ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನಾ ಸಮಾವೇಶ: ಬೆಂಗಳೂರು ಸಂಚಾರಿ ಪೊಲೀಸ್ ಮಾರ್ಗಗಳಲ್ಲಿ ಮಾಡಿರುವ ತಾತ್ಕಾಲಿಕ ಬದಲಾವಣೆಗಳು ನಿಮಗೆ ಗೊತ್ತಿರಲಿ
ಸಂಚಾರಿ ಪೊಲೀಸ್ ಮಾಡಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡರೆ ಟ್ರಾಫಿಕ್ ಜಾಮ್ ಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಕಮ್ಮಿಯಾಗುತ್ತದೆ ಮತ್ತು ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗಲಿಚ್ಛಿಸುವವರು ಹೆಚ್ಚಿನ ಅಡೆತಡೆಗಳಿಲ್ಲದೆ ಸ್ಥಳವನ್ನು ತಲುಪಬಹುದಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ (state government) ಸಾಧನಾ ಸಮಾವೇಶ ಹಿನ್ನಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ (traffic police) ವಿಭಾಗ ನಗರದ ಕೆಲ ಮಾರ್ಗಗಳಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿದೆ. ಸಮಾವೇಶ ದೊಡ್ಡಬಳ್ಳಾಪುರದಲ್ಲಿ (Doddaballapura) ಇಂದು (ಶನಿವಾರ) ನಡೆಯಲಿದೆ. ಸಂಚಾರಿ ಪೊಲೀಸ್ ಮಾಡಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡರೆ ಟ್ರಾಫಿಕ್ ಜಾಮ್ ಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಕಮ್ಮಿಯಾಗುತ್ತದೆ ಮತ್ತು ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗಲಿಚ್ಛಿಸುವವರು ಹೆಚ್ಚಿನ ಅಡೆತಡೆಗಳಿಲ್ಲದೆ ಸ್ಥಳವನ್ನು ತಲುಪಬಹುದಾಗಿದೆ.
ತುಮಕೂರು ಕಡೆ ಹೋಗುವ ಭಾರೀ ವಾಹನಗಳಿಗೆ ಮಾರ್ಗ ಬದಲಾವಣೆ
ಅನಂತಪುರ-ಎನ್ ಹೆಚ್ 44 ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಮಾರ್ಗದಿಂದ ಬರೋ ವಾಹನಗಳು-
ದೊಡ್ಡಬಳ್ಳಾಪುರ ಕ್ರಾಸ್ ದೇವನಹಳ್ಳಿ (ಎನ್ ಹೆಚ್ 44) ಬಲಾಗಿ ದೇವನಹಳ್ಳಿ ರಾಣಿ ಕ್ರಾಸ್ ಮೂಲಕ ಸಂಚಾರಕ್ಕೆ ಅವಕಾಶ
ಕಾರ್ಯಕ್ರಮಕ್ಕೆ ಹೋಗೋ ವಾಹನಗಳಿಗೆ ಮಾರ್ಗ:-
ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗೋ ವಾಹನಗಳು-
ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ, ಬೆಂಗಳೂರು ನಗರ, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ
ಕೊಲಾರ, ಕೆ.ಜಿ.ಎಫ್, ಹೊಸಕೋಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಹೋಗೋ ವಾಹನಗಳು
ವಿಜಯಪುರ, ವಿಜಯಪುರ ಕ್ರಾಸ್, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ ಬೆಂಗಳೂರು ನಗರ, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ
ಬೆಂಗಳೂರು ನಗರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ವಾಹನಗಳಿಗೆ (ಬಸ್ ಮತ್ತು ಕ್ಯಾಬ್ ಗಳಿಗೆ)
ಹೆಬ್ಬಾಳ ಫ್ಲೈ ಓವರ್, ಕೆಂಪಾಪುರ ಕ್ರಾಸ್, ಫ್ಲೈ ಓವರ್, ಕಾಫಿ ಡೇ, ಹುಣಸೇಮಾರನಹಳ್ಳಿ ಕ್ರಾಸ್,
ಕೋಟೆ ಕ್ರಾಸ್, ಸಾದಹಳ್ಳಿ ಗೇಟ್, ವಯಾ ದೊಡ್ಡಬಳ್ಳಾಪುರ ಕ್ರಾಸ್ ನಿಂದ ಬೆಂ.ಗ್ರಾಮಾಂತರ ಜಿಲ್ಲಾ ಸರಹದ್ದು,
ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ
ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗೋ ದ್ವಿಚಕ್ರ ವಾಹನಗಳಿಗೆ ಮಾರ್ಗ
ಹೆಬ್ಬಾಳ ಫ್ಲೈ ಓವರ್, ಸಂಜೀವನಗರ ಕ್ರಾಸ್, ಎಡ ತಿರುವು ಸರ್ವೀಸ್ ರಸ್ತೆ,
ಕೊಡಿಗೇಹಳ್ಳಿ ಕ್ರಾಸ್, ಬ್ಯಾಟರಾಯನಪುರ ಕ್ರಾಸ್, ಜಕ್ಕೂರ್ ಕ್ರಾಸ್, ಎಡ ತಿರುವು ಫ್ಲೈ ಓವರ್
ಯಲಹಂಕ ಪೊಲೀಸ್ ಠಾಣೆ, ದೊಡ್ಡಬಳ್ಳಾಪುರ ರಸ್ತೆ, ಪುಟ್ಟೇನಹಳ್ಳಿ, ನಾಗೇನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದು
ಸಿಂಗನಾಯಕನಹಳ್ಳಿ, ರಾಜನಕುಂಟೆ, ಮಾರಸಂದ್ರ, ಮೂಲಕ ದೊಡ್ಡಬಳ್ಳಾಪುರಕ್ಕೆ ಸಂಚಾರ ಮಾಡಲು ಅವಕಾಶ
ಬೆಂಗಳೂರು ಸಂಚಾರಿ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದೆ ಮತ್ತು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.