ಮುಖ್ಯಮಂತ್ರಿಯನ್ನ ಭೇಟಿ ಮಾಡಬೇಡಿ, ಗುಪ್ತಚರ ಇಲಾಖೆಗೆ ಚು.ಆಯೋಗ ವಾರ್ನಿಂಗ್

|

Updated on: Nov 19, 2019 | 12:58 PM

ಬೆಂಗಳೂರು: ಡಿ.5ರಂದು ರಾಜ್ಯದ 15 ಕ್ಷೇತ್ರಗಳಿಗೆ ಬೈಎಲೆಕ್ಷನ್ ಹಿನ್ನೆಲೆ ಸಿಎಂ ಭೇಟಿ ಮಾಡದಂತೆ ರಾಜ್ಯ ಗುಪ್ತಚರ ಇಲಾಖೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಸಿಎಂ ಯಡಿಯೂರಪ್ಪಗೆ ವರದಿ ನೀಡದಂತೆಯೂ ಸೂಚನೆ ನೀಡಲಾಗಿದೆ. ಒಂದು ಪಕ್ಷ ಮತ್ತು ಸಿಎಂ ಪರ ಕೆಲಸ ಮಾಡುತ್ತಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ. ಸಿಎಂ ಅಧೀನದಲ್ಲಿ ಕೆಲಸ ಮಾಡುವ ಗುಪ್ತಚರ ಇಲಾಖೆ ಪ್ರತಿದಿನ ರಾಜ್ಯದ ಬೆಳವಣಿಗೆಗಳ ಬಗ್ಗೆ […]

ಮುಖ್ಯಮಂತ್ರಿಯನ್ನ ಭೇಟಿ ಮಾಡಬೇಡಿ, ಗುಪ್ತಚರ ಇಲಾಖೆಗೆ ಚು.ಆಯೋಗ ವಾರ್ನಿಂಗ್
Follow us on

ಬೆಂಗಳೂರು: ಡಿ.5ರಂದು ರಾಜ್ಯದ 15 ಕ್ಷೇತ್ರಗಳಿಗೆ ಬೈಎಲೆಕ್ಷನ್ ಹಿನ್ನೆಲೆ ಸಿಎಂ ಭೇಟಿ ಮಾಡದಂತೆ ರಾಜ್ಯ ಗುಪ್ತಚರ ಇಲಾಖೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಸಿಎಂ ಯಡಿಯೂರಪ್ಪಗೆ ವರದಿ ನೀಡದಂತೆಯೂ ಸೂಚನೆ ನೀಡಲಾಗಿದೆ.

ಒಂದು ಪಕ್ಷ ಮತ್ತು ಸಿಎಂ ಪರ ಕೆಲಸ ಮಾಡುತ್ತಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.

ಸಿಎಂ ಅಧೀನದಲ್ಲಿ ಕೆಲಸ ಮಾಡುವ ಗುಪ್ತಚರ ಇಲಾಖೆ ಪ್ರತಿದಿನ ರಾಜ್ಯದ ಬೆಳವಣಿಗೆಗಳ ಬಗ್ಗೆ ವರದಿ ನೀಡುತ್ತಿತ್ತು. ಆದರೆ ಬೈ ಎಲೆಕ್ಷನ್ ಮುಗಿಯುವವರೆಗೂ ವರದಿ ನೀಡುವಂತಿಲ್ಲ, ಸಿಎಂ ಭೇಟಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಗುಪ್ತಚರ ಇಲಾಖೆಗೆ ಸೂಚನೆ ನೀಡಿದೆ. ಕಾನೂನು ಸುವ್ಯವಸ್ಥೆ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

Published On - 8:43 am, Tue, 19 November 19