ಒಂದು ಎಕರೆ ಜಾಗ ಕೊಡುತ್ತೇನೆ.. ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಿ -ಸಿದ್ದರಾಮಯ್ಯಗೆ ರೈತನ ನೇರ ಸವಾಲ್​

ರಾಮಮಂದಿರ ನಿರ್ಮಾಣಕ್ಕೆ ಒಂದು ಎಕರೆ ಜಾಗ ಕೊಡುತ್ತೇನೆ. ಸಿದ್ದರಾಮಯ್ಯ ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರೈತನೊಬ್ಬ ನೇರ ಸವಾಲು ಹಾಕಿದ್ದಾನೆ. ಬಾದಾಮಿ ಪುರಸಭೆ ಸದಸ್ಯ ಹಾಗೂ ಕೃಷಿಕರಾಗಿರುವ ಬಸವರಾಜ ಗೊರಕೊಪ್ಪ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಒಂದು ಎಕರೆ ಜಾಗ ಕೊಡುತ್ತೇನೆ.. ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಿ -ಸಿದ್ದರಾಮಯ್ಯಗೆ ರೈತನ ನೇರ ಸವಾಲ್​
ಸಿದ್ದರಾಮಯ್ಯಗೆ ರೈತನ ನೇರ ಸವಾಲ್​

Updated on: Feb 20, 2021 | 9:20 PM

ಬಾಗಲಕೋಟೆ: ರಾಮಮಂದಿರ ನಿರ್ಮಾಣಕ್ಕೆ ಒಂದು ಎಕರೆ ಜಾಗ ಕೊಡುತ್ತೇನೆ. ಸಿದ್ದರಾಮಯ್ಯ ಸ್ವಂತ ಹಣದಿಂದ ಶ್ರೀರಾಮ ಮಂದಿರ ಕಟ್ಟಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರೈತನೊಬ್ಬ ನೇರ ಸವಾಲು ಹಾಕಿದ್ದಾನೆ. ಬಾದಾಮಿ ಪುರಸಭೆ ಸದಸ್ಯ ಹಾಗೂ ಕೃಷಿಕರಾಗಿರುವ ಬಸವರಾಜ ಗೊರಕೊಪ್ಪ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಸುಪ್ರೀಂಕೋರ್ಟ್‌ ಅಯೋಧ್ಯೆಯ ಜಾಗ ಇತ್ಯರ್ಥ ಮಾಡಿದೆ. ಆದ್ರೂ ಸಿದ್ದರಾಮಯ್ಯ ಅದು ವಿವಾದಿತ ಜಾಗವೆಂದು ಹೇಳಿದ್ದಾರೆ. ಅಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲ್ಲವೆಂದು ಹೇಳಿದ್ದಾರೆ. ಹೀಗಾಗಿ, ನಾನು ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ನನಗೆ ಸೇರಿದ 80 ಲಕ್ಷ ಮೌಲ್ಯದ ಜಮೀನು ದಾನ ಮಾಡುತ್ತೇನೆ. ಬಾದಾಮಿಯ ಬನಶಂಕರಿದೇವಿ ದೇವಸ್ಥಾನ ಬಳಿಯ ಜಮೀನು ದಾನ ಮಾಡುತ್ತೇನೆ. ಸಿದ್ದರಾಮಯ್ಯ ರಾಮಮಂದಿರ ಕಟ್ಟಿಸಲಿ ಎಂದು ಬಸವರಾಜ ಸವಾಲು ಹಾಕಿದ್ದಾರೆ. ಈ ಕುರಿತು, ಟ್ವೀಟ್ ಮಾಡಿ ಸಿದ್ದರಾಮಯ್ಯಗೆ ರೈತ ನೇರ ಸವಾಲು ಹಾಕಿದ್ದಾರೆ.

ಅಂದ ಹಾಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ತವರೂರಾದ ಸಿದ್ದರಾಮನಹುಂಡಿಯಲ್ಲಿ ರಾಮ ಮಂದಿರವೊಂದರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಿಎಂ ಪುತ್ರ ಯತೀಂದ್ರ ಸಹ ಇದಕ್ಕೆ ನೆರವು ನೀಡಿದ್ದಾರೆ.

‘ನನಗೆ ಸೇರಿದ 80 ಲಕ್ಷ ಮೌಲ್ಯದ ಜಮೀನು ದಾನ ಮಾಡುತ್ತೇನೆ’

ಬಸವರಾಜ ಗೊರಕೊಪ್ಪ

ಇದನ್ನೂ ಓದಿ: Photos | ಸಿದ್ದರಾಮನಹುಂಡಿಯಲ್ಲಿ ಈ ಬಾರಿ ರಾಮನವಮಿ ಬಲುಜೋರು! ಮಾಜಿ CM ಸಿದ್ದರಾಮಯ್ಯ ಹೇಳಿದಂತೆ ಅಲ್ಲಿ ನಿರ್ಮಾಣವಾಗ್ತಿದೆ ರಾಮ ಮಂದಿರ..

Published On - 9:14 pm, Sat, 20 February 21