ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ರಚಿಸಿರುವ ಕೆಲ ದುಷ್ಕರ್ಮಿಗಳು ಹಣ ನೀಡುವಂತೆ ಹಲವರಿಗೆ ಫೇಸ್ಬುಕ್ ಮೆಸೆಂಜರ್ ಮೂಲಕವೇ ಸಂದೇಶ ಕಳಿಸುತ್ತಿದ್ದಾರೆ.
Santhosh ಹೆಸರಿನಲ್ಲಿರುವ ಫೇಸ್ಬುಕ್ ಖಾತೆಯ ಡಿಸ್ಪ್ಲೇ ಇಮೇಜ್ನಲ್ಲಿ ಬಿ.ಎಲ್.ಸಂತೋಷ್ ಅವರ ಜನಪ್ರಿಯ ಚಿತ್ರವನ್ನೇ ಬಳಕೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಬಿ.ಎಲ್.ಸಂತೋಷ್ ಅವರದ್ದೇ ಫೇಸ್ಬುಕ್ ಖಾತೆ ಇರಬಹುದು, ಅವರೇ ಹಣ ಕೇಳುತ್ತಿರಬಹುದು ಎಂಬ ಭಾವ ಬರುವಂತೆ ಬಿಂಬಿಸಲಾಗಿದೆ. ಬಿ.ಎಲ್.ಸಂತೋಷ್ ಅವರ ಅಧಿಕೃತ ಖಾತೆಯಲ್ಲಿರುವ ಫ್ರೆಂಡ್ಸ್ಲಿಸ್ಟ್ ಗಮನಿಸಿಯೇ ಹಣ ಬೇಕೆನ್ನುವ ಸಂದೇಶ ರವಾನಿಸಲಾಗುತ್ತಿದೆ.
ಸಂತೋಷ್ ಹಣ ಕೇಳಿರುವ ಖದೀಮರು, ಅರ್ಜೆಂಟ್ ಇದೆ ಹದಿನೈದು ಸಾವಿರ ಹಣ ಕಳಿಸಿ. ಎರಡು ತಾಸಿನಲ್ಲಿ ನಿಮಗೆ ಮರಳಿ ಹಾಕುತ್ತೇನೆ ಎಂದು ಮೆಸೆಂಜರ್ನಲ್ಲಿ ಮೆಸೇಜ್ ಮಾಡಿದ್ದಾರೆ.
ಪೋನ್ ಪೇ ಇದೆಯೇ? ಗೂಗಲ್ ಪೇ ಇದೆಯೇ? ಬೇಗ ಹಣ ಕಳಿಸಿ ಎಂದೆಲ್ಲಾ ಮೆಸೇಜ್ ಮಾಡಿದ್ದಾರೆ.
ಕೆರೊಡಿ ಹೆಸರಿನಲ್ಲಿಯೂ ನಕಲಿ ಅಕೌಂಟ್
ಬಾಗಲಕೋಟೆಯ ಖ್ಯಾತ ವೈದ್ಯ ಸೋಮಶೇಖರ ಕೆರೂಡಿ ಅವರ ಹೆಸರಲ್ಲಿಯೂ ಇದೇ ರೀತಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕಾಗಿ ಗಾಳಹಾಕಲಾಗಿದೆ.
ಈ ವಿಷಯ ತಿಳಿಸಿರುವ ಮುಖಂಡ ಅಭಯ್ ಮನಗೂಳಿ, ಹಣ ಕಳಿಸುವ ಮೊದಲು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ. ಇದು ಆನ್ಲೈನ್ ಮೋಸದ ಮತ್ತೊಂದು ರೂಪ ಇರಬಹುದು ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: ಬಯಲಿಗೆ ಬಿತ್ತು ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ, ನೊಂದ ಅಧಿಕಾರಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದೇನು?
Published On - 11:46 am, Mon, 30 November 20