AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಪ್ಟ್ Bas**rd ಎಂದು ಎಸ್ಆರ್ ವಿಶ್ವನಾಥ್​ಗೆ ಹೇಳಿದ ಹಳ್ಳಿ ಹಕ್ಕಿ ಹೆಚ್ ವಿಶ್ವನಾಥ್

ನನ್ನಂತಹ ಅರೆಹುಚ್ಚರಿಂದ ನೀವು ಬಿಡಿಎ ಅಧ್ಯಕ್ಷರಾಗಿದ್ದೀರಿ. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಎಷ್ಟು ದೋಚುತ್ತಿದ್ದೀರಿ. ನನ್ನ ಬಗ್ಗೆ ಮಾತನಾಡಲು ನಿನಗೆ ಏನು ಅರ್ಹತೆಯಿದೆ. ಹೌದಪ್ಪ ನಾನು ಅರೆಹುಚ್ಚ, ನಮ್ಮ ತ್ಯಾಗದಿಂದ ಅಧಿಕಾರ ಬಂತು. ನೀವು ಈಗ ಬಿಡಿಎ ಅಧ್ಯಕ್ಷನಾಗಿ ದೋಚುತ್ತಿದ್ದೀಯಾ

ಕರಪ್ಟ್ Bas**rd ಎಂದು ಎಸ್ಆರ್ ವಿಶ್ವನಾಥ್​ಗೆ ಹೇಳಿದ ಹಳ್ಳಿ ಹಕ್ಕಿ ಹೆಚ್ ವಿಶ್ವನಾಥ್
ಹೆಚ್.ವಿಶ್ವನಾಥ್​
Follow us
TV9 Web
| Updated By: ಆಯೇಷಾ ಬಾನು

Updated on:Jun 17, 2021 | 1:31 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೇರಿದೆ. ನಾಯಕರ ನಡುವೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕರಪ್ಟ್ Bas**rd ಎಂದು ಎಸ್ಆರ್ ವಿಶ್ವನಾಥ್​ಗೆ ಬೈದಿದ್ದಾರೆ. ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ದಂಗೆ ಎದ್ದು ಅಲ್ಲಿಂದ ಹೊರಬಂದೆವು. ಕಾಂಗ್ರೆಸ್, ಜೆಡಿಎಸ್ನಿಂದ 17 ಶಾಸಕರು ಹೊರಬಂದೆವು. ಬಿಜೆಪಿ ಬಂದ ಬಳಿಕ ಇಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟಿವಿ9ಗೆ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

B.S.ಯಡಿಯೂರಪ್ಪಗೆ ಸಿಎಂ ಹುದ್ದೆ ನಿಭಾಯಿಸಲು ಆಗುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾನು ಸತ್ಯ ಹೇಳುತ್ತೇನೆ, ಬೇರೆಯವರು ಹೇಳಿಕೊಳ್ಳುತ್ತಿಲ್ಲ. ಮೊನ್ನೆಯಷ್ಟೇ ನೀರಾವರಿ ಇಲಾಖೆ ಟೆಂಡರ್ ಕ್ಲಿಯರ್ ಆಗಿದೆ. 20,000 ಕೋಟಿ ರೂ.ನ ಟೆಂಡರ್‌ನಲ್ಲಿ ಕಾನೂನು ಪಾಲಿಸಿಲ್ಲ. ಇದನ್ನು ಪ್ರಶ್ನಿಸಿದರೆ ಹಣ ಕೊಡಬೇಕು ಎಂದು ಸಿಎಂ ಹೇಳ್ತಾರೆ. ಇದರ ಬಗ್ಗೆಯೂ ಅರುಣ್ ಸಿಂಗ್ ಹೇಳಬೇಕಾಗುತ್ತದೆ. ಸರ್ಕಾರದಲ್ಲಿ ಯಾವ ಸಚಿವರೂ ಸಂತೋಷವಾಗಿಲ್ಲ ಎಂದರು.

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆಯನ್ನು ವಿರೋಧಿಸಿದ್ದೆ. ಭೂಮಿ ಪರಭಾರೆಯಿಂದ ಕಿಕ್ಬ್ಯಾಕ್ ಪಡೆಯಲು ಯತ್ನ ನಡೆದಿದೆ. 10 ಪರ್ಸೆಂಟ್ ಪಡೆಯಲು ನಿರ್ಧರಿಸಿದ್ದೇವೆ ಎಂದಿದ್ದರು. ಆ ಹಣವನ್ನು ಕೇಂದ್ರಕ್ಕೆ ಕೊಡಬೇಕು ಎಂದು ಹೇಳಿದ್ದರು. ಕೇಂದ್ರದ ನಾಯಕರಿಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನನ್ನಂತಹ ಅರೆಹುಚ್ಚರಿಂದ ನೀವು ಬಿಡಿಎ ಅಧ್ಯಕ್ಷರಾಗಿದ್ದೀರಿ. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಎಷ್ಟು ದೋಚುತ್ತಿದ್ದೀರಿ. ನನ್ನ ಬಗ್ಗೆ ಮಾತನಾಡಲು ನಿನಗೆ ಏನು ಅರ್ಹತೆಯಿದೆ. ಹೌದಪ್ಪ ನಾನು ಅರೆಹುಚ್ಚ, ನಮ್ಮ ತ್ಯಾಗದಿಂದ ಅಧಿಕಾರ ಬಂತು. ನೀವು ಈಗ ಬಿಡಿಎ ಅಧ್ಯಕ್ಷನಾಗಿ ದೋಚುತ್ತಿದ್ದೀಯಾ. ಅಧ್ಯಕ್ಷನಾಗಿ ಇದುವರೆಗೆ ಎಷ್ಟು ದೋಚಿದ್ದೀಯಾ ಹೇಳಪ್ಪ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್​ಗೆ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಎಂಎಲ್​ಸಿ H.ವಿಶ್ವನಾಥ್ ಅರೆಹುಚ್ಚನಂತೆ -ಎಸ್​.ಆರ್​.ವಿಶ್ವನಾಥ್ ಎಂಎಲ್​ಸಿ H.ವಿಶ್ವನಾಥ್ ಅರೆಹುಚ್ಚನಂತೆ ಮಾತನಾಡುತ್ತಾರೆ. ರಸ್ತೆಯಲ್ಲಿ ಓಡಾಡುವ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಹೆಚ್.ವಿಶ್ವನಾಥ್ ಈ ರೀತಿ ಅಶಿಸ್ತಿನ ಹೇಳಿಕೆ ಕೊಡಬಾರದು. ಕೊರೊನಾ ವೈರಸ್​ಗಿಂತ ಹೆಚ್ಚಾಗಿ ಕೆಲವರು ಮಾತಾಡ್ತಿದ್ದಾರೆ. ಅದಕ್ಕೆ ಯಾವುದೇ ಮದ್ದಿಲ್ಲ. ಹೆಚ್​.ವಿಶ್ವನಾಥ್ ಉಂಡ ಮನೆಗೆ ದ್ರೋಹ ಬಗೆಯುತ್ತಾರೆ. ಹೆಚ್​.ವಿಶ್ವನಾಥ್​ಗೆ ಇದು ರಾಜಕೀಯದ ಕೊನೆ ಅವಕಾಶ. ಇನ್ಮುಂದೆ ವಿಶ್ವನಾಥ್​ಗೆ ಯಾವುದೇ ಪಕ್ಷ ಸದಸ್ಯತ್ವ ಕೊಡಲ್ಲ ಎಂದು ಸಿಎಂ ಭೇಟಿ ಬಳಿಕ ಶಾಸಕ ಎಸ್​.ಆರ್​.ವಿಶ್ವನಾಥ್​ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: H Vishwanath: ವಿಶ್ವನಾಥ್ ಅವರೇ ನಿಮ್ಮ ವಯಸ್ಸೆಷ್ಟು? ಹತಾಶೆಯಿಂದ ಮಾತನಾಡಬೇಡಿ: ರೇಣುಕಾಚಾರ್ಯ ವಾಗ್ದಾಳಿ

Published On - 1:17 pm, Thu, 17 June 21