ಬೆಂಗಳೂರು: ಕೊರೊನಾ ಸೋಂಕಿನ ಹರಡುವಿಕೆ ಮಿತಿಮೀರುತ್ತಿರುವ ಬೆನ್ನಲ್ಲೇ ಬೆಂಗಳೂರು ಸೇರಿ ಹಲವು ನಗರಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯವಾಗದೆ ರೋಗಿಗಳು ಒದ್ದಾಡುತ್ತಿದ್ದಾರೆ. ಇವತ್ತಷ್ಟೇ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮಲ್ಲಿ ಆಕ್ಸಿಜನ್ ಕೊರತೆ ಇರುವುದಾಗಿ ಹೇಳಿವೆ. ಈ ಮಧ್ಯೆ ಕರ್ನಾಟಕ ರಾಜ್ಯದಲ್ಲಿ ಯಾರೂ ಹೆದರಬೇಕಿಲ್ಲ. ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಇಂದು ಟ್ವೀಟ್ ಮಾಡಿರುವ ಡಾ. ಕೆ. ಸುಧಾಕರ್, ಕರ್ನಾಟಕದಲ್ಲಿ 7 ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳು ಇವೆ. ಇವು ಒಂದು ದಿನಕ್ಕೆ 812 ಟನ್ಗಳಷ್ಟು ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ಇನ್ನು ಶನಿವಾರ ಬಳಕೆಯಾದ ಆಮ್ಲಜನಕ 272.61 ಟನ್. ಹೀಗಿರುವಾಗ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ ಎಂಬ ಗಾಳಿಸುದ್ದಿಯನ್ನು ಅನಗತ್ಯವಾಗಿ ಹಬ್ಬಿಸಿ, ಜನರಲ್ಲಿ ಗಾಬರಿ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದ್ದಾರೆ.
ಕೊವಿಡ್ 19 ಸೋಂಕು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸಹಜವಾಗಿಯೇ ಮಿತಿಮೀರುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು, ಆಕ್ಸಿಜನ್ಗಳ ಸಮಸ್ಯೆ ಎದುರಾಗುತ್ತಿದೆ. ರಾಜ್ಯದಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕಗಳು ದು:ಸ್ಥಿತಿಯಲ್ಲಿದ್ದು, ಅವುಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಬೇಕು ಎಂಬ ಮಾತೂ ಕೇಳಿಬರುತ್ತಿದೆ.
There are 7 medical oxygen production plants in Karnataka with a daily production capacity of 812 tonnes, while the medical oxygen utilised on Saturday was about 272.61 tonnes. So I appeal to everyone to not create unnecessary panic about shortage of medical oxygen in the state.
— Dr Sudhakar K (@mla_sudhakar) April 18, 2021
ಇದನ್ನೂ ಓದಿ: ರೈಲುಗಳ ಮೂಲಕ ವೈದ್ಯಕೀಯ ಆಕ್ಸಿಜನ್ ಸಾಗಣೆಗೆ ಅವಕಾಶ ಕೊಡಿ; ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರದ ಮನವಿ
ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ; ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು ಎಂದ ಸಚಿವ ಡಾ. ಕೆ.ಸುಧಾಕರ್
Do not create panic about shortage of medical oxygen in the Karnataka says K.Sudhakar
Published On - 5:05 pm, Sun, 18 April 21