ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ ನಾಗೇಂದ್ರ ಜಾರಿ ನಿರ್ದೇಶನಾಲಯ ವಶಕ್ಕೆ

|

Updated on: Jul 12, 2024 | 12:39 PM

ಸಚಿವರಾಗಿದ್ದಾಗ ₹ 94 ಕೋಟಿ ಹಣವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುವಂತೆ ಆದೇಶ ನೀಡಿದ ಆರೋಪ ನಾಗೇಂದ್ರ ಅವರ ಮೇಲಿದೆ. ನಾವು ಈಗಾಗಲೇ ವರದಿ ಮಾಡಿರುವಂತೆ ಜಾರಿ ನಿರ್ದೇಶನಾಲಯ ನಾಗೇಂದ್ರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ತನಿಖೆಗಿಳಿದಾಗಲೇ ಕೆಲವರ ಬಂಧನವಾಗೋದು ನಿಶ್ಚಿತವಾಗಿತ್ತು. ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಈಡಿ ಇಂದು ಬೆಳಗ್ಗೆ ತನ್ನ ವಶಕ್ಕೆ ಪಡೆದುಕೊಂಡಿದೆ. ನಗರದಲ್ಲಿರುವ ನಾಗೇಂದ್ರ ಅವರ ನಿವಾಸದಿಂದ ಮಾಜಿ ಸಚಿವನನ್ನು ಈಡಿ ಅಧಿಕಾರಿಗಳು ಕರೆದೊಯ್ಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಾಗೇಂದ್ರರ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನಿಸಿದರಾದರೂ ಅಧಿಕಾರಗಳ ಎಳೆದಾಟದಲ್ಲಿ ಅವರು ಮಾತಾಡುವುದು ಸಾಧ್ಯವಾಗಲಿಲ್ಲ. ತಳ್ಳಾಟದಲ್ಲಿ ಮಾಜಿ ಸಚಿವನ ಪಾದರಕ್ಷೆ ಕಿತ್ತಿ ಬರುತ್ತದೆ. ನಾಗೇಂದ್ರರನ್ನು ನಗರದ ಶಾಂತಿನಗರದಲ್ಲಿರುವ ಈಡಿ ಕಚೇರಿಗೆ ಕರೆತರಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ ಚಂದ್ರಶೇಖರನ್ ಅವರು ಆತ್ಮಹತ್ಯೆಯ ಮೂಲಕ ಸಾವಿಗೆ ಶರಣಾದ ಬಳಿಕ 187 ಕೋಟಿ ರೂ. ಹಗರಣ ಬಯಲಿಗೆ ಬಂದಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್