ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ; ಡಿ.ಕೆ.ಶಿವಕುಮಾರ್ ಗರಂ

| Updated By: Digi Tech Desk

Updated on: Jun 12, 2021 | 9:33 PM

DK Shivakumar: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಏರಿಕೆಯಾಗುತ್ತಿದೆ. ಅದೇ ರೀತಿ ರೈತರಿಗೆ ಬೆಂಬಲ ಬೆಲೆ ಹೆಚ್ಚಾಗಿ ಕೊಡುತ್ತಿದ್ದೀರಾ? ಸರ್ಕಾರಿ, ಖಾಸಗಿ ದಿನಗೂಲಿ ನೌಕರರ ಸಂಬಳ ಹೆಚ್ಚಿಸಿದ್ದೀರಾ? ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಅಧ್ಯಕ್ಷ ಪ್ರಶ್ನಿಸಿದ್ದಾರೆ.

ನಾನು ಮಾತಾಡುವಾಗ ಮಧ್ಯ ಮಾತಾಡಿದ್ರೆ ಒದ್ದು ಹೊರಹಾಕುವೆ; ಡಿ.ಕೆ.ಶಿವಕುಮಾರ್ ಗರಂ
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಚಿತ್ರದುರ್ಗ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗರಂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಮಾತಾಡುವಾಗ ಮಧ್ಯ ಮಾತಾಡಿದರೆ ಒದ್ದು ಹೊರಗೆ ಹಾಕುವೆ. ನಾನು ಕತ್ತೆ ಕಾಯೋಕೆ ಇಲ್ಲಿಗೆ ಬಂದಿಲ್ಲವೆಂದು ಡಿಕೆಶಿ ಆಕ್ರೋಶ ಹೊರಹಾಕಿ, ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆ ಸೂಚನೆ ನೀಡಿದರು. ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದರು. ಇದಕ್ಕೆ ಸಿಟ್ಟುಗೊಂಡ ಡಿಕೆಶಿ ಕಾರ್ಯಕರ್ತರ ವಿರುದ್ಧ ಗರಂ ಆದರು.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಏರಿಕೆಯಾಗುತ್ತಿದೆ. ಅದೇ ರೀತಿ ರೈತರಿಗೆ ಬೆಂಬಲ ಬೆಲೆ ಹೆಚ್ಚಾಗಿ ಕೊಡುತ್ತಿದ್ದೀರಾ? ಸರ್ಕಾರಿ, ಖಾಸಗಿ ದಿನಗೂಲಿ ನೌಕರರ ಸಂಬಳ ಹೆಚ್ಚಿಸಿದ್ದೀರಾ? ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಅಧ್ಯಕ್ಷ ಪ್ರಶ್ನಿಸಿದ್ದಾರೆ. ಮನ್ರೇಗಾ ಯೋಜನೆಯ ಕೂಲಿ ಹಣವನ್ನೂ ಹೆಚ್ಚಳ ಮಾಡಿಲ್ಲ. ಕೇವಲ ಇವರ ಜೇಬು ಮಾತ್ರ ತುಂಬಬೇಕಾಗಿದೆ ಅಷ್ಟೆ. ನಾವು, ಜನಸಾಮಾನ್ಯರು ಸೇರಿ ಈ ಸರ್ಕಾರ ಕಿತ್ತೊಗೆಯಬೇಕು. ನಾಳೆ ಗ್ರಾಮ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಮುಖಂಡರು ಭಾಗಿಯಾಗಬೇಕು. ಕಡ್ಡಾಯವಾಗಿ ಕಾಂಗ್ರೆಸ್ ಮುಖಂಡರು ಜನರಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಹೆಣ ಸುಡುವುದಕ್ಕೂ ಕ್ಯೂ, ಆಸ್ಪತ್ರೆಗೆ ದಾಖಲಾಗುವುದಕ್ಕೂ ಕ್ಯೂ, ಔಷಧಕ್ಕೂ ಕ್ಯೂ, ಲಸಿಕೆ ಪಡೆಯುವುದಕ್ಕೂ ಕ್ಯೂ ನಿಲ್ಲುವಂತಾಗಿದೆ. ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡುತ್ತದೆ. ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಮಾಡುತ್ತಿದ್ದಾರೆ. ಈ ದೇಶಕ್ಕೆ ಕೊರೊನಾ ಕಾಯಿಲೆ ತಂದದ್ದು ಯಾರೆಂದು ಪ್ರಶ್ನಿಸಿದ ಅವರು ದೇಶದ ಜನತೆ ಬಿಜೆಪಿ ಸರ್ಕಾರವನ್ನು ಉಗಿಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾದ ನರೇಶ್ – ಶ್ರವಣ್! ಮುಂದೇನು?

ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ; ದಿಗ್ವಿಜಯ್ ಸಿಂಗ್​ಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ

(DK Shivakumar was angry with Congress workers in Chitradurga)

Published On - 1:00 pm, Sat, 12 June 21