ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ; ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು ಎಂದ ಸಚಿವ ಡಾ. ಕೆ.ಸುಧಾಕರ್

ಹೆಚ್ಚುತ್ತಿದೆ ಕೊರೊನಾ ಅಟ್ಟಹಾಸ; ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು ಎಂದ ಸಚಿವ ಡಾ. ಕೆ.ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)

ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು. ಸರ್ಕಾರದ ಜತೆ ಜನರು ಸಹ ಸಹಕಾರ ನೀಡಬೇಕು. ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಏ.18ರಂದು ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತೆ. ಸರ್ವಪಕ್ಷ ಸಭೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಸುಧಾಕರ್ ತಿಳಿಸಿದ್ದಾರೆ.

Ayesha Banu

| Edited By: sadhu srinath

Apr 16, 2021 | 1:07 PM


ಬೆಂಗಳೂರು: ದಿನದಿಂದ ದಿನಕ್ಕೆ ಹೆಮ್ಮಾರಿ ಕೊರೊನಾ ವೈರಸ್​ನ 2ನೇ ಅಲೆಯ ಪ್ರತಾಪ ಹೆಚ್ಚಾಗುತ್ತಿದೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈಟ್​ ಕರ್ಫ್ಯೂವನ್ನು ಏಪ್ರಿಲ್ 20ರ ತನಕ ಮುಂದುವರೆಸುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೊರೊನಾಗೆ ತೆಗೆದುಕೊಂಡಿರುವ ಹೆಚ್ಚಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.

ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕಾರಿಗಳನ್ನ ನೇಮಿಸಲಾಗುವುದು. ದಿನದ 24 ಗಂಟೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಸೋಂಕಿತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ರು.  ಒಂದು ವಾರ್ಡ್‌ಗೆ ಒಂದು ಆ್ಯಂಬುಲೆನ್ಸ್ ಇಡಲಾಗುವುದು. 49 ಶ್ರದ್ಧಾಂಜಲಿ ವ್ಯಾನ್‌ಗಳು ಉಚಿತ ಸೇವೆಯಲ್ಲಿರುತ್ತವೆ. ಅಂತ್ಯಸಂಸ್ಕಾರಕ್ಕೆ ಯಾರೂ ಹಣ ನೀಡಬೇಕಾಗಿಲ್ಲ. ಕೊರೊನಾ ಸೋಂಕಿತರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ‘ರೆಮ್‌ಡೆಸಿವಿರ್’ ಲಸಿಕೆ ಕೊರತೆ ಇಲ್ಲ
ರಾಜ್ಯದಲ್ಲಿ ‘ರೆಮ್‌ಡೆಸಿವಿರ್’ ಲಸಿಕೆ ಕೊರತೆ ಇಲ್ಲ. 84 ಸಾವಿರ ರೆಮ್‌ಡೆಸಿವಿರ್ ಲಸಿಕೆ ಖರೀದಿಗೆ ಟೆಂಡರ್ ಆಗಿದೆ. ಆಕ್ಸಿಜನ್ ಕೊರತೆಯಾಗದಂತೆ ಘಟಕಗಳನ್ನ ಸ್ಥಾಪಿಸಿದ್ದೇವೆ. ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಕ್ಕೆ ಟೆಂಡರ್ ಕರೆದಿದ್ದೇವೆ. ಜಿಲ್ಲಾ ಮಟ್ಟದಲ್ಲೂ ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು. ಆಕ್ಸಿಜನ್ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.

ಫ್ರಂಟ್‌ಲೈನ್ ವಾರಿಯರ್ಸ್‌ಗಾಗಿ ನೇರ ನೇಮಕಾತಿ
ಇನ್ನು 6 ತಿಂಗಳ ಮಟ್ಟಿಗೆ ಫ್ರಂಟ್‌ಲೈನ್ ವಾರಿಯರ್ಸ್‌ಗಾಗಿ ನೇರ ನೇಮಕಾತಿ ಮಾಡಿಕೊಳ್ಳುತ್ತೇವೆ. ಯಾವುದೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲ್ಲ. ರೋಗ ಲಕ್ಷಣ ಇದ್ದರೆ ಶೀಘ್ರದಲ್ಲೇ ಕೊವಿಡ್ ಟೆಸ್ಟ್ ಮಾಡಲಾಗುತ್ತೆ. ಹಾಗೂ ಟೆಸ್ಟ್ ಮಾಡಿದ 24 ಗಂಟೆಯಲ್ಲಿ ವರದಿ ನೀಡಬೇಕು. ಈ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಮೈಕ್ರೋ ಕಂಟೇನ್ಮೆಂಟ್ ಜೋನ್ ಮಾಡಲು ನಿರ್ಧರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಮಾಡಲಾಗುತ್ತೆ.

ಅನಗತ್ಯವಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಒಳಂಗಾಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 100 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಹೊರಾಂಗಣ ಕಾರ್ಯಕ್ರಮಕ್ಕೆ 200 ಜನರಿಗೆ ಅವಕಾಶ ನೀಡಲಾಗಿದೆ. ಹೆಚ್ಚು ಜನರು ಸೇರದಂತೆ ಕ್ರಮಕೈಗೊಳ್ಳಲಾಗುವುದು. ಕೊವಿಡ್ ಟೆಸ್ಟ್‌ಗೆ ಹೆಲ್ಪ್‌ಲೈನ್ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಹೆಲ್ಪ್‌ಲೈನ್ ಸೆಂಟರ್‌ನಲ್ಲಿ ಪರಿಣಿತರು ಕೆಲಸ ಮಾಡುತ್ತಾರೆ. ಎಲ್ಲ ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಡಿ. ಎಲ್ಲರೂ ದಾಖಲಾದರೆ ಬೆಡ್‌ಗಳ ಸಮಸ್ಯೆಯಾಗುತ್ತದೆ. ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ ಎಂದು ಆರೋಗ್ಯ ಸಚಿವ ಸುಧಾಕರ್ ಸೂಚಿಸಿದ್ದಾರೆ.

ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು
ಜನರೇ ಜನತಾ ಕರ್ಫ್ಯೂ ಹಾಕಿಕೊಳ್ಳಬೇಕು. ಸರ್ಕಾರದ ಜತೆ ಜನರು ಸಹ ಸಹಕಾರ ನೀಡಬೇಕು. ಕಡ್ಡಾಯವಾಗಿ ಕೊವಿಡ್ ಲಸಿಕೆಯನ್ನ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಏ.18ರಂದು ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯುತ್ತೆ. ಸರ್ವಪಕ್ಷ ಸಭೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಸೀಲ್​, ಬೆಂಗಳೂರು ನಗರದ ಚಟುವಟಿಕೆಗಳ ಮೇಲೆ ನಿಯಂತ್ರಣ: ಡಾ.ಕೆ.ಸುಧಾಕರ್​


Follow us on

Related Stories

Most Read Stories

Click on your DTH Provider to Add TV9 Kannada