AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜಿ ಹಾಕಿ ಮನೆಯಲ್ಲಿ ಮಲಗಿದ್ರೂ ನಾನು ಗೆಲ್ಲುತ್ತಿದ್ದೆ: ವಿಧಾನಸಭೆ ಸೋಲು ನೆನೆದ ಮಾಜಿ ಸಚಿವ ಸೋಮಣ್ಣ

ತುಮಕೂರಿನ ಮುರುಘಾ ರಾಜೇಂದ್ರ ಸಮುದಾಯ‌ ಭವನದಲ್ಲಿ ನಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಡಾ. ಪರಮೇಶ್​​ರವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಸೋಮಣ್ಣ, ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ಗೋವಿಂದರಾಜನಗರ ಕ್ಷೇತ್ರದಿಂದ ಗೆಲ್ಲುತ್ತಿದ್ದೆ ಎಂದು ಹೇಳಿದ್ದಾರೆ.

ಅರ್ಜಿ ಹಾಕಿ ಮನೆಯಲ್ಲಿ ಮಲಗಿದ್ರೂ ನಾನು ಗೆಲ್ಲುತ್ತಿದ್ದೆ: ವಿಧಾನಸಭೆ ಸೋಲು ನೆನೆದ ಮಾಜಿ ಸಚಿವ ಸೋಮಣ್ಣ
ಮಾಜಿ ಸಚಿವ ಸೋಮಣ್ಣ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Mar 16, 2024 | 3:00 PM

Share

ತುಮಕೂರು, ಮಾರ್ಚ್​​ 16: ಗೋವಿಂದರಾಜನಗರ ಕ್ಷೇತ್ರದಿಂದ ಆರಾಮಾಗಿ ಗೆಲ್ಲುತ್ತಿದ್ದೆ. ಅರ್ಜಿ ಹಾಕಿ ಮನೆಯಲ್ಲಿ ಮಲಗಿದರೂ ನಾನು ಗೆಲ್ಲುತ್ತಿದ್ದೆ. ಆದರೆ ಅಮಿತ್ ಶಾ ಹೇಳಿದ್ದಕ್ಕೆ 2 ಕಡೆ ಸ್ಪರ್ಧಿಸಿ ಸೋತಿದ್ದೇನೆ ಎಂದು ವಿಧಾನಸಭೆ ಸೋಲನ್ನು ಮಾಜಿ ಸಚಿವ ಸೋಮಣ್ಣ (V. Somanna) ನೆನೆದಿದ್ದಾರೆ. ನಗರದ ಮುರುಘಾ ರಾಜೇಂದ್ರ ಸಮುದಾಯ‌ ಭವನದಲ್ಲಿ ನಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಿಜೆಪಿ ಮುಖಂಡ ಡಾ. ಪರಮೇಶ್​​ರವರ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ನನಗಾದ ಅಪಚಾರ ನೋಡಿ MP ಟಿಕೆಟ್​ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರನ್ನ ವಾರಣಾಸಿ ಮಾಡೋದು ನನ್ನ ಗುರಿ ಎಂದ ಮಾಜಿ ಸಚಿವ ಸೋಮಣ್ಣ

ಇಂದಿರಾ ಗಾಂಧಿಗೂ ಚಿಕ್ಕಮಗಳೂರಿಗೂ ಏನು ಸಂಬಂಧ? ಆದರೂ ವಿರೋಧಿಗಳು ನನ್ನ ವಲಸಿಗ ಎಂದು ಹೇಳುತ್ತಾರೆ ಎಂದು ಪರೋಕ್ಷವಾಗಿ ಮಾಧುಸ್ವಾಮಿಗೆ ಟಾಂಗ್ ಕೊಟ್ಟರು. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಎಂದೂ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡವರಲ್ಲ. ಆದರೆ ಪ್ರಧಾನಿ ಮೋದಿಗಾಗಿ, ಈ ರಾಷ್ಟ್ರದ ಅಭಿವೃದ್ಧಿಗಾಗಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ಬೆನ್ನಲ್ಲೇ ಯಡಿಯೂರಪ್ಪ ವಿರುದ್ಧ ಮತ್ತೋರ್ವ ಟಿಕೆಟ್ ವಂಚಿತ ನಾಯಕ ಕೆಂಡಾಮಂಡಲ

ತುಮಕೂರನ್ನ ವಾರಣಾಸಿ ಮಾಡೋದು ನನ್ನ ಗುರಿ. ಹೈಕಮಾಂಡ್ ಈಗಲೂ ಹೇಳಿದರೆ ನಿರ್ಧಾರ ಬದಲಿಸುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ತೀರ್ಮಾನ ಮಾಡಲಾಗಿದೆ. ಸೋಮಣ್ಣ ಪರ ಕೆಲಸ ಮಾಡಲು ಡಾ.ಪರಮೇಶ್ ನಿರ್ಧಾರ ಮಾಡಿದ್ದಾರೆ.

ಕಾಂಗ್ರೆಸ್​ ಮುಖಂಡ ರಾಯಸಂದ್ರ ರವಿಕುಮಾರ್​​​ನ್ನು ಭೇಟಿ ಮಾಡಿದ ಸೋಮಣ್ಣ 

ಟೆಂಡರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಕಾಂಗ್ರೆಸ್​ ಮುಖಂಡ ರಾಯಸಂದ್ರ ರವಿಕುಮಾರ್​​​ನ್ನು ಸೋಮಣ್ಣ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನ ಸ್ಫೋಟ; ಎಲ್ಲೆಲ್ಲಿ?

ತುಮಕೂರು ‌ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ವಿಚಾರಿಸಿದ್ದಾರೆ.  ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಬೆಂಬಲಿಗರು ಹಲ್ಲೆ ‌ಮಾಡಿದ್ದರು. ರಾಯಸಂದ್ರ ರವಿಕುಮಾರ್ ಮತ್ತೆ ಬಿಜೆಪಿ ಸೇರ್ಪಡೆ ಚರ್ಚೆ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:55 pm, Sat, 16 March 24