SSLC, 2nd PUC Exams 2021; ವಿದ್ಯಾರ್ಥಿಗಳಿಗೆ ರಿಲೀಫ್ ಕೊಡುತ್ತಾ ರಾಜ್ಯ ಸರ್ಕಾರ? ಅಂತಿಮ ನಿರ್ಧಾರ ಇಂದು
ಕೇಂದ್ರ ಸರ್ಕಾರವೇ ಸಿಬಿಎಸ್ಇ, ಐಸಿಎಸ್ಇ ಎಕ್ಸಾಂಗೆ ಬ್ರೇಕ್ ಕೊಟ್ಟಿದೆ. ವಿದ್ಯಾರ್ಥಿಗಳಿಗೂ ರಿಲೀಫ್ ಕೊಟ್ಟಿದೆ. ಆದ್ರೆ, ಕರುನಾಡಿನಲ್ಲಿ ಮಾತ್ರ ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆ ನಡೆಸ್ಬೇಕಾ.. ಬೇಡ್ವಾ ಅನ್ನೋದರ ಬಗ್ಗೆ ನಿರ್ಧಾರಕ್ಕೆ ಬಂದಿಲ್ಲ. ಆದ್ರೆ, ಇವತ್ತು ಎಲ್ಲಾ ಗೊಂದಲಗಳಿಗೆ ಶಿಕ್ಷಣ ಸಚಿವರು ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೈಯಲ್ಲಿ ಬುಕ್ ಹಿಡ್ಕೊಂಡು ಓದಿದ್ದಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಎಕ್ಸಾಂ ನಡೆದೇ ಬಿಡುತ್ತಾ..? ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ಮಾಡ್ತಾರಾ ಅಂತ ದಿಕ್ಕುಗಳಂತೂ ನೋಡ್ತಿದ್ದಾರೆ. ಪೋಷಕರೂ ಕೂಡ ಮಕ್ಕಳಿಗೆ ಓದು ಓದು ಅಂತ ಹೇಳೋಕು ಆಗ್ದೆ, ಸುಮ್ಮನೆ ಇರೋಕೆ ಆಗದೆ ಒದ್ದಾಡ್ತಿದ್ದಾರೆ. ಈ ನಡುವೆ ಶಿಕ್ಷಣ ಸಚಿವರು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ
ಇವತ್ತೇ ನಿರ್ಧಾರ ಆಗುತ್ತಾ ಎಕ್ಸಾಂ ಭವಿಷ್ಯ? ಕೇಂದ್ರ ಸರ್ಕಾರವೇ ಸಿಬಿಎಸ್ಇ, ಐಸಿಎಸ್ಇ ಎಕ್ಸಾಂ ರದ್ದು ಮಾಡಿದೆ. ಆದ್ರೆ, ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ SSLC ಹಾಗೂ ದ್ವಿತೀಯ ಪಿಯುಸಿ ಎಕ್ಸಾಂ ಕಥೆ ಏನು ಅನ್ನೋದು ಗೊತ್ತಾಗದೇ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ. ಇದ್ರ ಮಧ್ಯೆ ಕೊರೊನಾ ಕೇಕೆ ಹಾಕ್ತಿರೋದ್ರಿಂದ ಪರೀಕ್ಷೆ ರದ್ದು ಮಾಡುವಂತೆ ಶಿಕ್ಷಣ ತಜ್ಞರು ಮತ್ತು ಪೋಷಕರು ಒತ್ತಾಯಿಸಿದ್ದಾರೆ. ಈ ನಡುವೆ ಅಲರ್ಟ್ ಆಗಿರೋ ಸಚಿವ ಸುರೇಶ್ ಕುಮಾರ್, ಅಳೆದು ತೂಗಿ ಒಂದು ನಿರ್ಧಾರಕ್ಕೆ ಬಂದಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ, ಪರೀಕ್ಷೆ ಬಿಕ್ಕಟ್ಟು ಶಮನಕ್ಕೆ ಇವತ್ತು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಇವತ್ತು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಎಕ್ಸಾಂ ಫಿಕ್ಸ್ ಮಾಡೋಕೆ ಸಚಿವರ ಕೊನೇ ಕಸರತ್ತು ಇನ್ನು, ಕೊನೇ ಹಂತದ ಕಸರತ್ತು ನಡೆಸುತ್ತಿರುವ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಂದ್ರೆ, ಸದ್ಯ ದೇಶದಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಪರೀಕ್ಷೆ ನಡೆಸುತ್ತಿವೆ? ಒಂದು ವೇಳೆ ನಡೆಸಿದ್ರೆ ಹೇಗೆ..? ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಜೊತೆಗೆ ಪಿಯುಸಿ ಪರೀಕ್ಷೆ ನಡೆಸೋಕೆ ಪರ್ಯಾಯ ಮಾದರಿ ಏನು ಅನ್ನೋದ್ರ ಬಗ್ಗೆ ಮಾಹಿತಿ ಕೇಳಿದ್ದಾರೆ. ಇಷ್ಟೇ ಅಲ್ಲ, ಶಿಕ್ಷಣ ಇಲಾಖೆಗೆ ತಜ್ಞರು ನೀಡಿರೋ ಪ್ಲ್ಯಾನ್ನಂತೆ ಜುಲೈ 2ನೇ ವಾರದಲ್ಲಿ ಪರ್ಯಾಯ ಮಾದರಿಯಲ್ಲಿ ಪರೀಕ್ಷೆ ನಡೆಯೋ ಸಾಧ್ಯತೆ ಇದೆ.
ಒಟ್ನಲ್ಲಿ, ಈಗಾಗಲೇ ದೇಶದಲ್ಲಿ ಹಲವು ರಾಜ್ಯಗಳು ಪರೀಕ್ಷೆ ರದ್ದು ಮಾಡಿದ್ದು, ನಮ್ಮಲ್ಲಿಯೂ ಎಕ್ಸಾಂ ರದ್ದಾಗುತ್ತಾ ಅಥವಾ ಎಕ್ಸಾಂ ನಡೆಯುತ್ತಾ? ನಡೆದ್ರೆ ಹೇಗಿರುತ್ತೆ? ಅನ್ನೋ ಸಾಲು ಸಾಲು ಪ್ರಶ್ನೆ ಎದ್ದಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇವತ್ತೇ ಉತ್ತರ ನೀಡೋ ಸಾಧ್ಯತೆ ಇದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಕಾಟ ತಾಳಲಾರದೆ WWE ಕುಸ್ತಿಪಟು ದಿ ಗ್ರೇಟ್ ಖಲಿ ಮಾಡಿದ್ದೇನು ಗೊತ್ತಾ?