ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ, ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬಿಜೆಪಿ ವಿಧಾನ​ ಪರಿಷತ್ ​ಸದಸ್ಯೆ ತೇಜಸ್ವಿನಿ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ್​ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿದ್ದು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ.

ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ, ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ
ಪರಿಷತ್​ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ತೇಜಸ್ವಿನಿ ಗೌಡ
Follow us
| Updated By: ವಿವೇಕ ಬಿರಾದಾರ

Updated on:Mar 27, 2024 | 1:03 PM

ಬೆಂಗಳೂರು, ಮಾರ್ಚ್​ 27: ಲೋಕಸಭೆ ಚುನಾವಣೆ (Lok Sabha Election) ಹೊಸ್ತಿಲಿನಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬಿಜೆಪಿ (BJP)ವಿಧಾನ​ ಪರಿಷತ್ ​ಸದಸ್ಯೆ ತೇಜಸ್ವಿನಿ ಗೌಡ (Tejaswini Gowda) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ್​ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರಿಗೆ ರಾಜೀನಾಮೆ ಪತ್ರ ಸಲ್ಲಿದ್ದು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ತೇಜಸ್ವಿನಿ ಗೌಡ ಅವರ ಪರಿಷತ್​ ಸದಸ್ಯ ಸ್ಥಾನದ ಅವಧಿ ಜೂನ್ 24ರ ವರೆಗೆ ಇತ್ತು.

ನಜೀರ್ ಅಹ್ಮದ್​​​, ಅನಿಲ್ ಕುಮಾರ್​​ ಕೂಡ ಸಮಯ ಕೇಳಿದ್ದಾರೆ: ಹೊರಟ್ಟಿ

ಬಿಜೆಪಿಯ ವಿಧಾನ ಪರಿಷತ್​​ ಸದಸ್ಯೆ ತೇಜಸ್ವಿನಿಗೌಡ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ತೇಜಸ್ವಿನಿ ಹೇಳಿದ್ದಾರೆ. ನಜೀರ್ ಅಹ್ಮದ್​​​, ಅನಿಲ್ ಕುಮಾರ್​​ ಕೂಡ ಸಮಯ ಕೇಳಿದ್ದಾರೆ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ: ಆರ್​​ ಅಶೋಕ್​

ತೇಜಸ್ವಿನಿ ಗೌಡ ನಮ್ಮ ಪಕ್ಷಕ್ಕೆ ಬಂದು ಎಮ್‌ಎಲ್‌ಸಿ ಆಗಿದ್ದರು. ತೇಜಸ್ವಿನಿ ಗೌಡ ಅವರ ಅವಧಿ ಇನ್ನೊಂದು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಎಲ್ಲಾ ಸ್ಥಾನಮಾನ ಕೊಟ್ಟರೆ ಭಾರತೀಯ ಜನತಾ ಪಕ್ಷ ಒಳ್ಳೆಯದು. ಸ್ಥಾನಮಾನ ಕೊಡದಿದ್ದರೆ ಕೆಟ್ಟದ್ದು ಅನ್ನೋ ಮನಸ್ಥಿತಿ ಸರಿಯಲ್ಲ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಅಶೋಕ್ ಹೇಳಿದರು.

ಇದನ್ನೂ ಓದಿ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ

ತೇಜಸ್ವಿನಿ ಗೌಡ ಮುಂದಿನ ನಡೆ ಏನು?

ಪತ್ರಕರ್ತರಾಗಿದ್ದ ತೇಜಸ್ವಿನ ಗೌಡ ಅವರು ನಂತರ ಕಾಂಗ್ರೆಸ್​ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ತೇಜಸ್ವಿನಿ ಗೌಡ ಅವರು ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ತೇಜಸ್ವಿನಿ ಗೌಡ ಅವರು 2004ರಲ್ಲಿ ಕಾಂಗ್ರೆಸ್​ ಟಿಕೆಟ್​​ನಿಂದ ಕನಕಪುರ ಲೋಕಸಭೆ (ಈಗಿನ ಬೆಂಗಳೂರು ಗ್ರಾಮಾಂತರ) ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರನ್ನೇ ಸೋಲಿಸಿದ್ದರು.

ನಂತರ ದಿನಗಳಲ್ಲಿ ಇವರು ಬಿಜೆಪಿ ಸೇರಿದರು. ಬಿಜೆಪಿ ಇವರನ್ನು ವಿಧಾನ ಪರಿಷತ್​ ಸದಸ್ಯೆಯನ್ನಾಗಿ ಮಾಡಿತು. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ವಿಧಾನಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೌರವ ಸಲ್ಲಿಸಿದ್ದರು. ಜೂನ್ 17 ಕ್ಕೆ ಒಟ್ಟು 16 ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ತೇಜಸ್ವಿನಿಗೌಡ ಅವರು, ನನಗೆ ಅವಕಾಶ ಕೊಟ್ಟ ಬಿಜೆಪಿಗೆ ಧನ್ಯವಾದಗಳು ಎಂದು ಎರಡ್ಮೂರು ಬಾರಿ‌ ಉಲ್ಲೇಖಿಸಿದ್ದರು.

ವಿಧಾನ ಪರಿಷತ್​ ಸದಸ್ಯೆಯಾಗಿದ್ದ ತೇಜಸ್ವಿನಿ ಗೌಡ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದರು ಎನ್ನಲಾಗುತ್ತಿದೆ. ಸಂಸದ ಪ್ರತಾಪ್​ ಸಿಂಹ ಅವರಿಗೆ ಟಿಕೆಟ್​ ಕೈ ತಪ್ಪಿದರೆ ತಮಗೆ ಸಿಗುತ್ತದೆ ಎಂಬ ಆಶಯದಲ್ಲಿದ್ದರು.

ಆದರೆ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್​ ಲಭಿಸಿದೆ. ಟಿಕೆಟ್​ ಘೋಷಣೆ ನಂತರ ಬಿಜೆಪಿಯಿಂದ ಅಂತರ ತೇಜಸ್ವಿನಿ ಗೌಡ ಅವರು  ಕಾಯ್ದುಕೊಂಡಿದ್ದಾರೆ. ಇದೀಗ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್​, ಘರವಾಪಸಿ ​ಆಗಿಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Wed, 27 March 24

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ