ಉದ್ಯೋಗ ನೀಡಿ.. ಜೈಲು ಹಕ್ಕಿಗಳಲ್ಲಿ ಸಂತಸ ಸೃಜಿಸುವಂತೆ ಮಾಡಿದ ಜಿಲ್ಲಾ ಕಾರಾಗೃಹ, ಕೈದಿಗಳ ಕೈಗೆ ದುಡಿಮೆಯ ಹಣ!

| Updated By: ಸಾಧು ಶ್ರೀನಾಥ್​

Updated on: Jan 20, 2021 | 11:31 AM

ಪ್ರತಿದಿನ ತಲಾ ಒಬ್ಬರು 55 ರೂಪಾಯಿ ವರೆಗೂ ಸಂಪಾದನೆ ಮಾಡುತ್ತಾರೆ. ಇದರಿಂದ ಬಡ ಕೈದಿಗಳ ಕೋರ್ಟ್ ಖರ್ಚಿಗೋ ಅಥವಾ ಕುಟುಂಬದ ಖರ್ಚಿಗೋ ನೆರವಾಗುತ್ತದೆ ಎನ್ನುವುದು ವಿಶೇಷ.

ಉದ್ಯೋಗ ನೀಡಿ.. ಜೈಲು ಹಕ್ಕಿಗಳಲ್ಲಿ ಸಂತಸ ಸೃಜಿಸುವಂತೆ ಮಾಡಿದ ಜಿಲ್ಲಾ ಕಾರಾಗೃಹ, ಕೈದಿಗಳ ಕೈಗೆ ದುಡಿಮೆಯ ಹಣ!
ತುಮಕೂರಿನ ಜಿಲ್ಲಾ ಕಾರಾಗೃಹ
Follow us on

ತುಮಕೂರು: ತಪ್ಪು ಮಾಡಿ ಜೈಲಿಗೆ ಸೇರುವುದು, ಮಾಡಿದ ತಪ್ಪಿಗೆ ನಾಲ್ಕು ಗೋಡೆಗಳ ಮಧ್ಯೆ ಸುಮ್ಮನೇ ಕುಳಿತು ಕಾಲಕಳೆಯಬೇಕು ಎನ್ನುವುದೇ ಜೈಲು ಶಿಕ್ಷೆ. ಆದರೆ ಇಲ್ಲೊಂದು ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆಯೇ ಇದ್ದರೆ ಮಾನಸಿಕ ಖಾಯಿಲೆಗೆ ತುತ್ತಾಗುತ್ತಾರೆ ಎಂದು ಅವರಿಗೆ ಉದ್ಯೋಗ ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಎಲ್ಲಿ ಅಂತೀರಾ ಈ ವರದಿ ನೋಡಿ.

ಗುಂಪು ಗುಂಪಾಗಿ ಇಲ್ಲಿ ಕೆಲಸ ಮಾಡುವ ದೃಶ್ಯವನ್ನು ಒಮ್ಮೆಗೆ ನೋಡಿದರೆ ಇದು ಯಾವುದೋ ಕಾರ್ಖಾನೆ ಎನಿಸುತ್ತದೆ. ಆದರೆ ಇದು ಅಸಲಿಗೆ ತುಮಕೂರು ಜಿಲ್ಲಾ ಕಾರಾಗೃಹ. ಈ ಕಾರಗೃಹದ ವಿಚಾರಾಣಾಧೀನ ಕೈದಿಗಳು ಮೈಸೂರು ಮೂಲದ ಫ್ಯಾಕ್ಟರಿಯೊಂದಕ್ಕೆ (ಸೈಕಲ್ ಅಗರಬತ್ತಿ) ಅಗರಬತ್ತಿಯನ್ನ ಬಾಕ್ಸ್​ಗೆ ತುಂಬುವ ಕೆಲಸ ಮಾಡುತ್ತಿದ್ದಾರೆ.

ಅಗರಬತ್ತಿಯನ್ನ ಬಾಕ್ಸ್ ಮಾಡಿದರೆ ಇವರಿಗೆ ಇಂತಿಷ್ಟು ಹಣವನ್ನ ನೀಡಲಾಗುತ್ತದೆ. ಈ ಒಂದು ವ್ಯವಸ್ಥೆಯನ್ನ ಜೈಲಿನ ಸೂಪರಿಂಟೆಂಡೆಂಟ್ ತಿಮ್ಮಯ್ಯ ಕಲ್ಪಸಿಕೊಟ್ಟಿದ್ದಾರೆ. ಇನ್ನೂ ತಿಳಿದೋ ಅಥವಾ ತಿಳಿಯದೆಯೋ ತಪ್ಪು ಮಾಡಿರುವ ಕೈದಿಗಳಿಗೆ ಅವರು ದುಡಿದ ಹಣವನ್ನ ಅವರ ಕುಟುಂಬಕ್ಕೆ ತಿಂಗಳಿಗೆ ಒಮ್ಮೆ ನೀಡುವ ವ್ಯವಸ್ಥೆಯೂ ಕೂಡ ಇದೆ.

ಕೈದಿಗಳು ಕೆಲಸ ಮಾಡುವ ದೃಶ್ಯ

ಪ್ರತಿದಿನ ತಲಾ ಒಬ್ಬರು 55 ರೂಪಾಯಿ ವರೆಗೂ ಸಂಪಾದನೆ ಮಾಡುತ್ತಾರೆ. ಇದರಿಂದ ಬಡ ಕೈದಿಗಳ ಕೋರ್ಟ್ ಖರ್ಚಿಗೋ ಅಥವಾ ಕುಟುಂಬದ ಖರ್ಚಿಗೋ ನೆರವಾಗುತ್ತದೆ ಎನ್ನುವುದು ವಿಶೇಷ. ಹೀಗೆ ಕೈದಿಗಳು ಈ ಕೆಲಸ ಮಾಡುವುದರಿಂದ ಸಮಯ ಹೊಗುವುದೇ ತಿಳಿಯಲ್ಲ ಹಾಗೂ ಇದರಿಂದ ಮನಸ್ಸು ಬದಲಾಗುವ ಸಾಧ್ಯತೆಗಳಿದೆ ಎಂದು ಜೈಲಿನಲ್ಲಿರುವ ಕೈದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರಾಗೃಹದ ಚಿತ್ರಣ

ಸದಾ ನಾಲ್ಕು ಗೋಡೆಗಳ ಮಧ್ಯೆ ಕೈದಿಗಳು ಇದ್ದರೆ ಅವರ ಮಾನಸಿಕ ಸ್ಥಿತಿ ಬದಲಾಗಿ ಇನ್ನಷ್ಟು ತಪ್ಪು ಮಾಡಲು ದಾರಿಯಾಗಬಹುದು. ಈ ಕಾರಣಕ್ಕೆ ಹಾಗೂ ಇವರನ್ನ ನಂಬಿರುವ ಕುಟುಂಬ ಕಂಗಲಾಗಬಾರದೆಂಬ ಉದ್ದೇಶದಿಂದ ಜೈಲರ್ ಸರ್ಕಾರದ ಜೊತೆ ಮಾತನಾಡಿ ಕೈದಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.ಇದರಿಂದ ತಿಂಗಳಿಗೊಮ್ಮೆ ಬರುವ ಹಣವನ್ನ ಕೈದಿಯ ಕಡೆಯಿಂದ ಹಾಗೂ ಕುಟುಂಬದ ಕಡೆಯಿಂದ ಅರ್ಜಿ ತೆಗೆದುಕೊಂಡು ದುಡಿದ ಹಣವನ್ನು ಸಂಬಂಧಿಕರಿಗೆ ನೀಡಲಾಗುತ್ತದೆ.

ಅಗರಬತ್ತಿ

ಒಟ್ಟಾರೆಯಾಗಿ ತಪ್ಪು ಮಾಡಿ ಜೈಲಿಗೆ ಸೇರಿರುವ ಇವರು ನಾಲ್ಕು ಗೋಡೆಗಳ ಮಧ್ಯೆ ಕೊಳೆಯಬಾರದು ಹಾಗೂ ಇವರ ಉದ್ಯೋಗದಿಂದ ಇವರನ್ನ ನಂಬಿರುವವರು ಹಾಳಾಗಬಾರದು ಎಂಬ ಉದ್ದೇಶದಿಂದ ತುಮಕೂರು ಜಿಲ್ಲಾ ಕಾರಾಗೃಹ ಉತ್ತಮ ಹೆಜ್ಜೆಯನ್ನಿಟ್ಟಿದೆ. ಹೀಗೆ ಮಾಡುವುದರಿಂದ ಸದಾ ತಪ್ಪು ಮಾಡುವ ಕೈದಿಗಳ ಮನಸ್ಸು ಬದಲಾಗುವ ಸಾಧ್ಯತೆಗಳು ಇರುತ್ತದೆ. ಅದೇನೆ ಆಗಿರಲಿ ತುಮಕೂರಿನ ಜಿಲ್ಲಾ ಕಾರಾಗೃಹದ ಈ ಕಾರ್ಯಕ್ಕೆ ಸಲಾಂ ಹೇಳಲೇಬೇಕು.

ಕೈದಿಗಳು ಅಗರಬತ್ತಿಯನ್ನು ಬಾಕ್ಸ್​ಗೆ ತುಂಬುತ್ತಿರುವ ದೃಶ್ಯ

ಕೈದಿಗಳಿಗೆ ನೆರವಾದ ಅಗರಬತ್ತಿ ಕೆಲಸ

ಜನವರಿ 27ರಂದು ಶಶಿಕಲಾ ಜೈಲಿನಿಂದ ಬಿಡುಗಡೆ ಸಾಧ್ಯತೆ -ಮದ್ರಾಸ್ ಹೈಕೋರ್ಟ್​​ಗೆ ವಕೀಲರಿಂದ ಮಾಹಿತಿ