AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ನಲ್ಲಿ ಹೆಚ್ಚು ಮಾತನಾಡಬೇಡ ಎಂದು ಹೇಳಿದ್ದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣವಾಯ್ತಾ?

ಮಾರ್ಚ್ 3 ರಂದು ಇಲಿಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸ್ನೇಹಾ, ಸತತ 17 ದಿನಗಳ ಜೀವನ್ಮರಣ ಹೋರಾಟ ನಡೆಸಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್​ನಲ್ಲಿ ಹೆಚ್ಚು ಮಾತನಾಡಬೇಡ ಎಂದು ಹೇಳಿದ್ದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣವಾಯ್ತಾ?
ಸ್ನೇಹಾ (18)
preethi shettigar
|

Updated on:Mar 20, 2021 | 2:05 PM

Share

ದೊಡ್ಡಬಳ್ಳಾಪುರ: ಇಲಿ ಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ. ಮೊಬೈಲ್​ನಲ್ಲಿ ಹೆಚ್ಚಾಗಿ ಮಾತನಾಡುತ್ತಿಯಾ ಎಂದು ಪೊಷಕರು ಬೈದಿದ್ದಕ್ಕೆ ಮನ ನೊಂದ ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಯ ಯುವತಿ ಸ್ನೇಹಾ (18) ಆತ್ಯಹತ್ಯೆಗೆ ಯತ್ನಿಸಿದ್ದಳು.

ಮಾರ್ಚ್ 3 ರಂದು ಇಲಿ ಪಾಷಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸ್ನೇಹಾ, ಸತತ 17 ದಿನಗಳ ಜೀವನ್ಮರಣ ಹೋರಾಟ ನಡೆಸಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೇಣು ಬೀಗಿದ ಸ್ಥೀತಿಯಲ್ಲಿ ಗೃಹಿಣಿ ಪತ್ತೆ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನಳಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಳಿನಿ ಪೋಷಕರು ಪತಿ ಶ್ರೀರಾಮ್ ವಿರುದ್ಧ ಕೊಲೆಗೈದಿರುವ ಆರೋಪ ಮಾಡಿದ್ದು, ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ.

suicide

ನಳಿನಿ ಮೃತ ಗೃಹಿಣಿ

ಇದನ್ನೂ ಓದಿ: 

ಫೈನಲ್​ನಲ್ಲಿ ಸೋಲು: ಆತ್ಮಹತ್ಯೆಗೆ ಶರಣಾದ ದಂಗಲ್​ ಕುಸ್ತಿಪಟು ಗೀತಾ- ಬಬಿತಾ ಫೋಗಾಟ್ ಸೋದರಸಂಬಂಧಿ ರಿತಿಕಾ ಫೋಗಾಟ್

ರಮೇಶ್ ಜಾರಕಿಹೊಳಿಯವರಿಂದಲೇ ಸಿಡಿ ರಿಲೀಸ್ ಆಗಿದೆ; ಇದರಿಂದ ನನ್ನ ಪೋಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ -ಸಂತ್ರಸ್ತೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ

Published On - 11:45 am, Sat, 20 March 21