ಕುಡಿದ ಮತ್ತಿನಲ್ಲಿ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಪತಿ

ಕುಡಿದ ಮತ್ತಿನಲ್ಲಿ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಪತಿ, ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಪತಿ
ಪ್ರಾತಿನಿಧಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Sep 09, 2022 | 10:59 PM

ಉತ್ತರ ಕನ್ನಡ : ಕುಡಿದ ಮತ್ತಿನಲ್ಲಿ ಹೆಂಡತಿ (Wife) ಮೇಲೆ ಪೆಟ್ರೋಲ್ ಸುರಿದು ಪತಿ (Husband) ಕೊಲೆ ಮಾಡಲು ಯತ್ನಿಸಿದ ಘಟನೆ ಸಿದ್ದಾಪುರ (Siddapur) ತಾಲೂಕಿನ ಕಾನಗೋಡ ಗ್ರಾಮದಲ್ಲಿ ನಡೆದಿದೆ. ರೇಣುಕಾ ಗುತ್ಯ ಚನ್ನಯ್ಯ (45), ಕೊಲೆ ಯತ್ನಕ್ಕೆ‌ ಒಳಗಾದ ಸಂತ್ರಸ್ತೆ. ಗುತ್ಯ ಸಣ್ಣಹುಡುಗ ಚನ್ನಯ್ಯ (50) ಕೊಲೆಗೆ ಯತ್ನಿಸಿದ ಪತಿ. ಪತಿ ಚನ್ನಯ್ಯ ಹೆಂಡತಿಗೆ ಪೆಟ್ರೋಲ್ ಸುರಿದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಪತಿ ಗುತ್ಯ ಚನ್ನಯ್ಯನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್ ಡಿಕ್ಕಿ, ಬೈಕ್‌ ಸವಾರರಿಬ್ಬರು ಸಾವು

ಕೋಲಾರ: ಬೈಕ್​ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲೂಕಿನ ಹೂವರಸನಹಳ್ಳಿಯಲ್ಲಿ ನಡೆದಿದೆ. ಕೋಡಗುರ್ಕಿ ಕಾಲೋನಿಯ ಸುಬ್ರಮಣಿ(30), ಯಲ್ಲಪ್ಪ(29) ಮೃತ ದುರ್ದೈವಿಗಳು. ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಂಪತಿ ತೆರಳ್ತಿದ್ದ ಬೈಕ್ ಮೇಲೆ ಮರ ಬಿದ್ದು ಪತ್ನಿ ಸಾವು, ಪತಿಗೆ ಗಾಯ

ಬಾಗಲಕೋಟೆ: ದಂಪತಿ ತೆರಳ್ತಿದ್ದ ಬೈಕ್ ಮೇಲೆ ಮರ ಬಿದ್ದು ಪತ್ನಿ ಸಾವನಪ್ಪಿದ್ದು, ಪತಿ ಗಾಯಗೊಂಡಿರುವ ಘಟನೆ ಜಮಖಂಡಿಯ ಆಂಜನೇಯ ದೇಗುಲ ಬಳಿ ನಡೆದಿದೆ. ಕುಳಲಿ ಗ್ರಾಮದ ನಿವಾಸಿ ರುಕ್ಮಿಣಿ ಮರನೂರ(36) ಮೃತ ದುರ್ದೈವಿ. ಪತಿ ಶ್ರೀಶೈಲ್​ ಮರನೂರಗೆ ಗಾಯವಾಗಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:59 pm, Fri, 9 September 22