ಕಾರವಾರ: ಮಾಜಿ ಸಚಿವ ಆರ್.ವಿ. ದೇಶಪಾಂಡೆಗೆ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ದೇಶಪಾಂಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮಗೆ ಕೊರೊನಾ ಸೋಂಕು ಬಂದಿರುವ ಬಗ್ಗೆ ಪ್ರಕಟಿಸಿರುವ ದೇಶಪಾಂಡೆ ಅವರು ತನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಕೊರೊನಾ ತಗುಲಿದ್ದು ಇಂದು ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು, ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ್ಯಂಟಿಜೆನ್ ಟೆಸ್ಟ್ ವೇಳೆ ಜಮೀರ್ ಅಹ್ಮದ್ಗೆ ಕೊರೊನಾ ಸೋಂಕು ದೃಢವಾಗಿದ್ದು ಚಿಕ್ಕಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಐಸೋಲೇಷನ್‌ನಲ್ಲಿರಲು ಜಮೀರ್ ಖಾನ್ ನಿರ್ಧರಿಸಿದ್ದಾರೆ. ಕಳೆದ ಬಾರಿಯೂ ಜಮೀರ್ಗೆ ಕೊರೊನಾ ಸೋಂಕು ತಗುಲಿತ್ತು. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಪತ್ನಿಗೂ ಕೊರೊನಾ ದೃಢಪಟ್ಟಿದೆ. ಕಮಲ್ ಪಂತ್ ಮತ್ತು ಸೌಮೇಂದು ಮುಖರ್ಜಿಗೆ ಕೊರೊನಾ ಟೆಸ್ಟ್ ಮಾಡಿದ್ದು ಇಬ್ಬರ ಕೊವಿಡ್ ಟೆಸ್ಟ್ ವರದಿಯೂ ನೆಗೆಟಿವ್ ಬಂದಿದೆ.
I have tested positive for COVID-19. I request everyone who came in close contact with me over the last few days to isolate themselves and get tested.
— R V Deshpande (@RV_Deshpande) April 23, 2021
(ex minister, haliyal congress mla rv deshpande contracts coronavirus in karwar)
ಇದನ್ನೂ ಓದಿ: ಆಯಾಸವಿಲ್ಲದೆ ಆದಾಯ ತರುವ ಹುಣಸೆ ಬೆಳೆಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ
Published On - 2:26 pm, Fri, 23 April 21