ಮಂಡ್ಯ: ಮಹಾಮಾರಿ ಕೊರೊನಾ ಸಮಯದಲ್ಲಿ ಜನರ ಸಹಾಯಕ್ಕೆ ಎಂದು ಬರುವ ರಾಜಕಾರಣಿಗಳು ತಿಳಿದು ತಿಳಿಯದೆಯೇ ಜನರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ. ರಾಜಕಾರಣಿಗಳನ್ನು ನೋಡುವ ಭರದಲ್ಲಿ ಜನ ಕೊರೊನಾವನ್ನು ಮರೆತು ಸಾಮಾಜಿಕ ಅಂತರದ ಉಲ್ಲಂಘಟನೆ ಮಾಡಿ ಮುಗಿ ಬೀಳುತ್ತಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ಕ್ರೀಡಾಂಗಣದಲ್ಲಿ ಇಂದು ಇದೇ ರೀತಿಯ ಜನ ಸಾಗರ ಕಂಡು ಬಂದಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯನ್ನು ನೋಡಲು ಸಾಮಾಜಿಕ ಅಂತರ ಮರೆತು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಒಬ್ಬರ ಮೇಲೆ ಒಬ್ಬರು ಬಿದ್ದು ಮುನ್ನುಗ್ಗುತ್ತಿದ್ದಾರೆ.
ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣರಿಂದ ಹಮ್ಮಿಕೊಳ್ಳಲಾಗಿದ್ದ ಫುಡ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯನ್ನು ನೋಡಿದ ಜನ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂಕುನುಗ್ಗಲು ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಇಳಿಮುಖವಾಗುತ್ತಿದ್ದಂತೆ ಕೊರೊನಾದ ಭಯವನ್ನೇ ಮರೆತು ಅಭಿಮಾನಿಗಳು ವರ್ತಿಸಿದ್ದಾರೆ.
ಇದನ್ನೂ ಓದಿ: Viral Video: ಅಲುಗಾಡುತ್ತಿರುವ ಸೇತುವೆಯ ಮೇಲೆ ಕೋತಿಯ ಫ್ಯಾಶನ್ ಶೋ! ಗಮ್ಮತ್ತಾಗಿದೆ ವಿಡಿಯೋ ನೀವೂ ನೋಡಿ