ದೆಹಲಿ: ಅಲೋಪಥಿ ಮತ್ತು ಆಧುನಿಕ ಔಷಧಿ ಪದ್ಧತಿ ಬಗ್ಗೆ ಅವಮಾನಕರ ಹೇಳಿಕೆ ವಿರೋಧಿಸಿ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ದೇಶಾದ್ಯಂತ ವೈದ್ಯರು ಕಪ್ಪು ದಿನವನ್ನು ಆಚರಿಸುತ್ತಿದ್ದಾರೆ. ದೇಶಾದ್ಯಂತ ಹಲವಾರು ಆಸ್ಪತ್ರೆಗಳ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿಯೂ ಕಪ್ಪು ಪಟ್ಟಿ ಧರಿಸಿ, ಪಿಪಿಇ ಕಿಟ್ ಮೇಲೆ ಬ್ಲ್ಯಾಕ್ ಡೇ ಎಂದು ಬರೆದ ಫಲಕಗಳನ್ನು ಹಿಡಿದು ಪತಂಜಲಿ ಆಯುರ್ವೇದ ಸಂಸ್ಥಾಪಕರಾದ ಯೋಗ ಗುರು ಬಾಬಾ ರಾಮ್ದೇವ್ ಬಂಧಿಸುವಂತೆ ಆಗ್ರಹಿಸಿ ಸೈಲೆಂಟ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊರೊನಾದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟಕೊಂಡು ರೋಗಿಗಳಿಗೆ, ಆರೋಗ್ಯ ಸೇವೆಗೆ ಯಾವುದೇ ತೊಂದರೆ ಆಗಬಾರದೆಂದು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ಸ್ ಸೂಚಿಸಿತ್ತು. ಹೀಗಾಗಿ ವೈದ್ಯರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಆಲೋಪಥಿ ವೈದ್ಯರನ್ನ ಆಯುರ್ವೇದ ವೈದ್ಯರನ್ನಾಗಿ ಮಾರ್ಪಾಡು ಮಾಡ್ತೀನಿ ಎಂದು ಬಾಬ ರಾಮ್ದೇವ್ ಹೇಳಿಕೆ ವಿರುದ್ಧ ಕಪ್ಪು ಪಟ್ಟಿ ಧರಿಸಿ ಆಕ್ರೋಶ ಹೊರ ಹಾಕಿದ್ದಾರೆ.
#Arrestbabaramdev ಎಂಬ ಬೋರ್ಡ್ ಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಬಾ ರಾಮ್ದೇವ್ ಹೇಳಿಕೆಯಿಂದ ನಮ್ಮಂತ ವೈದ್ಯರಿಗೆ ಅವಮಾನವಾಗಿದೆ. ಇಂತಾ ಸಂದರ್ಭದಲ್ಲೂ ನಾವು ಎದೆಗುಂದದೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮವರನ್ನ ಕಳೆದುಕೊಂಡಿದ್ದೇವೆ. ಸಾವಿರಾರು ಆರೋಗ್ಯ ಕಾರ್ಯಕರ್ತರು ಮಹಾಮಾರಿಗೆ ಬಲಿಯಾಗಿದ್ದಾರೆ. ಹೀಗಿರುವಾಗ ಬಾಬಾ ನೀಡಿರುವ ಹೇಳಿಕೆ ಅವಮಾನ ಮಾಡುವಂತದ್ದು ಅವರನ್ನ ಕೂಡಲೇ ಅರೆಸ್ಟ್ ಮಾಡಿ ಎಂದು ವೈದ್ಯರು ಆಗ್ರಹಿಸಿದ್ದಾರೆ.
“ಅಲೋಪಥಿಯ ಶಿಸ್ತಿನ ಬಗ್ಗೆ ಮಾತನಾಡಲು ಸಹ ಅರ್ಹತೆ ಇಲ್ಲದ ರಾಮ್ದೇವ್ ಅವರು ಮಾಡಿದ ಟೀಕೆಗಳ ವಿರುದ್ಧ ಇಂದು ಬೆಳಿಗ್ಗೆಯಿಂದಲೇ ನಮ್ಮ ಪ್ರತಿಭಟನೆ ಪ್ರಾರಂಭವಾಗಿದೆ. ಇಂತಹ ಸಾಂಕ್ರಾಮಿಕ ರೋಗದ ಸಮಯದಲ್ಲೂ ಅವರ ಈ ಹೇಳಿಕೆ ವೈದ್ಯರ ಮನೋಸ್ಥೈರ್ಯದ ಮೇಲೆ ಪರಿಣಾಮಬೀರಿದೆ. ನಾವು ಬೇಷರತ್ತಾಗಿ ಒತ್ತಾಯಿಸುತ್ತೇವೆ ಅವರಿಂದ ಸಾರ್ವಜನಿಕ ಕ್ಷಮೆಯಾಚನೆ ಅಥವಾ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು”ಎಂದು ಫೋರ್ಡಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Delhi: Members of Federation of Resident Doctors' Association hold Black Day protest condemning the derogatory & disgraceful statements by Ram Kisan Yadav alias Ramdev Baba pic.twitter.com/BC8XbP1kWd
— ANI (@ANI) June 1, 2021
ಇದನ್ನೂ ಓದಿ: ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್ ವೈದ್ಯರ ನಿರ್ಧಾರ