ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ

| Updated By: ಆಯೇಷಾ ಬಾನು

Updated on: Jun 20, 2021 | 2:55 PM

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಸಾಕು ನಾಯಿಯನ್ನು ಕಳೆದುಕೊಂಡ ಮಾಲೀಕ ತನ್ನ ಮುದ್ದಿನ ನಾಯಿಗಾಗಿ ಸಮಾಧಿ ಕಟ್ಟಿಸಿ ತಿಥಿ ಮಾಡಿದ್ದಾರೆ. ಕಳೆದ ಮೇ 24 ರಂದು ಅನಾರೋಗ್ಯದ ಕಾರಣ ನಾಯಿ ಮೃತಪಟ್ಟಿತ್ತು. ಹೀಗಾಗಿ ಮನುಷ್ಯ ಸತ್ತಾಗ ಯಾವ ರೀತಿ ತಿಥಿ ಮಾಡುತ್ತಾರೋ ಅದೇ ರೀತಿ ತಮ್ಮ ಮುದ್ದಿನ ನಾಯಿ ಮೃತಪಟ್ಟ ಬಳಿಕ ಶಾಸ್ತ್ರಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಿ ನಾಯಿಯ ಸವಿ ನೆನಪಿನಲ್ಲಿ ಮಾಲೀಕ ತಿಥಿ ಮಾಡಿದ್ದಾರೆ.

ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ
ಸಾಕು ನಾಯಿ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿದ ಮಾಲೀಕ
Follow us on

ತುಮಕೂರು: ಮನುಷ್ಯರ ಜೀವನದಲ್ಲಿ ಸಾಕು ಪ್ರಾಣಿಗಳಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಮನುಷ್ಯರು ಶ್ವಾನಕ್ಕೂ ಮನುಷ್ಯರಷ್ಟೇ ಸ್ಥಾನ ನೀಡಿ ಹೆಚ್ಚು ಆತ್ಮೀಯರಾಗುತ್ತಾರೆ, ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ಮನುಷ್ಯನ ಮೌನವನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣವಿರುತ್ತೆ. ತಮ್ಮವರೂ ತಿಳಿದುಕೊಳ್ಳಲಾಗದ ಅದೆಷ್ಟೂ ಸಂಗತಿಗಳನ್ನು ಶ್ವಾನಗಳು ಬೇಗ ಗುರುತಿಸಿ ಸ್ಪಂದಿಸುತ್ತವೆ. ತಮ್ಮವರ ಜಾಗವನ್ನು ತುಂಬುತ್ತವೆ. ಪ್ರೀತಿ, ನಂಬಿಕೆ-ವಿಶ್ವಾಸಕ್ಕೆ ನಾಯಿಗಳು ಬೆಸ್ಟ್ ಉದಾಹರಣೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಸಾಕು ನಾಯಿಯನ್ನು ಕಳೆದುಕೊಂಡ ಮಾಲೀಕ ತನ್ನ ಮುದ್ದಿನ ನಾಯಿಗಾಗಿ ಸಮಾಧಿ ಕಟ್ಟಿಸಿ ತಿಥಿ ಮಾಡಿದ್ದಾರೆ. ಕಳೆದ ಮೇ 24 ರಂದು ಅನಾರೋಗ್ಯದ ಕಾರಣ ನಾಯಿ ಮೃತಪಟ್ಟಿತ್ತು. ಹೀಗಾಗಿ ಮನುಷ್ಯ ಸತ್ತಾಗ ಯಾವ ರೀತಿ ತಿಥಿ ಮಾಡುತ್ತಾರೋ ಅದೇ ರೀತಿ ತಮ್ಮ ಮುದ್ದಿನ ನಾಯಿ ಮೃತಪಟ್ಟ ಬಳಿಕ ಶಾಸ್ತ್ರಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಿ ನಾಯಿಯ ಸವಿ ನೆನಪಿನಲ್ಲಿ ಮಾಲೀಕ ತಿಥಿ ಮಾಡಿದ್ದಾರೆ.

ಗ್ರಾಮದ ಕೊಟ್ಟೂರಯ್ಯ ಹಾಗೂ ಜಯಶೀಲ ದಂಪತಿ ತಮಗೆ ಮಕ್ಕಳಿಲ್ಲದ ಕಾರಣ ನಾಯಿಯನ್ನು ಸಾಕಿದ್ದರು. ಮಕ್ಕಳಿದ್ದರೆ ಯಾವ ರೀತಿ ಪ್ರೀತಿಯನ್ನು ಕೊಟ್ಟು ಬೆಳೆಸುತ್ತಿದ್ದರೂ ಅದೇ ರೀತಿ ನಾಯಿಗೆ ಮಕ್ಕಳ ಸ್ಥಾನ ನೀಡಿ ಸಾಕಿದ್ದರು. ಆದ್ರೆ ಅನಾರೋಗ್ಯದ ಕಾರಣ ಮೇ 24ರಂದು ಕೊನೆಯುಸಿರೆಳೆದಿದೆ. ಹೀಗಾಗಿ ಸಮಾಧಿ ಕಟ್ಟಿ ಜೂನ್ 19ರಂದು ತಿಥಿ ಮಾಡಿದ್ದಾರೆ. ಈ ವೇಳೆ ನಾಯಿಯ ಸವಿ ನೆನಪಿಗೆ ಊರಿನ ಗ್ರಾಮಸ್ಥರಿಗೆ ಊಟ ಹಾಕಿದ್ದಾರೆ.

ಇದನ್ನೂ ಓದಿ: ಹಾಸನ: ಸಾಕುನಾಯಿ ಹೊತ್ತೊಯ್ದ ಚಿರತೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ