ತಡರಾತ್ರಿ ಕಾಡಾನೆಗಳ ಕಾಟ: ತೋಟಗಳೆಲ್ಲ ನಾಶ
ಕಾಡಾನೆ ಹಿಂಡು ದಾಳಿ ನಡೆಸಿದ ಪರಿಣಾಮ ತೋಟದಲ್ಲಿ ಬೆಳೆದಿದ್ದ ಕಾಫಿ, ಬಾಳೆ ಸೇರಿದಂತೆ ಹಲವು ಬೆಳೆಗಳು ನಾಶವಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕಾಡಾನೆ ದಾಳಿಗೆ ಬೇಸತ್ತ ಸ್ಥಳೀಯರು ಅರಣ್ಯ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆ ದಾಳಿಯಿಂದ ಕಾಫಿ ತೋಟ ನಾಶಗೊಂಡ ದೃಶ್ಯ
ಮಡಿಕೇರಿ: ಅಮ್ಮತ್ತಿ ಕಾರ್ಮಾಡು ಗ್ರಾಮದ ತೋಟವೊಂದರಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದೆ. ಇದರ ಪರಿಣಾಮ ತೋಟದಲ್ಲಿದ್ದ ಕಾಫಿ, ತೆಂಗು, ಬಾಳೆಗಳು ನಾಶವಾಗಿವೆ.
ಗ್ರಾಮದ ಕುಟ್ಟಂಡ ಪೂವಿ ಚೋಂದಮ್ಮ ಮತ್ತು ಕೆ.ಎಸ್ ಪೊನ್ನಪ್ಪ ಎಂಬುವವರ ತೋಟಕ್ಕೆ ತಡರಾತ್ರಿ ಕಾಡಾನೆಗಳು ಲಗ್ಗೆಯಿಟ್ಟಿವೆ. ಕಾಡಾನೆಯ ಉಪಟಳಕ್ಕೆ ಬೆಳೆಗಾರರೆಲ್ಲ ಕಂಗಾಲಾಗಿದ್ದು, ಆನೆ ಹಾವಳಿ ತಡೆಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.




