ಬೀದರ್: ಆತ ಅಗ್ರಿಕಲ್ಚರ್ ಇಂಜಿನಿಯರಿಂಗ್ ಪದವಿದರ, ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಯಲ್ಲಿ(Agriculture) ತೋಡಗಿದ್ದಾರೆ. ಎಲ್ಲ ರೈತರ ಹಾಗೆ ಕೃಷಿ ಮಾಡುವ ಬದಲು ಇವರು ಸ್ವಲ್ಪ ವಿಭಿನ್ನವಾಗಿ ಯೋಚಿಸಿ ಕೃಷಿ ಮಾಡುತ್ತಿದ್ದಾರೆ. ಅತಿವೃಷ್ಟಿಗೆ, ಅನಾವೃಷ್ಟಿಗೆ ಶೆಡ್ಡು ಹೊಡೆದು, ಬಾವಿ( well), ಬೋರವೆಲ್ನ ನೀರು ಕೈಕೊಟ್ಟರು, ನೀರಾವರಿ ಹೇಗೆ ಮಾಡಬಹುದೆಂದು ಈ ರೈತ (Farmer) ತೋರಿಸಿಕೊಟ್ಟಿದ್ದಾರೆ.
ಬೀದರ್ ಜಿಲ್ಲೆಯಲ್ಲಿಯೇ ಕಮಲನಗರ ತಾಲೂಕು ಅತೀ ಹಿಂದೂಳಿದ ತಾಲೂಕು, ಇಡೀ ಜಿಲ್ಲೆಗೆ ಹೋಲಿಸಿದರೆ ಈ ತಾಲೂಕಿನಲ್ಲಿ ಮಳೆ ಅತ್ಯಂತ ಕಡಿಮೆಯಾಗುತ್ತದೆ. ಬೇಸಿಗೆ ಆರಂಭವಾದರೆ ಸಾಕು ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗುತ್ತದೆ. ಜೊತೆಗೆ ಶೇಕಡಾ 50 ಬಾವಿ, ಬೋರ್ ವೆಲ್ನಲ್ಲಿ ನೀರು ಬತ್ತಿಹೋಗುತ್ತದೆ. ಇಂತಹ ಸಮಯದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಕೊಡಲಾಗದೆ. ಬೆಳೆ ಬಾಡಿ ಹೋಗಿ ರೈತ ನಷ್ಟಕ್ಕೊಳಗಾಗುತ್ತಾರೆ.
ಇದಕ್ಕೆಲ್ಲ ಅಂತ್ಯ ಹಾಕಬೇಕು. ಎಂತಹ ಭೀಕರ ಬರಗಾದಲ್ಲಿಯೂ ಹತ್ತಾರು ಎಕರೆಯಷ್ಟು ಜಮೀನಿಗೆ ನೀರು ಕೊಡುವ ಉದ್ದೇಶದಿಂದ ಆ ರೈತ ತನ್ನ ಹೊಲದಲ್ಲಿ ಬೃಹತ್ ನೀರಿನ ಹೊಂಡವನ್ನ ನಿರ್ಮಾಣ ಮಾಡಬೇಕು ಎಂದು ನೀರಿನ ಹೊಂಡ ಮಾಡಿದ್ದಾರೆ. ಈ ಹೊಂಡದ ಮೂಲಕ 9 ಎಕರೆಯಷ್ಟು ಜಮೀನಿಗೆ ನೀರು ಕೊಡುವಷ್ಟು ನೀರನ್ನ ಈ ರೈತ ಸಂಗ್ರಹಿಸಕೊಂಡಿದ್ದಾರೆ.
ನೀರಿನ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದ ತಾಲೂಕಿನ ತೋರಣ ಗ್ರಾಮದ ರೈತರೊಬ್ಬರಿಗೆ ಕೃಷಿ ಹೊಂಡ ನೆರವಿಗೆ ಬಂದಿದೆ. ನೀರಾವರಿ ಮಾಡಿ ಯಶಸ್ವಿ ರೈತ ಆಗಬೇಕೆಂದು ಕನಸು ಕಂಡ ರೈತ ಬಾಲಾಜಿ ತಮ್ಮ ಹೊಲದಲ್ಲಿ 15 ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ. ಆದರೂ ಛಲ ಬಿಡದೆ ಕೃಷಿ ಹೊಂಡ ನಿರ್ಮಿಸುವ ಹೊಸ ಕೆಲಸಕ್ಕೆ ಕೈ ಹಾಕಿದರು. ಇದಕ್ಕೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಕಾರವೂ ದೊರೆತು, ಈಗ ಅವರು ತಮ್ಮ ಹೊಲದಲ್ಲಿ ಅದ್ಭುತ ಕೃಷಿ ಹೊಂಡ ನಿರ್ಮಿಸಿದ್ದಾರೆ.
ಈಗ ಆರು ತಿಂಗಳಿಗೆ ಸಾಕಾಗುಷ್ಟು ನೀರಿದ್ದು, ವಿವಿಧ ಬಗೆಯ ತರಕಾರಿ, ತೈವಾನ್ ಪಿಂಕ್ ಪೇರಲೆ ಬೆಳೆಯುತ್ತಿದ್ದಾರೆ. 2 ಎಕರೆ ಪ್ರದೇಶದಲ್ಲಿ ಎರಡು ಸಾವಿರ ತೈವಾನ್ ಪೀಕ್ ಸಿಬೆ ಬೆಳೇಸಿದ್ದು, ಸೀಬೆ ಪ್ರತಿದಿವೂ ಕೂಡ ಆದಾಯ ತಂದುಕೊಡುತ್ತಿದ್ದು ತಮ್ಮ ಕೃಷಿ ಕಾಯಕದಲ್ಲಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ನೆರವಿನಿಂದ 10 ಲಕ್ಷ ಖರ್ಚು ಮಾಡಿ ದೊಡ್ಡ ಕೃಷಿ ಹೊಂಡ ನಿರ್ಮಾಣ ಆಗಿದೆ. 250 ಅಡಿ ಉದ್ದ, 125 ಅಡಿ ಅಗಲ ಹಾಗೂ 30 ಅಡಿ ಆಳದ ಈ ಕೃಷಿ ಹೊಂಡದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಅತ್ಯಂತ ಗುಣಮಟ್ಟದ 500 ಮೈಕ್ರಾನ್ ಸಾಮರ್ಥ್ಯದ ಪಾಲಿಥಿನ್ ಬಳಸಲಾಗಿದೆ. 10 ಅಡಿ ಎತ್ತರಲ್ಲಿ ನಿರ್ಮಿಸಿದ ಈ ಹೊಂಡ ಅತ್ಯಂತ ಸುರಕ್ಷಿತವಾಗಿದ್ದು, ಮುಂದಿನ 8-10 ವರ್ಷಗಳ ಕಾಲ ನೀರು ಸಂಗ್ರಹಿಸಿಡಲು ತುಂಬ ಅನುಕೂಲಕರವಾಗಲಿದೆ ಎಂದು ರೈತ ಬಾಲಾಜಿ ಅಭಿಪ್ರಾಯಪಟ್ಟಿದ್ದಾರೆ.
ಅಗ್ರಿಕಲ್ಚರ್ ಇಂಜಿನಿಯರಿಂಗ್ ಪದವೀಧರನಾದ ಇವರು ತಮ್ಮ ತಂದೆ ನೋಡಿಕೊಳ್ಳುತ್ತಿದ್ದ ಕೃಷಿ ಕಾಯಕ ಜವಾಬ್ದಾರಿ ಈಗ ಇವರ ಹೆಗಲೆ ಮೇಲೆ ಬಿದ್ದಿದೆ. ಏನಾದರೂ ಸಾಧಿಸಿ ತೋರಿಸಬೇಕು ಎಂಬ ಬಯಕೆ ಇವರದ್ದಾಗಿದೆ. ಎಲ್ಲರಂತೆ ಕೃಷಿ ಮಾಡಿ ನಷ್ಟ ಅನುಭವಿಸುವುದರ ಬದಲು ಕೃಷಿಯಲ್ಲಿಯೇ ಏನಾದರೂ ವಿಭಿನ್ನವಾಗಿ ಕೃಷಿ ಮಾಡಿ ಅದರಲ್ಲಿ ಲಾಭ ಗಳಿಸಬೇಕು ಎಂದು ಯೋಚಿಸಿದ್ದಾರೆ. ಆದರೆ ಇಲ್ಲಿನ ಭೂಮಿಯಲ್ಲಿ ಎಷ್ಟೇ ಆಳದಲ್ಲಿ ಬೋರ್ ವೆಲ್ ಕೊರೆದರೂ ಕೂಡಾ ಒಂದು ಇಂಚು ಮಾತ್ರ ನೀರು ಬರುತ್ತದೆ. ಜೊತೆಗೆ ಬೇಸಿಗೆಯಲ್ಲಿ ಆ ಬೋರ್ ವೆಲ್ಗಳ ನೀರು ಬತ್ತುತ್ತವೆ. ಹೀಗಾಗಿ ಬೆಸಿಗೆಯಲ್ಲಿಯೂ ನೀರಾವರಿ ಹೇಗೆ ಮಾಡೋದು ಅಂತಾ ಯೋಚಿಸಿ ತಮ್ಮ ಹೊಲದಲ್ಲಿ ಒಂದು ಎಕರೆಯಷ್ಟು ಬೃಹತ್ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ.
ಈ ಕೃಷಿ ಹೊಂಡ 1 ಕೋಟಿ 25 ಲಕ್ಷ ರೂ. ಲೀಟರ್ ನೀರು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಇಷ್ಟು ನೀರು ಇಲ್ಲಿ ಸಂಗ್ರಹಿಸಿಟ್ಟರೆ ಬೇಸಿಗೆಯಲ್ಲಿ 12 ಎಕರೆಯಷ್ಟು ಜಮೀನಿಗೆ ಈ ನೀರನ್ನ ಕೊಟ್ಟು ಬೆಳೆ ಬೆಳೆಯಬಹುದು. ಇನ್ನೂ ಈ ನೀರನ್ನ ಕೃಷಿಗಷ್ಟೇ ಬಳಕೆ ಮಾಡುತ್ತಿಲ್ಲ. ಆ ನೀರಿನಲ್ಲಿ ಮೀನು ಸಾಕಾಣಿಕೆಯನ್ನೂ ಕೂಡಾ ಮಾಡುತ್ತಿದ್ದಾರೆ. ಈಗ ಸದ್ಯ 40 ಸಾವಿರ ಮೀನುಗಳನ್ನ ಸಾಕಿದ್ದಾರೆ. ಒಂದು ಕೆಜಿ 100 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನವೂ 10-20 ಕೆಜಿಯಷ್ಟು ಮೀನು ಮಾರಾಟವಾಗುತ್ತಿದ್ದು, ಇದರಿಂದ ಇವರು ಚೆನ್ನಾಗಿದ್ದಾರೆಂದು ಬಾಲಾಜಿ ಸ್ನೇಹಿತರಾದ ಗೋರಕ್ ಜಾದವ್ ಹೇಳಿದ್ದಾರೆ.
ತಾಲೂಕಿನ ಬಹುಭಾಗ ಭೂಮಿ ಮಸಾರಿ, ಎರಿ ಪ್ರದೇಶ ಹೊಂದಿದ್ದು, ಬಹುತೇಕ ರೈತರು ಬಯಲು ಸೀಮೆಗೆ ಹೊಂದಿಕೊಂಡಿದ್ದು, ಮಳೆಯಾಶ್ರಿತ ಬೆಳೆಗಳ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ವರ್ಷದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ರೈತರು ದಾರಿ ಕಾಣದೇ ಚಿಂತೆಗೀಡಾಗಿದ್ದರು. ಆದರೆ ಬರಗಾಲದಲ್ಲೂ ಅಂತರ್ಜಲ ಮಟ್ಟ ಕುಸಿತ, ಮಳೆ ಅಭಾವದಿಂದ ತಪ್ಪಿಸಿಕೊಳ್ಳಲು ಸರಕಾರ ರೂಪಿಸಿದ ಕೃಷಿ ಭಾಗ್ಯ, ರೈತರ ಭಾಗ್ಯದ ಬಾಗಿಲು ತೆಗೆದಿದೆ. ಕೃಷಿ ಹೊಂಡದ ಮೂಲಕ ಕೃಷಿಯಲ್ಲಿ ಬದಲಾವಣೆ ಬಯಸಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ:
ಬೀದರ್: ಅಂತರ್ಜಲ ಹೆಚ್ಚಿಸಿದ ಐದು ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳು ರೈತರ ಮೊಗದಲ್ಲಿ ಮಂದಹಾಸ
ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ
Published On - 7:02 pm, Sun, 20 March 22