ಈ ಹಿಂದೆಯೇ ರಾಜೀವ್ ಗಾಂಧಿ ದೂರದರ್ಶನದ ಮೂಲಕ ರಾಮಾಯಣ, ಮಹಾಭಾರತ ತೋರಿಸಿದ್ದಾರೆ; ಬಿಜೆಪಿಗೆ ಡಿಕೆಶಿ ಟಾಂಗ್

| Updated By: ಆಯೇಷಾ ಬಾನು

Updated on: Mar 20, 2022 | 7:56 PM

ಪ್ರತಿ ಭಾನುವಾರ ದೇಶವೇ ಟಿವಿ ಮುಂದೆ ರಾಮಾಯಣ ಧಾರವಾಹಿಗಾಗಿ ಕಾದು ಕುಳಿತಿರುತ್ತಿತ್ತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಧಾರವಾಹಿ ಪ್ರಸಾರವಾಗಿತ್ತು. ಬಿಜೆಪಿಗರ ಜೈ ಶ್ರೀರಾಮ್ ಘೋಷಣೆಗೆ ರಾಮಾಯಣದ ಮೂಲಕ ಡಿಕೆ ಶಿವಕುಮಾರ್ ಉತ್ತರ ನೀಡಿದ್ದಾರೆ.

ಈ ಹಿಂದೆಯೇ ರಾಜೀವ್ ಗಾಂಧಿ ದೂರದರ್ಶನದ ಮೂಲಕ ರಾಮಾಯಣ, ಮಹಾಭಾರತ ತೋರಿಸಿದ್ದಾರೆ; ಬಿಜೆಪಿಗೆ ಡಿಕೆಶಿ ಟಾಂಗ್
ಡಿಕೆ ಶಿವಕುಮಾರ
Follow us on

ಮೈಸೂರು: ಬಿಜೆಪಿ(BJP) ಹಿಂದುತ್ವ ತಂತ್ರಕ್ಕೆ ಕಾಂಗ್ರೆಸ್ನಿಂದಲೂ(Congress) ಕೌಂಟರ್ ನೀಡಲಾಗಿದೆ. ಮತ್ತೆ ರಾಮನಾಮದ ಮೂಲಕವೇ ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ಹಿಂದೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿ ನೆನಪಿಸಿಕೊಂಡಿದ್ದಾರೆ.

ಪ್ರತಿ ಭಾನುವಾರ ದೇಶವೇ ಟಿವಿ ಮುಂದೆ ರಾಮಾಯಣ ಧಾರವಾಹಿಗಾಗಿ ಕಾದು ಕುಳಿತಿರುತ್ತಿತ್ತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಧಾರವಾಹಿ ಪ್ರಸಾರವಾಗಿತ್ತು. ಬಿಜೆಪಿಗರ ಜೈ ಶ್ರೀರಾಮ್ ಘೋಷಣೆಗೆ ರಾಮಾಯಣದ ಮೂಲಕ ಡಿಕೆ ಶಿವಕುಮಾರ್ ಉತ್ತರ ನೀಡಿದ್ದಾರೆ. ಈ ಹಿಂದೆ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ವೇಳೆ ಜೈ ಶ್ರೀರಾಮ್ ಎಂದಿದ್ದ ಡಿಕೆಶಿ ಈಗ ಮತ್ತೆ ರಾಮನಾಮದ ಮೂಲಕವೇ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಈ ಹಿಂದೆಯೇ ರಾಜೀವ್ ಗಾಂಧಿ ರಾಮಾಯಣ, ಮಹಾಭಾರತ ತೋರಿಸಿದ್ದಾರೆ. ದೂರದರ್ಶನದ ಮೂಲಕ ದೇಶದ ಜನರಿಗೆ ತಲುಪಿಸಿದ್ದಾರೆ. ನಾವು ಸಹ ಹಿಂದೂಗಳೇ ಎಂದು ಭಗವದ್ಗೀತೆಯ ಯದಾ ಯದಾ ಹಿ ಧರ್ಮಸ್ಯ ಶ್ಲೋಕದ ಮೂಲಕ ಬಿಜೆಪಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಭಗವದ್ಗೀತೆಯನ್ನು ಬರೀ ಶಿಕ್ಷಣದಲ್ಲಿ ಮಾತ್ರವಲ್ಲ ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್ ಎಂದಿದ್ದಾರೆ.

ಇನ್ನು ‘ಮುಂದೊಂದು ದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜವಾಗಬಹುದು’ ಎಂಬ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಬಿಜೆಪಿಯಲ್ಲಿ ಯಾರು, ಏನು ಅಂತ ಗೊತ್ತಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ.  ಸಚಿವರೊಬ್ಬರ ಹೇಳಿಕೆಗೆ ಹೋರಾಟ ಮಾಡಿದ್ದೆವು. ಈ ಬಗ್ಗೆ ನಡ್ಡಾ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ಮಾತನಾಡುವವರು ರಾಷ್ಟ್ರ ದ್ರೋಹಿಗಳು. ಜನರು ದಡ್ಡರಲ್ಲ, ಈ ರೀತಿಯ ಭಾವನಾತ್ಮಕ ಮಾತುಗಳಿಗೆ ಮರಳಾಗುವುದಿಲ್ಲ ಎಂದಿದ್ದಾರೆ.

ಜನರ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗ್ತೇವೆ
ಬಿಜೆಪಿ ಭಾವನಾತ್ಮಕ ಸಿದ್ದಾಂತದ ಮೇಲೆ ಹೋಗುತ್ತದೆ. ನಾವು ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನರ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆಗೆ ಹೋಗ್ತೇವೆ. ಇಂದು ಕಬ್ಬಿಣದ ಬೆಲೆ ಟನ್‌ಗೆ 1 ಲಕ್ಷ ರೂಪಾಯಿ ಆಗಿದೆ. ಸಿಮೆಂಟ್ ದರ 450 ರೂ. ಆಗಿದೆ. ಆದ್ರೆ ನಮ್ಮ ಶೋಭಕ್ಕ ನೋಡಿದ್ರೆ ಏನೇನೋ ಹೇಳುತ್ತಾರೆ. ಮೊದಲು ರೈತರಿಗೆ ಬೆಂಬಲ‌ ಬೆಲೆ ಕೊಡಕ್ಕಾ. ರಾಗಿ ಖರೀದಿ ಮಾಡಿಸು ರೈತರನ್ನ ಮೊದಲು ಉಳಿಸಕ್ಕಾ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು ಡಿಕೆಶಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ನಿರ್ದೇಶಕರನ್ನು ಭೇಟಿ ಮಾಡಿ ವಿಶೇಷ ಕೋರಿಕೆ ಇಟ್ಟ ಅಲ್ಲು ಅರ್ಜುನ್

ಉಕ್ರೇನ್​ ನಿರಾಶ್ರಿತರ ಮಕ್ಕಳೊಂದಿಗೆ ಆಟವಾಡಿದ ಸ್ಲೋವಾಕ್ ಪೊಲೀಸ್ ಅಧಿಕಾರಿಗಳು: ವಿಡಿಯೋ ವೈರಲ್​

Published On - 5:37 pm, Sun, 20 March 22