ವಿಡಿಯೋ ಮಾಡಿ MLC ಮತ್ತು ಸಚಿವರ ಕೈಗೆ ಕೊಟ್ಟಿದ್ದರು ಎಂಬ ಮಾಹಿತಿಯಿತ್ತು. ಅದನ್ನು ಆ ಮಿನಿಸ್ಟರ್​ ಮತ್ತು ವಿಧಾನ ಪರಿಷತ್​ ಸದಸ್ಯ ದೆಹಲಿ ನಾಯಕರಿಗೆ ತಲುಪಿಸಿದ್ದರು ಎಂದು ತಿಳಿದುಬಂತು. ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಅವರ ಪರ್ಸನಲ್ ವಿಡಿಯೋ ತೋರಿಸಿದ್ದಾರೆ. ಹಾಗಾಗಿ ಬೇಸರದಿಂದ ಸಂತೋಷ್​ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಿವಕುಮಾರ್​ ಹೇಳಿದರು.

ಜೊತೆಗೆ, ಈ ಬಗ್ಗೆ ಸರ್ಕಾರ ತನಿಖೆ ಮಾಡಿದರೆ ಅದಕ್ಕೆ ಅರ್ಥವಿಲ್ಲ.ಇದರಲ್ಲಿ‌ ಗೌಪ್ಯ ವಿಚಾರ ಅಡಗಿದೆ. ಹಾಗಾಗಿ, ಬೇರೆ ತನಿಖೆ ಆಗಬೇಕು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಸಿಎಂ BSY ಭೇಟಿಯಾದ B.Y.ವಿಜಯೇಂದ್ರ, ಮರಿಸ್ವಾಮಿ ಇತ್ತ, N.R.ಸಂತೋಷ್ ಆತ್ಮಹತ್ಯೆ ಯತ್ನ ಬೆಳಕಿಗೆ ಬರುತ್ತಿದ್ದಂತೆ ಸಿಎಂ BSYರನ್ನು ಅವರ ಪುತ್ರ B.Y.ವಿಜಯೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಭೇಟಿಯಾದರು. ಸಿಎಂ ಜೊತೆ ಚರ್ಚೆ ಸಹ ನಡೆಸಿದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ವಿಜಯೇಂದ್ರ ಮತ್ತು ಮರಿಸ್ವಾಮಿ ಭೇಟಿ ಕೊಟ್ಟರು. N.R.ಸಂತೋಷ್ ಆತ್ಮಹತ್ಯೆ ಯತ್ನ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ ಎಂದು ಹೇಳಲಾಗಿದೆ. ಡಿಕೆಶಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು -ವಿಡಿಯೋ ಹೇಳಿಕೆಗೆ ಈಶ್ವರಪ್ಪ ತಿರುಗೇಟು

‘ಸಂತೋಷ್ ಆರೋಗ್ಯ ಸುಧಾರಣೆಯಾದರೆ ಮಧ್ಯಾಹ್ನ ವಾರ್ಡ್‌ಗೆ ಶಿಫ್ಟ್’ ಎನ್.ಆರ್.ಸಂತೋಷ್ ಆರೋಗ್ಯ ಸುಧಾರಣೆಯಾಗಿದೆ. ಅವರ ಆರೋಗ್ಯ ಸ್ಥಿತಿ ಇದೇ ರೀತಿ ಇದ್ದರೆ ಮಧ್ಯಾಹ್ನ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಇದೀಗ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ.

ಸಂತೋಷ್ ನಿನ್ನೆ 8.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಗೆ ದಾಖಲಾದಾಗ ಸ್ವಲ್ಪ ಮಂಕಾಗಿದ್ದರು. ನಿದ್ದೆ ಮಾತ್ರೆ ಸೇವಿಸಿದ್ದಾರೆಂದು ಎಂದು ಸಂತೋಷ್ ಪತ್ನಿ ಜಾಹ್ನವಿ ತಿಳಿಸಿದ್ದರು. ಕೂಡಲೇ ಸಂತೋಷ್‌ಗೆ ಚಿಕಿತ್ಸೆ ನೀಡಿದೆವು. ಐಸಿಯುಗೆ ಶಿಫ್ಟ್ ಮಾಡಿ ಅವರಿಗೆ ಚಿಕಿತ್ಸೆ ನೀಡಿದೆವು ಎಂದು ವೈದ್ಯರು ಮಾಹಿತಿ ನೀಡಿದರು.

ಸದ್ಯ ಬಿಪಿ ಲೆವೆಲ್ ಸೇರಿದಂತೆ ಎಲ್ಲವೂ ಸ್ಟೇಬಲ್ ಆಗಿದೆ. ಇದೇ ರೀತಿ ಇದ್ದರೆ ವಾರ್ಡ್‌ಗೆ ಶಿಫ್ಟ್ ಮಾಡುತ್ತೇವೆ. ಒಂದೆರಡು ದಿನ ನಿಗಾವಹಿಸಿದ ಬಳಿಕ ಆರೋಗ್ಯ ಸ್ಟೇಬಲ್ ಆಗಿದ್ದರೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರು ಮಾಹಿತಿ ಕೊಟ್ಟರು.

Published On - 11:52 am, Sat, 28 November 20