ರಾಜ್ಯದಲ್ಲಿ ಹೊಸದಾಗಿ 8 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ

ರಾಜ್ಯದಲ್ಲಿ ಹೊಸದಾಗಿ 8 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಹೊಸದಾಗಿ 8 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ಹೀಗಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ನಿನ್ನೆ ಕೇವಲ ಮೂರು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು.ಆದರೆ ಇಂದು 8 ಸೋಂಕಿತರು ಪತ್ತೆಯಾಗಿದ್ದು, ಸಂಜೆಯ ಹೆಲ್ತ್ ಬುಲೆಟಿನ್ ಬಾಕಿ ಇದೆ.

ಇಂದು ದಾಖಲಾದ ಹೊಸ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ, ಬಾಗಲಕೋಟೆ, ವಿಜಯಪುರಗಳಲ್ಲಿ ತಲಾ 2 ಪ್ರಕರಣಗಳು ಹಾಗೂ ಬೆಂಗಳೂರು, ಮಂಡ್ಯದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇವರಲ್ಲಿ ಮೂವರು ಮಹಿಳೆಯರು, ಐವರು ಪುರುಷರು ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

Published On - 1:03 pm, Mon, 27 April 20

Click on your DTH Provider to Add TV9 Kannada