ಮಲೆನಾಡಿನಲ್ಲಿ ಸೌತ್ ಆಫ್ರಿಕಾ ವೈರಸ್.. ದುಬೈನಿಂದ ಮರಳಿದ ಶಿವಮೊಗ್ಗದ ವ್ಯಕ್ತಿಗೆ ಸೋಂಕು
ಶಿವಮೊಗ್ಗದ ಜೆಪಿ ನಗರದ ನಿವಾಸಿ 53 ವರ್ಷದ ಈ ವ್ಯಕ್ತಿ KIABಯಲ್ಲಿ ಗಂಟಲುದ್ರವ ಪರೀಕ್ಷೆ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಜೆನೆಟಿಕ್ ಸೀಕ್ವೆನ್ಸ್ನಲ್ಲಿ ಸೌತ್ ಆಫ್ರಿಕಾ ವೈರಸ್ ಪತ್ತೆಯಾಗಿದೆ.
ಶಿವಮೊಗ್ಗ: ಮಹಾಮಾರಿ ಕೊರೊನಾ ದೇಶಕ್ಕೆ ಕಾಲಿಟ್ಟು ಬಂದು ವರ್ಷವಾದ್ರು ಇದರಿಂದ ಮುಕ್ತಿ ಮಾತ್ರ ಇನ್ನೂ ಸಿಕ್ಕಿಲ್ಲ. ಇದೀಗ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯಲ್ಲಿ ದಕ್ಷಿಣ ಆಫ್ರಿಕಾ ವೈರಸ್ ಪತ್ತೆಯಾಗಿದೆ. ದುಬೈನಿಂದ ಬೆಂಗಳೂರಿಗೆ ವಾಪಸಾಗಿದ್ದ ವ್ಯಕ್ತಿಯಲ್ಲಿ ದಕ್ಷಿಣ ಆಫ್ರಿಕಾದ ವೈರಸ್ ಕಂಡು ಬಂದಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ಗೆ ಕೊಟ್ಟು ಶಿವಮೊಗ್ಗಕ್ಕೆ ತೆರಳಿದ್ದರು. ಈಗ ಇವರ ವರದಿ ಬಂದಿದ್ದು ದಕ್ಷಿಣ ಆಫ್ರಿಕಾ ವೈರಸ್ ಪತ್ತೆಯಾಗಿದೆ.
ಶಿವಮೊಗ್ಗದ ಜೆಪಿ ನಗರದ ನಿವಾಸಿ 53 ವರ್ಷದ ಈ ವ್ಯಕ್ತಿ KIABಯಲ್ಲಿ ಗಂಟಲುದ್ರವ ಪರೀಕ್ಷೆ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಜೆನೆಟಿಕ್ ಸೀಕ್ವೆನ್ಸ್ನಲ್ಲಿ ಸೌತ್ ಆಫ್ರಿಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು 7 ದಿನ ಹೋಮ್ ಐಸೋಲೇಷನ್ನಲ್ಲಿ ಇರಿಸಲಾಗಿದ್ದು ಈಗ ಶಿವಮೊಗ್ಗದ ಮೆಗ್ಗಾನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಟ್ರಾವೆಲ್ ಹಿಸ್ಟರಿ, ಪ್ರೈಮರಿ ಕಾಂಟ್ಯಾಕ್ಟ್ ಪತ್ತೆ ಕಾರ್ಯ ಆರಂಭವಾಗಿದೆ. ಸದ್ಯ 9 ಜನ ಪ್ರಾಥಮಿಕ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.
ಸೋಂಕಿತನಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಶಿವಮೊಗ್ಗ ಸೋಂಕಿತನಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆಫ್ರಿಕಾ ವೈರಸ್ ಬಂದಿರೋ ವ್ಯಕ್ತಿ ಆರೋಗ್ಯವಾಗಿದ್ದಾರೆ ಎಂದು ಟಿವಿ9ಗೆ ಶಿವಮೊಗ್ಗ ಡಿಹೆಚ್ಒ ರಾಜೇಶ್ ಸುರಗಿಹಳ್ಳಿ ಸ್ಪಷ್ಟಪಡಿಸಿದ್ದಾರೆ. ಸೋಂಕಿತನ ಪತ್ನಿ, ಮಗುವನ್ನು ಐಸೋಲೇಷನ್ ಮಾಡಲಾಗಿದೆ. ಹಾಗೂ ಸೋಂಕಿತನಿದ್ದ ಏರಿಯಾದಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ಸೋಂಕಿನ ಲಕ್ಷಣ ಕಂಡು ಬಂದ್ರೆ ಟೆಸ್ಟ್ ಮಾಡಿಸಿಕೊಳ್ಳುವಂತೆ ಆರೋಗ್ಯ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.
ಮನೆ, ಅಂಗಡಿ ಸೀಲ್ಡೌನ್ ಮಂಜಾಗ್ರತೆಯಾಗಿ ಸೋಂಕಿತನ ಮನೆ, ಅಂಗಡಿ ಸೀಲ್ಡೌನ್ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಸಂಬಂಧಿಕರಿಂದ ಬೀಗ ಹಾಕಲಾಗಿದೆ. ಆರೋಗ್ಯ ಸಿಬ್ಬಂದಿಯಿಂದ ಸ್ಥಳೀಯರ ಗಂಟಲುದ್ರವ ಪರೀಕ್ಷೆ ಮಾಡಲಾಗುತ್ತಿದ್ದು ಈಗಾಗಲೇ 10ಕ್ಕೂ ಹೆಚ್ಚು ಜನರಿಗೆ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಸೋಂಕಿತ ಶಿವಮೊಗ್ಗಕ್ಕೆ ಬಂದು 15 ದಿನಗಳ ಬಳಿಕ ಹೊಸ ವೈರಸ್ ದೃಢವಾಗಿದೆ.
ಇದನ್ನೂ ಓದಿ: Covid 19 Vaccine: ಭಾರತದ ಕೊರೊನಾ ಲಸಿಕೆ ವಾಪಾಸ್ ಮಾಡುವ ವಿಚಾರ ಸತ್ಯಕ್ಕೆ ದೂರ: ದಕ್ಷಿಣ ಆಫ್ರಿಕಾ
Published On - 12:14 pm, Thu, 11 March 21