ಬೆಂಗಳೂರು, ಮಾರ್ಚ್.27: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ (Summer) ಶುರುವಾಗುತ್ತಿದೆ. ಇದರ ಜೊತೆಗೆ ಕಣ್ಣಿನ (Eye) ನಾನಾ ಸಮಸ್ಯೆಗಳು ಕಂಡು ಬರ್ತಿದೆ. ಆದ್ರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಸಿಟಿ ಜನರಿಗೆ ಡ್ರೈ ಐ (Dry Eye) ಸಮಸ್ಯೆ ಶುರುವಾಗಿದೆ. ನಗರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ, ಅತಿಯಾದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದ ಪುಟಾಣಿಗಳಿಂದ ಹಿಡದು ವಯೋವೃದ್ಧರ ವರೆಗೂ ಜನರಲ್ಲಿ ಡ್ರೈ ಐ ಪ್ರಾಬ್ಲಂ ಶುರುವಾಗಿದೆ.
ಬೆಂಗಳೂರಿನಲ್ಲಿನ ಅತಿಯಾದ ವಾಯು ಮಾಲಿನ್ಯ ಹಾಗೂ ಹೆಚ್ಚಾದ ಮೊಬೈಲ್ ಬಳಕೆ ಲ್ಯಾಪ್ ಟ್ಯಾಪ್ ಬಳಕೆಯಿಂದ ನೇರವಾಗಿ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಡ್ರೈ ಐ ಸಮಸ್ಯೆ ಕಂಡು ಬರ್ತಿದೆ. ಈ ಡ್ರೈ ಐ ಸಿಂಡ್ರೋಮ್ ನಿಂದ ಕಣ್ಣು ಕೆಂಪಾಗುವುದು. ಕಣ್ಣಲ್ಲಿ ನೀರು ಬರುವುದು, ತುರುಕೆ ಹಾಗೂ ತಲೆ ನೋವು ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾಡಾತ್ತವೆ. ಡ್ರೈ ಐ ಸಮಸ್ಯೆಯಿಂದ ಸಿಟಿ ಜನರು ಪರದಾಡುವಂತಾಗಿದೆ.
ಇದನ್ನೂ ಓದಿ: ಚಿನ್ನ ಖರೀದಿಸಲು ಹೋಗುವಾಗ ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ: ಇಲ್ಲಿದೆ ಇದರ ಉಪಯೋಗ?
ಇನ್ನು ಕಳೆದ ಕೆಲವು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ ಹಾಗೂ ನಿರಂತರವಾಗಿ ಮೊಬೈಲ್ ಬಳಕೆ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಅತಿಯಾಗಿ ಹಾಗೂ ದೀರ್ಘವಾದಿ ಬಳಕೆಯಿಂದ ಈ ಡ್ರೈ ಐ ಪ್ರಾಬ್ಲಂ ಶುರುವಾಗಿದೆ. ಈ ಡ್ರೈ ಐ ಪ್ರಾಬ್ಲಂನಿಂದ ಜನರಲ್ಲಿ ಆಸಕ್ತಿ ಕೂಡಾ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 30% ಜನರಲ್ಲಿ ಡ್ರೈ ಐ ಪ್ರಾಬ್ಲಂ ಏರಿಕೆ ಕಂಡು ಬರ್ತಿದೆ. ಇದೇ ದೊಡ್ಡ ಸಮಸ್ಯೆಯಾಗಿದ್ದು ಓಪಿಡಿಗೆ ಬರುವ ಹೆಚ್ಚು ಕೇಸ್ ಗಳಲ್ಲಿ ಡ್ರೈ ಐ ಸಮಸ್ಯೆಗಳು ಕಂಡು ಬರ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ನಲ್ಲಿ ಇತ್ತೀಚ್ಚಿಗೆ ಸಿಟಿಯಲ್ಲಿನ ಜನರ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅತಿಯಾದ ನೀರು ಸೇವನೆ, ವಿಟಿಮಿನ್ ಯುಕ್ತ ಹಣ್ಣು ಆಹಾರ ಹಾಗೂ ಕಣ್ಣಿನ ವ್ಯಾಯಮದ ಕಡೆ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ