ಪೊಲೀಸರಿಂದ ಎಸ್ಕೇಪ್ ಆಗಲು ಯತ್ನಿಸಿ ಸಾವಿಗೀಡಾದ ಡ್ರಗ್ ಪೆಡ್ಲಿಂಗ್ ಆರೋಪಿ
ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿಯಾಗಿದ್ದ ಪೀಟರ್ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪೀಟರ್ ಕಲ್ಕೆರೆಗೆ ಜಿಗಿದಿದ್ದ. ಆದರೆ ಕೆರೆ ಬದಿಯ ಗಟ್ಟಿಯಾದ ಕಟ್ಟೆ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ...
ಬೆಂಗಳೂರು: ಪೊಲೀಸರಿಂದ ಎಸ್ಕೇಪ್ ಆಗಲು ಯತ್ನಿಸಿ ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿ ಸಾವಿಗೀಡಾದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಬಳಿ ನಡೆದಿದೆ. ನೈಜೀರಿಯಾ ಮೂಲದ ಆರೋಪಿ ಪೀಟರ್ ಸಾವಿಗೀಡಾದ ವ್ಯಕ್ತಿ.
ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿಯಾಗಿದ್ದ ಪೀಟರ್ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪೀಟರ್ ಕಲ್ಕೆರೆಗೆ ಜಿಗಿದಿದ್ದ. ಆದರೆ ಕೆರೆ ಬದಿಯ ಗಟ್ಟಿಯಾದ ಕಟ್ಟೆ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಪೊಲೀಸರು ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನೈಜೀರಿಯಾ ಮೂಲದ ಪೀಟರ್ ಸಾವಿಗೀಡಾಗಿದ್ದಾನೆ.
ಕೇರಳದಿಂದ ರೆಮ್‌ಡಿಸಿವಿರ್ ತಂದು ಬೆಂಗಳೂರಲ್ಲಿ ಸೇಲ್, ಆರೋಪಿ ಅರೆಸ್ಟ್ ಇನ್ನು ಕೇರಳದಿಂದ ರೆಮ್‌ಡಿಸಿವಿರ್ ತಂದು ಬೆಂಗಳೂರಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಜೀವ್‌ಕುಮಾರ್(32), ಪ್ರತೀಕ್(37) ಅಭಿಜಿತ್(20) ಬಂಧಿತ ಆರೋಪಿಗಳು.
ದಂಧೆಯ ಬಗ್ಗೆ ಮಾಹಿತಿ ಪಡೆದು ಗ್ರಾಹಕರ ಸೋಗಿನಲ್ಲಿ ಇನ್ಸ್‌ಪೆಕ್ಟರ್ ಎರ್ರಿಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಸಂಪರ್ಕಿಸಿತ್ತು. ಈ ವೇಳೆ ಆರೋಪಿಗಳು 1 ವಯಲ್ ಇಂಜೆಕ್ಷನ್‌ಗೆ ₹10ದ ಸಾವಿರಕ್ಕೆ ಬೇಡಿಕೆ ಇಟ್ಟಿದ್ರು. ಅಭಿಜಿತ್ ಎಂಬಾತನ ಬಳಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕಲೆಕ್ಟ್ ಮಾಡುವಂತೆ ತಿಳಿಸಲಾಗಿತ್ತು. ರೆಮ್‌ಡಿಸಿವಿರ್ ಪಡೆಯುವ ನೆಪದಲ್ಲಿ ಹೋಗಿ ಮೂವರನ್ನು ಸೆರೆ ಹಿಡಿಯಲಾಗಿದೆ. ಬಂಧಿತ ಆರೋಪಿಗಳಿಂದ 25 ವಯಲ್ಸ್ ಇಂಜೆಕ್ಷನ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಅರ್ಧ ಡೋಸ್ ಕೊರೊನಾ ಲಸಿಕೆ ಕೊಟ್ಟು ಯಾಮಾರಿಸ್ತಾರೆ! ಬೆಂಗಳೂರಲ್ಲಿ ಪೊಲೀಸರಿಗೇ ಮೋಸ ಮಾಡಿದ ಆರೋಗ್ಯ ಕೇಂದ್ರದ ಸಿಬ್ಬಂದಿ