ಕಿರುಕುಳ ಆರೋಪ: ಮಾಗಡಿಯಲ್ಲಿ ಪತಿ ಶಾಲೆ ಮುಂದೆಯೇ ಪತ್ನಿ ಪ್ರೊಟೆಸ್ಟ್​​

Edited By:

Updated on: Dec 30, 2025 | 11:37 AM

ಮನೆಗೆ ಸೇರಿಸದ ಪತಿ ವಿರುದ್ಧ ಪತ್ನಿ ವಿಭಿನ್ನವಾಗಿ ಪ್ರತಿಭಟಿಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿಯಲ್ಲಿ ನಡೆದಿದೆ. ಪತಿ ಕಿರುಕುಳ ನೀಡಿದ್ದಲ್ಲದೆ, ಕೆಲ ದಿನಗಳಿಂದ ಮನೆಗೂ ತನ್ನನ್ನು ಸೇರಿಸುತ್ತಿಲ್ಲ. ಆತನನ್ನು ಮದುವೆಯಾಗಿರೋದು ಸಂಸಾರ ಮಾಡಲು, ಬಿಟ್ಟುಹೋಗಲು ಅಲ್ಲ. ಆತ ತನ್ನನ್ನು ಕರೆದುಕೊಂಡು ಹೋಗಬೇಕು, ನನ್ನ ಜೊತೆಗೆ ಜೀವನ ನಡೆಸಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.

ರಾಮನಗರ, ಡಿಸೆಂಬರ್​​ 30: ಕಿರುಕುಳ ನೀಡಿದ್ದಲ್ಲದೆ ಮನೆಗೆ ಸೇರಿಸದ ಆರೋಪದ ಹಿನ್ನೆಲೆ ಪತಿ ಒಡೆತನದ ಶಿಕ್ಷಣ ಸಂಸ್ಥೆಯ ಎದುರೇ ಕುಳಿತು ಪತ್ನಿ ಪ್ರತಿಭಟನೆ ನಡೆಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಾಲಕ ರೂಪೇಶ್ ಜೊತೆ ಕಳೆದ ಒಂದು ವರ್ಷದ ಹಿಂದೆ ಪ್ರೀತಿ ವಿವಾಹವಾಗಿತ್ತು. ಆದರೆ ಪತಿ ಕಿರುಕುಳ ನೀಡುತ್ತಿದ್ದು, ಕೆಲ ದಿನಗಳಿಂದ ಮನೆಗೂ ತನ್ನನ್ನು ಸೇರಿಸುತ್ತಿಲ್ಲ ಎಂದು ಪ್ರೀತಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿರುವ ಇವರು, ನ್ಯಾಯಕ್ಕಾಗಿ ಪತಿಗೆ ಸೇರಿದ ಶಾಲೆಯ ಮುಂದೆ ಪ್ರತಿಭಟನೆ ಕುಳಿತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.