ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ.. ಬಹಿರ್ದೆಸೆಗೆ ಹೋಗ್ತಿನಿ ಅಂತಾ ಹೋದ ಕೈದಿ ಎಸ್ಕೇಪ್​!

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಮೇಶ್ ವಡ್ಡರ್​ನ ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ ಆತ ಪರಾರಿಯಾಗಿದ್ದಾನೆ. ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ರಮೇಶ್​ ಎಸ್ಕೇಪ್​ ಆಗಿದ್ದಾನೆ ಎಂದು ಹೇಳಲಾಗಿದೆ.

ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ.. ಬಹಿರ್ದೆಸೆಗೆ ಹೋಗ್ತಿನಿ ಅಂತಾ ಹೋದ ಕೈದಿ ಎಸ್ಕೇಪ್​!
ಬಹಿರ್ದೆಸೆಗೆ ಹೋಗ್ತಿನಿ ಅಂತಾ ಹೋದ ಕೈದಿ ರಮೇಶ್ ವಡ್ಡರ್ ಎಸ್ಕೇಪ್
KUSHAL V

|

Jan 04, 2021 | 9:57 PM

ಕಲಬುರಗಿ: ಜಿಲ್ಲಾ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿಯಾಗಿರುವ ಸಂಗತಿ ವರದಿಯಾಗಿದೆ. ಜೈಲಿನ ಹೊರಗೆ ಕೃಷಿ ಕೆಲಸಕ್ಕೆ ಕಳುಹಿಸಿದ್ದಾಗ ರಮೇಶ್ ವಡ್ಡರ್ ಎಂಬ ಕೈದಿ ಪರಾರಿಯಾಗಿದ್ದಾನೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಮೇಶ್ ವಡ್ಡರ್​ನ ತೊಗರಿ ರಾಶಿಮಾಡಲು ಹೊರಗೆ ಕಳುಹಿಸಿದ್ದಾಗ ಆತ ಪರಾರಿಯಾಗಿದ್ದಾನೆ. ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ರಮೇಶ್​ ಎಸ್ಕೇಪ್​ ಆಗಿದ್ದಾನೆ ಎಂದು ಹೇಳಲಾಗಿದೆ.

ರಮೇಶ್ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ‌ ನಿವಾಸಿ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಸದ್ಯ, ಫರಹತಾಬಾದ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ: ನೀಲಗಿರಿ ಮರ ರಫ್ತು ಮಾಡ್ತಿದ್ದ ಉದ್ಯಮಿ ಮನೆ ಮೇಲೆ IT ದಾಳಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada