100 ಕೋಟಿಗೂ ಹೆಚ್ಚು ಅನುದಾನದ ಕಾರ್ಯಕ್ರಮಗಳ ಕಡ್ಡಾಯ ಮೌಲ್ಯಮಾಪನಕ್ಕೆ ಯಡಿಯೂರಪ್ಪ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 20, 2021 | 3:36 PM

2020-21ನೇ ಸಾಲಿನಲ್ಲಿ ₹ 18,001 ಕೋಟಿ, 2021-22ರ ಸಾಲಿನಲ್ಲಿ ₹ 17,036 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇತರ ಮೂಲಗಳ ಅನುದಾನ ಸೇರಿ, ಒಟ್ಟು ಅನುದಾನದ ಮೊತ್ತ 38,078 ಕೋಟಿ ಎಂದು ಸುರೇಶ್​ ಕುಮಾರ್ ವಿವರಿಸಿದರು.

100 ಕೋಟಿಗೂ ಹೆಚ್ಚು ಅನುದಾನದ ಕಾರ್ಯಕ್ರಮಗಳ ಕಡ್ಡಾಯ ಮೌಲ್ಯಮಾಪನಕ್ಕೆ ಯಡಿಯೂರಪ್ಪ ಸೂಚನೆ
School reopen in Karnataka: ಅಕ್ಟೋಬರ್ ಬಳಿಕ ಶಾಲೆಗಳ ಪುನರಾಂಭದ ಸುಳಿವು ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
Follow us on

ಬೆಂಗಳೂರು: ರಾಜ್ಯದ 24 ಇಲಾಖೆಗಳ ಮೂಲಕ ಜಾರಿಯಾಗುತ್ತಿರುವ ಕೇಂದ್ರ ಕೇಂದ್ರದ ಪುರಸ್ಕೃತ 96 ಯೋಜನೆಗಳ ಪ್ರಗತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪರಿಶೀಲಿಸಿದರು. ಸಭೆಯ ನಂತರ ಶಿಕ್ಷಣ ಎಸ್.ಸುರೇಶ್​ಕುಮಾರ್ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. 2020-21ನೇ ಸಾಲಿನಲ್ಲಿ ₹ 18,001 ಕೋಟಿ, 2021-22ರ ಸಾಲಿನಲ್ಲಿ ₹ 17,036 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇತರ ಮೂಲಗಳ ಅನುದಾನ ಸೇರಿ, ಒಟ್ಟು ಅನುದಾನದ ಮೊತ್ತ 38,078 ಕೋಟಿ ಎಂದು ಸುರೇಶ್​ ಕುಮಾರ್ ವಿವರಿಸಿದರು.

ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಜಲಜೀವನ್ ಮಿಷನ್, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ವಿಪತ್ತು ನಿಧಿಗೆ ಸಹಾಯಧನ, ಪೂರಕ ಪೌಷ್ಟಿಕ ಕಾರ್ಯಕ್ರಮಗಳ ಪ್ರಗತಿ ನಿರೀಕ್ಷಿತ ಪ್ರಮಾಣದಲ್ಲಿ ಇದೆ ಎಂದು ಸಚಿವರು ತಿಳಿಸಿದರು.

ಗ್ರಾಮ ಸಡಕ್ ಯೋಜನೆಯಲ್ಲಿ ಒಟ್ಟು 5611 ಕಿಮೀ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ. ಜಲಜೀವನ್‌ ಮಿಷನ್​ ಯೋಜನೆಯಡಿ ಈ ವರ್ಷ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕೊಡುವ ಗುರಿ ಇದೆ. ಒಟ್ಟು ₹ 646 ಕೋಟಿ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ ಬಿಡುಗಡೆ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ 1.20 ಲಕ್ಷ ಮನೆಗಳನ್ನು ಕೊಳಗೇರಿಗಳಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

₹ 100 ಕೋಟಿಗೂ ಹೆಚ್ಚು ಅನುದಾನ ಇರುವ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷೆ ಸುಸೂತ್ರ
ರಾಜ್ಯದಲ್ಲಿ ನಿನ್ನೆ (ಜುಲೈ 19) ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದವು. ಶೇ 99.6ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಎಲ್ಲಿಯೂ ಅಹಿತಕರ ಘಟನೆಗಳು ನಡೆಯಲಿಲ್ಲ. ನಾಡಿದ್ದೂ ಕೂಡ ಭಾಷಾ ಪರೀಕ್ಷೆ ಕೂಡ ಸುಸೂತ್ರವಾಗಿಯೇ ನಡೆಯಲಿದೆ ಎಂಬ ನಂಬಿಕೆ ಇದೆ. ನೋಡಲ್ ಆಫೀಸರ್​ಗಳು ತಮಗೆ ಜವಾಬ್ದಾರಿ ನೀಡಿರುವ ಜಿಲ್ಲೆಗಳಲ್ಲಿಯೇ ಇರುತ್ತಾರೆ. ನಾನು ಗಮನಿಸಿದ ಹಾಗೆ ಎಸ್ಎಸ್ಎಲ್​ಸಿ ಪರೀಕ್ಷೆ ಸಮಾಜದ ಪರೀಕ್ಷೆ ಎನಿಸಿತ್ತು ಎಂದರು.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಪೈಕಿ 58 ಮಂದಿಗೆ ಕೊವಿಡ್ ದೃಢಪಟ್ಟಿದೆ. ಆ ಮಕ್ಕಳು ಇತರ ಸಿಸಿಸಿ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿದ್ದ ಇಬ್ಬರಿಗೂ ಲಕ್ಷಣಗಳು ಗೋಚರಿಸಿದ್ದವು ಎಂದು ಸಚಿವರು ಮಾಹಿತಿ ನೀಡಿದರು.

(Education Minister Suresh Kumar Explained Proceedings of Meeting by BS Yediyurappa)

ಇದನ್ನೂ ಓದಿ: SSLC exam 2021: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕಡ್ಡಾಯ – ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2021 ಜುಲೈ 20, ಸಂಜೆ 4.30ಕ್ಕೆ ಪ್ರಕಟ: ಶಿಕ್ಷಣ ಸಚಿವ ಸುರೇಶ್ ಕುಮಾರ್

Published On - 3:35 pm, Tue, 20 July 21