AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ದೂಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ! ಮಾಲೀಕರಿಗೆ ಶಾಕ್ ಕೊಟ್ಟ ದೂಡಾ ಅಧಿಕಾರಿ

ಜಿಲ್ಲೆಯ ಬಸವೇಶ್ವರ ಬಡಾವಣೆಯ ದೂಡಾದ ರಸ್ತೆ ಮತ್ತು ಪಾರ್ಕ್ ಜಾಗಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಕ್ರಮವಾಗಿ ಮನೆ, ಮತ್ತು ವಾಣಿಜ್ಯ ಸಂಕೀರ್ಣಗಳನ್ನ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿಯೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಆಸ್ತಿಯನ್ನ ಒತ್ತುವರಿ ಮಾಡಿದವರಿಗೆ ದೂಡಾ ಅಧ್ಯಕ್ಷರು ಶಾಕ್ ನೀಡಿದ್ದಾರೆ.

ದಾವಣಗೆರೆ ದೂಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿ! ಮಾಲೀಕರಿಗೆ ಶಾಕ್ ಕೊಟ್ಟ ದೂಡಾ ಅಧಿಕಾರಿ
ಒತ್ತುವರಿ ಜಾಗದಲ್ಲಿ ಕಟ್ಟಲಾದ ಮನೆ
sandhya thejappa
|

Updated on: Mar 20, 2021 | 11:59 AM

Share

ದಾವಣಗೆರೆ: ಪುಗ್ಸಟ್ಟೆ ಸಿಗುತ್ತೆ ಎಂದರೆ ನಂಗೊಂದು ಇರಲಿ, ನಮ್ಮ ಅಪ್ಪಗೊಂದು ಇರಲಿ ಅನ್ನೋ ಜನರೂ ಇದಾರೆ! ಅದರಲ್ಲೂ ಸರ್ಕಾರಕ್ಕೆ ಪಂಗನಾಮ ಹಾಕುವುದು ಎಂದರೆ ಬಹುತೇಕರದ್ದು ಎತ್ತಿದ ಕೈ. ಅದರಂತೆ ದಾವಣಗೆರೆ ನಗರದಲ್ಲಿ ಪಾರ್ಕ್​ಗೆ  ಬಿಟ್ಟಿದ್ದ ಸಾವಿರಾರು ಅಡಿ ಭೂಮಿಯನ್ನ ಒಂದು ಸ್ವಲ್ಪವೂ ಅನುಮಾನ ಬಾರದಂತೆ ಗುಳುಂ ಮಾಡಿದ್ದಾರೆ. ಈ ಜಾಗಕ್ಕೆ ಇಲಾಖೆ ಅಧಿಕಾರಿಗಳು ಹೋಗಿದ್ದೆ ತಡ ಅಲ್ಲಿ ನಡುಕ ಶುರುವಾಗಿತ್ತು.

ಜಿಲ್ಲೆಯ ಬಸವೇಶ್ವರ ಬಡಾವಣೆಯ ದೂಡಾದ (ದಾವಣಗೆರೆ ನಗರಾಭಿವೃದ್ಧಿ ಮಂಡಳಿ) ರಸ್ತೆ ಮತ್ತು ಪಾರ್ಕ್ ಜಾಗಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಕ್ರಮವಾಗಿ ಮನೆ ಮತ್ತು ವಾಣಿಜ್ಯ ಸಂಕೀರ್ಣಗಳನ್ನ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿಯೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಆಸ್ತಿಯನ್ನ ಒತ್ತುವರಿ ಮಾಡಿದವರಿಗೆ ದೂಡಾ ಅಧ್ಯಕ್ಷರು ಶಾಕ್ ನೀಡಿದ್ದಾರೆ.

ದೂಡಾದ ಪಾರ್ಕ್ ಜಾಗವನ್ನ ಶಶಿಕಲಾ ಸತ್ಯ ನಾರಾಯಣ ಮತ್ತು ವರಲಕ್ಷ್ಮೀ ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ದೂಡಾ ಜಾಗವನ್ನ ಒತ್ತುವರಿ ಮಾಡಿಕೊಂಡು ಮನೆಯನ್ನ ಕಟ್ಟಲಾಗುತ್ತಿತ್ತು. ಈ ಹಿಂದೆ ಬಸವೇಶ್ವರ ಬಡಾವಣೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ 25 ಸಾವಿರ ಅಡಿ ಜಾಗವನ್ನು ಪಾರ್ಕ್​ಗೆ ಮೀಸಲು ಇಡಲಾಗಿತ್ತು. ಆದರೆ ಅಲ್ಲಿ ಯಾವೂದೇ ಪಾರ್ಕ್ ನಿರ್ಮಾಣ ಮಾಡಲಾಗಿಲ್ಲ.

ಇದ್ದ 25 ಸಾವಿರ ಅಡಿ ಜಾಗದಲ್ಲಿ ಲೇ ಔಟ್ ಮಾಲೀಕರು ಎನ್ನಲಾದ ವರಲಕ್ಷ್ಮೀ ಅವರಿಂದ ಸೈಟ್ ಖರೀದಿ ಮಾಡಿದ ಶಶಿಕಲಾ ಸತ್ಯನಾರಾಣ ಇಬ್ಬರು ಸೇರಿ ಅಕ್ಕಪಕ್ಕ ಬರೋಬ್ಬರಿ 10 ಸಾವಿರ ಅಡಿಗೂ ಹೆಚ್ಚು ಜಾಗದಲ್ಲಿ ಎರಡು ಮನೆಗಳನ್ನ ಅಕ್ರಮವಾಗಿ ಕಟ್ಟಿದ್ದಾರೆ. ಇದನ್ನ ಖಚಿತಪಡಿಸಿಕೊಂಡ ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್ ಮಾರ್ಚ್18 ರಂದು ಒತ್ತುವರಿಯಾದ ಜಾಗಕ್ಕೆ ಭೇಟಿ ಕೊಟ್ಟು ಅದನ್ನ ಹದ್ದುಬಸ್ತು ಗೊಳಿಸಿದ್ದಾರೆ.

ಪಾರ್ಕ್​ಗೆ ಮೀಸಲಿಟ್ಟ ಜಾಗದ ಪಕ್ಕದಲ್ಲಿರುವ ರಸ್ತೆ

ಜೊತೆಗೆ ಈಗಾಗಲೇ ಪಾಲಿಕೆಯಲ್ಲಿ ಎರಡು ಡೋರ್ ನಂಬರ್ ರದ್ದುಗೊಂಡಿದೆ. ಅಲ್ಲದೆ ಒತ್ತುವರಿ ಜಾಗದ ಕೇಸ್ ಕೋರ್ಟ್​ನಲ್ಲಿದ್ದು, ಕೋರ್ಟ್ ಆದೇಶವಾದ ನಂತರ ಮನೆಯನ್ನ ಡೆಮಾಲಿಶ್ ಮಾಡಲಾಗುತ್ತದೆ ಅಂತ ಒತ್ತುವರಿದಾರರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಿಳಿಸಿದ್ದಾರೆ.

ಮಾಲೀಕರ ಆಕ್ರೋಶ ದೂಡಾದ ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮನೆಯ ಮಾಲೀಕ ಭರತ್, ನಾವು ಟೌನ್ ಪ್ಲ್ಯಾನ್​ನಂತೆ ಎಲ್ಲ ರೀತಿಯ ದಾಖಲೆ ಇಟ್ಟುಕೊಂಡು ಮನೆಯನ್ನ ನಿರ್ಮಿಸಿದ್ದೇವೆ. ಅಲ್ಲದೆ ಈ ಕೇಸ್ ಇನ್ನೂ ಕೋರ್ಟ್​ನಲ್ಲಿದೆ. ಹೀಗಿರುವಾಗ ನೋಟಿಸ್ ನೀಡದೇ ಈ ರೀತಿ ಏಕಾಏಕಿ ದೂಡಾದವರು ಬರುವುದು ತಪ್ಪು. ಪಾಲಿಕೆಯಲ್ಲಿ ಡೋರ್ ನಂಬರ್ ಪಡೆದಿದ್ದೇವೆ. ದೂಡದಿಂದ ಅನುಮತಿ ಇಲ್ಲ. ಈ ಬಗ್ಗೆ ವಿಚಾರಿಸುತ್ತೇವೆ ಅಂತ ದೂಡಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿ

ಕಳೆದ ಎರಡ್ಮೂರು ತಿಂಗಳಿಂದ ಹೆಚ್ಚು ಸಕ್ರಿಯವಾಗಿರುವ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಒತ್ತುವರಿಯಾದ ದೂಡಾದ ಆಸ್ತಿಯನ್ನ ಒಂದೊಂದಾಗಿಯೇ ತೆರವುಗೊಳಿಸುತ್ತಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡುವವರಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಜೊತೆಗೆ ಮನೆ ಕಟ್ಟುವಾಗ ದೂಡಾದಲ್ಲಿ ಸೈಟ್ ಪರಿಶೀಲನೆ ನಡೆಸಿ ಅಂತಾ ಜನರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ದಾವಣಗೆರೆ ಮತ್ತು ಹರಿಹರ ನಗರದ ವಿವಿಧ ಪ್ರದೇಶದಲ್ಲಿ ಸರ್ಕಾರ ಜಾಗ ಕಬಳಿಸಿರುವುದನ್ನ ಪತ್ತೆ ಹಚ್ಚಿ ಸುಮಾರು 55 ಕೋಟಿ ರೂಪಾಯಿ ಆಸ್ತಿಯನ್ನ ಸರ್ಕಾರ ವಾಪಸ್​ ಪಡೆದಿದೆ.

ಇದನ್ನೂ ಓದಿ

ಸಿಡಿ ಆರೋಪಿ ಶ್ರವಣ್​ ಸಹೋದರ ನಾಪತ್ತೆ ಪ್ರಕರಣ: ಹೇಬಿಯಸ್​ ಕಾರ್ಪಸ್​ ಅರ್ಜಿ ಸುಖಾಂತ್ಯ

ಇಂದಿಗೆ ಪೆಟ್ರೋಲ್​ ಬೆಲೆ ಶತಕ ಬಾರಿಸಬೇಕಿತ್ತು! ಆದ್ರೆ ನಿಶ್ಚಲವಾಗಿ ನಿಂತುಬಿಟ್ಟಿದೆ. ಏನಿದರ ರಾಜಕೀಯ? ಇಲ್ಲಿದೆ ವಿವರ