ಜೈಲಿಗೆ ಹಾಕಿದರೂ ಸರಿ ನಾವು ಹಾಡುವುದು ವಂದೇ ಮಾತರಂ ಗೀತೆಯ ಎರಡು ಪ್ಯಾರಾ ಮಾತ್ರ: ಬಿ.ಕೆ. ಹರಿಪ್ರಸಾದ್

Updated on: Aug 18, 2026 | 12:33 PM

ವಂದೇ ಮಾತರಂ ಗೀತೆ ಕೇವಲ ಎರಡು ಚರಣಗಳನ್ನು ಹಾಡುವ ಬಗ್ಗೆ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕುರಿತ ವದಂತಿಗಳನ್ನು ಅಲ್ಲಗಳೆದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ದೇಶದ ತ್ಯಾಗ ಬಲಿದಾನಗಳನ್ನು ಗೌರವಿಸುತ್ತದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ನವದೆಹಲಿ, ಆಗಸ್ಟ್​​ 18: ಕಾಂಗ್ರೆಸ್​ನ ಯಾವ ಕಾರ್ಯಕ್ರಮದಲ್ಲೂ ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲ್ಲ. ನಾವು ಹಾಡುವುದೇ ಎರಡು ಪ್ಯಾರಾ ಮಾತ್ರ. ನೇಣುಹಾಕಿ, ಜೈಲಿಗೆ ಹಾಕಿದರೂ ನಾವು ಹಾಡುವುದು ಅಷ್ಟು ಮಾತ್ರ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ವಂದೇ ಮಾತರಂ ಗೀತೆಗೆ ಕಾಂಗ್ರೆಸ್​​ ವರಿಷ್ಠರಿಂದಲೇ ಅಗೌರವ ಆರೋಪ ಸಂಬಂಧ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಂದೇ ಮಾತರಂ ಹಾಡದಂತೆ ತಡೆದಿದ್ದಾರೆ ಎಂಬುದು ಸುಳ್ಳು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಹಾಡು ಹಾಡುವಾಗ ತಪ್ಪುಗಳಿದ್ದವು, ಅವುಗಳನ್ನು ಸರಿಪಡಿಸಿಕೊಳ್ಳಲು ಸೋನಿಯಾ ಗಾಂಧಿ ಸೂಚಿಸಿದ್ದರು. ಅಲ್ಲದೆ, ವಯಸ್ಸಿನ ಕಾರಣದಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ನೀಡುವಂತೆ ಅವರು ಮನವಿ ಮಾಡಿದ್ದರು ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Aug 18, 2026 12:33 PM
Loading...
Unable to load recommendations.
Follow Us