ಸಕ್ರೆಬೈಲಿನಲ್ಲಿ ಮದಗಜನ ಆರ್ಭಟ: ಮದವೇರಿದ ಮಣಿಕಂಠನಿಂದ ಪ್ರವಾಸಿಗರಲ್ಲಿ ಕೆಲಕಾಲ ಆತಂಕ

|

Updated on: Jan 04, 2021 | 11:01 PM

ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಮದವೇರಿದ ಸಲಗವೊಂದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮದವೇರಿದ ಮಣಿಕಂಠ ಸಲಗದಿಂದ ಬಿಡಾರದಲ್ಲಿ ಕೆಲಕಾಲ ಆತಂಕದ ವಾತಾವರಣ ಎದುರಾಗಿತ್ತು.

ಸಕ್ರೆಬೈಲಿನಲ್ಲಿ ಮದಗಜನ ಆರ್ಭಟ: ಮದವೇರಿದ ಮಣಿಕಂಠನಿಂದ ಪ್ರವಾಸಿಗರಲ್ಲಿ ಕೆಲಕಾಲ ಆತಂಕ
ಸಕ್ರೆಬೈಲಿನಲ್ಲಿ ಮದಗಜನ ಆರ್ಭಟ
Follow us on

ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಮದವೇರಿದ ಸಲಗವೊಂದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮದವೇರಿದ ಮಣಿಕಂಠ ಸಲಗದಿಂದ ಬಿಡಾರದಲ್ಲಿ ಕೆಲಕಾಲ ಆತಂಕದ ವಾತಾವರಣ ಎದುರಾಗಿತ್ತು.

ಮಸ್ತಿಯಲ್ಲಿರುವ ಮಣಿಕಂಠ ಆನೆ ಮತ್ತೊಂದು ಸಲಗ ನಾಗಣ್ಣನಿಗೆ ತಿವಿದಿದ್ದಾನೆ. ಹೀಗಾಗಿ, ತುಂಗಾ ನದಿಯ ಹಿನ್ನೀರಿನಲ್ಲಿ ಇಳಿದಿದ್ದ ನಾಗಣ್ಣ ಸಲಗ ಭಯದಿಂದ ಓಡಿದ ಘಟನೆ ಸಹ ನಡೆದಿದೆ. ಈ ವೇಳೆ, ನಾಗಣ್ಣನ ಮೇಲೆ ಕೂತಿದ್ದ ಮಾವುತ ಗೌಸ್ ಭಯದಿಂದ ನೀರಿಗೆ ಹಾರಿದ್ದಾನೆ. ಬಳಿಕ ಈಜಿ ಬಂದು ದಡ ಸೇರಿದ್ದಾನೆ.

ಈ ನಡುವೆ, ಆನೆಗಳನ್ನು ನೋಡಲು ಬಂದಿದ್ದ ಪ್ರವಾಸಿಗರಲ್ಲೂ ಕೆಲಕಾಲ ಆತಂಕ ಉಂಟಾಗಿತ್ತು. ಕೊನೆಗೆ ಸಿಬ್ಬಂದಿ ಹರಸಾಹಸ ಪಟ್ಟು ಸಲಗ ಮಣಿಕಂಠನನ್ನು ಹಿಡಿದು ಬಿಡಾರಕ್ಕೆ ಕರೆತಂದರು. ಜೊತೆಗೆ, ಗಾಯಗೊಂಡ ನಾಗಣ್ಣ ಆನೆಗೆ ಬಿಡಾರದ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು.